ವಿಶ್ವವನ್ನೇ ನಡುಗಿಸುತ್ತಿರುವ ಕರೋನಾಕ್ಕೆ ಹೊಸ ಪಟ್ಟ!

By Suvarna NewsFirst Published Mar 12, 2020, 12:07 AM IST
Highlights

ಮಾರಕ ಕರೋನಾಗೆ ಹೊಸ ಖ್ಯಾತಿ/ ವಿಶ್ವ ಸಾಂಕ್ರಾಮಿಕ ಸೋಂಕು ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ/ ಮೂರು ತಿಂಗಳ ಹಿಂದೆ ಏನು ಎಂದು ಗೊತ್ತಿರದ ಮಾರಕ ಇದೀಗ ಪ್ರಪಂಚಕ್ಕೆ ಮಾರಕ

ವಿಶ್ವ ಆರೋಗ್ಯ ಸಂಸ್ಥೆ