ಮುಂದಿನ ಕೋವಿಡ್-19 ರೂಪಾಂತರ ಸಾಂಕ್ರಾಮಿಕ ಮಾತ್ರವಲ್ಲ ಮಾರಣಾಂತಿಕವೂ ಆಗಿರಲಿದೆ ಎಂದ WHO

Suvarna News   | Asianet News
Published : Feb 09, 2022, 04:16 PM IST
ಮುಂದಿನ ಕೋವಿಡ್-19 ರೂಪಾಂತರ ಸಾಂಕ್ರಾಮಿಕ ಮಾತ್ರವಲ್ಲ ಮಾರಣಾಂತಿಕವೂ ಆಗಿರಲಿದೆ ಎಂದ WHO

ಸಾರಾಂಶ

ಒಮಿಕ್ರಾನ್ ಗಿಂತಲೂ ವೇಗವಾಗಿ ಹರಡಲಿದೆ ಮುಂಬರುವ ಕೋವಿಡ್-19 ವೈರಸ್ ಬಹುಶಃ ಹಿಂದಿನ ಎಲ್ಲಾ ವೈರಸ್ ಗಿಂತಲೂ ಇದು ಮಾರಣಾಂತಿಕವೂ ಆಗಿರಬಹುದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಡಾ. ಮಾರಿಯಾ ವ್ಯಾನ್ ಕೆರ್ಕೋವ್ ಎಚ್ಚರಿಕೆ  

ನವದೆಹಲಿ (ಫೆ. 9): ಕೊರೋನಾ ವೈರಸ್ ನ ಆತಂಕದಿಂದ ಜಗತ್ತು ಸ್ವಲ್ಪ ಮುಕ್ತವಾಗುತ್ತಿರುವ ಹೊತ್ತಿಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ (World Health Organization ) ಸಾಂಕ್ರಾಮಿಕ ರೋಗಶಾಸ್ತ್ರಜ್ಞೆ ಹಾಗೂ ತಾಂತ್ರಿಕ ಸಮಿತಿಯ ಲೀಡ್ ಆಗಿರುವ ಮಾರಿಯಾ ಡಾ.  ವ್ಯಾನ್ ಕೆರ್ಕೋವ್ (Dr Maria Van Kerkhove) ಇತ್ತೀಚೆಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ದೊಡ್ಡ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಕೊರೋನಾ ವೈರಸ್ (Coronavirus)ಸಾಂಕ್ರಾಮಿಕವನ್ನು ಈ ಹಂತದಲ್ಲಿ ಮುಗಿದಿದೆ ಎಂದು ಹೇಳಲು ಆಗುವುದಿಲ್ಲ. ಭವಿಷಷ್ಯದಲ್ಲಿರುವ ಬರಲಿರುವ ಒಂದು ರೂಪಾಂತರ ಒಮಿಕ್ರಾನ್ ಗಿಂತಲೂ ಹೆಚ್ಚಿನ ವೇಗದಲ್ಲಿ ಹರಡುವ ಹಾಗೂ ಹಿಂದಿನೆಲ್ಲಾ ಕೊರೋನಾ ವೈರಸ್ ಗಿಂತಲೂ ಮಾರಣಾಂತಿಕವಾಗಿರಲಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ (Inia) ಈಗಾಗಲೇ ಒಮಿಕ್ರಾನ್ (Omicron)ರೂಪಾಂತರದ ಅಪಾಯ ಕಡಿಮೆ ಇರುವುದು ಮಾತ್ರವಲ್ಲದೆ, ಕೇಸ್ ಗಳ ಸಂಖ್ಯೆಯುಲ್ಲೂ ಗಣನೀಯವಾಗಿ ಇಳಿಕೆಯಾಗುತ್ತಿದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ಕೋವಿಡ್ ನಿಯಮಾವಳಿಗಳನ್ನು ತೆಗೆದು ಹಾಕಲಾಗಿದೆ. ಕರ್ನಾಟಕದಲ್ಲಿ (Karnataka) ಈಗಾಗಲೇ ಸಂಪೂರ್ಣ ನಿಯಮವನ್ನು ತೆಗೆದುಹಾಕಲಾಗಿದ್ದು, ಜನರಿಗೆ ಮುಕ್ತವಾಗಿ ಸಂಚರಿಸುವ ಅವಕಾಶ ನೀಡಲಾಗಿದೆ. ಇದರ ನಡುವೆ ಡಬ್ಲ್ಯುಎಚ್ ಓ ನೀಡಿರುವ ಈ ಎಚ್ಚರಿಕೆ ಆತಂಕಕ್ಕೆ ಕಾರಣವಾಗಿದೆ.

"ಮುಂದಿನ ಕೋವಿಡ್-19 ರೂಪಾಂತರವು ಸಾಕಷ್ಟು ಸದೃಢವಾಗಿರಲಿದೆ ಹಾಗೂ ಹೆಚ್ಚಿನ ಸಾಂಕ್ರಾಮಿಕವಾಗಿ ಇರುವುದಂತೂ ನಿಜ. ಯಾಕೆಂದರೆ, ಪ್ರಸ್ತುತ ಇರುವ ವೈರಸ್ ನ ಮಾದರಿಯನ್ನು ಹಿಂದಿಕ್ಕಬೇಕಾದಲ್ಲಿ ಇನ್ನಷ್ಟು ಹೆಚ್ಚಿನ ಸಾಂಕ್ರಾಮಿಕವಾಗಿರಬೇಕಾಗುತ್ತದೆ. ಆದರೆ, ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಭವಿಷ್ಯದಲ್ಲಿ ಬರುವ ವೈರಸ್ ಗಳು ಬಹುತೇಕವಾಗಿ ಮಾರಣಾಂತಿಕವಾಗಿಯೇ ಇರಲಿದೆ' ಎಂದು  ವ್ಯಾನ್ ಕೆರ್ಕೋವ್ ಹೇಳಿದ್ದಾರೆ.
 


ಮುಂದಿನ ರೂಪಾಂತರವು ಬಹಳ ಸುಲಭವಾಗಿ ರೋಗನಿರೋಧಕ ಶಕ್ತಿಯನ್ನು ತಪ್ಪಿಸುತ್ತದೆ, ಲಸಿಕೆಗಳನ್ನು ಕಡಿಮೆ ಪರಿಣಾಮಕಾರಿಯಾಗಿಸುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಆದಾಗ್ಯೂ, ಓಮಿಕ್ರಾನ್ ತರಂಗದ ಸಮಯದಲ್ಲಿ ಪ್ರದರ್ಶಿಸಿದಂತೆ, ತೀವ್ರವಾದ ಅನಾರೋಗ್ಯ ಮತ್ತು ಸಾವಿನಿಂದ ರಕ್ಷಿಸುವ ಲಸಿಕೆಯನ್ನು ಪಡೆಯುವ ಅನಿವಾರ್ಯತೆಯನ್ನು ಈ ಬಾರಿ ಮತ್ತೆ ಹೆಚ್ಚಾಗಲಿದೆ ಎಂದಿದ್ದಾರೆ.
"ಸರಿಯಾದ ಹೊಂದಾಣಿಕೆಯೊಂದಿಗೆ ಕೋವಿಡ್ -19 ರ ಪ್ರಸರಣವು ಕಡಿಮೆ ಇರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಆದರೆ ಆ ಪರಿಚಲನೆಗಳಲ್ಲಿಯೂ ಸಹ, ಲಸಿಕೆಯಿಂದ ರಕ್ಷಿಸಲ್ಪಡದ ಜನರಲ್ಲಿ ಅಥವಾ ಕ್ಷೀಣಿಸುತ್ತಿರುವ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಉಲ್ಬಣಗಳು ಉಂಟಾಗುತ್ತವೆ"ಡಾ ವ್ಯಾನ್ ಕೆರ್ಕೋವ್ ಹೇಳಿದ್ದಾರೆ.

 Covid Crisis: 1.07 ಲಕ್ಷ ಹೊಸ ಕೋವಿಡ್‌ ಕೇಸು: 1 ತಿಂಗಳ ಕನಿಷ್ಠ
ಭಾರತದಲ್ಲಿ 2020ರ ಅಕ್ಟೋಬರ್ ನಲ್ಲಿ ಮೊದಲ ಬಾರಿಗೆ ಡೆಲ್ಟಾ ಮಾದರಿಯ (Delta Variant) ಕೊರೋನಾವೈರಸ್ ಕಂಡುಬಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಇದನ್ನು ವೇರಿಯಂಟ್ ಆಫ್ ಕನ್ಸರ್ನ್ ಎಂದು ಹೇಳಲಾಗಿತ್ತು. ಆಲ್ಫಾ (Alpha  Variant)ಮಾದರಗಿಂತ ಶೇ. 50ರಷ್ಟು ಹೆಚ್ಚಿನ ವೇಗದಲ್ಲಿ ಡೆಲ್ಟಾ ಪ್ರಸಾರವಾಗಿತ್ತು. ಆಲ್ಫಾ ಮಾದರಿಯ ಮೂಲ ಕೊರೋನಾವೈರಸ್ ಗಿಂತ ಶೇ. 50ರಷ್ಟು ಹೆಚ್ಚಿನ ವೇಗದಲ್ಲಿ ಪ್ರಸಾರವಾಗಿತ್ತು. ಅಂದಾಜು ಆರು ತಿಂಗಳ ಕಾಲ ದೇಶವನ್ನು ಕಾಡಿದ್ದ ಡೆಲ್ಟಾ ರೂಪಾಂತರದಿಂದ ದೇಶದಲ್ಲಿ ಸಾಕಷ್ಟು ಸಾವುಗಳು ಆಗಿದದ್ದವು. 2021ರ ಜೂನ್ ನಲ್ಲಿ ಮತ್ತೊಮ್ಮೆ ಇಂಗ್ಲೆಂಡ್, ಇಸ್ರೇಲ್, ರಷಯಾ, ಆಸ್ಟ್ರೇಲಿಯಾ ಹಾಗೂ ವಿಶ್ವದ ಇತರ ಭಾಗಗಳಲ್ಲಿ ಕೋವಿಡ್-19 ವೈರಸ್ ಪ್ರಕರಣಗಳಲ್ಲಿ ಏರಿಕೆಯಾಗಿತ್ತು.

Covid Crisis: ಸಿಲಿಕಾನ್ ಸಿಟಿಯಲ್ಲಿ ಕೊರೋನಾ ಮತ್ತಷ್ಟು ಇಳಿಕೆ
2021ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ರೂಪಾಂತರವನ್ನು ಕೂಡ ವಿಶ್ವ ಆರೋಗ್ಯ ಸಂಸ್ಥೆ ವೇರಿಯಂಟ್ ಆಫ್ ಕನ್ಸರ್ನ್ ಎಂದು ಪರಿಗಣನೆ ಮಾಡಿತ್ತು. ಕೇವಲ ಅಲ್ಪ ಅವಧಿಯಲ್ಲಿಯೇ ಡೆಲ್ಟಾಗಿಂತ ಹೆಚ್ಚಿನ ವೇಗದಲ್ಲಿ ಇದು ಪ್ರಸಾರವಾಗಿತ್ತು. ಲಸಿಕೆಗಳನ್ನು ಪಡೆದುಕೊಂಡವರಲ್ಲೂ ಒಮಿಕ್ರಾನ್ ವೈರಸ್ ಕಾಣಿಸಿಕೊಂಡಿತ್ತಾರೂ, ಮಾರಣಾಂತಿಕವಾಗಿರಲಿಲ್ಲ.  ಈ ನಡುವೆ ದಕ್ಷಿಣ ಆಫ್ರಿಕಾದ ಸ್ಟೀವ್ ಬಿಕೊ ಅಕಾಡೆಮಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್‌ನಲ್ಲಿ ನಡೆಸಿದ ಅಧ್ಯಯನವು ಕೋವಿಡ್ -19 ಮುಂದಿನ ದಿನಗಳಲ್ಲಿ ಬಹುತೇಕವಾಗಿ ಕೊನೆಗೊಳ್ಳಲಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತನ್ನ ವಾಯುಪ್ರದೇಶ ಹಠಾತ್ ಮುಚ್ಚಿದ ಇರಾನ್: ಭಾರತ ಅಮೆರಿಕಾಗೆ ನಡುವೆ ಸಂಚರಿಸುತ್ತಿದ್ದ ಹಲವು ವಿಮಾನಗಳ ಹಾರಾಟ ರದ್ದು
ಅಮೆರಿಕ ಬೆದರಿಕೆ ಬೆನ್ನಲ್ಲೇ ಇರಾನ್‌ ಸಮರಾಭ್ಯಾಸ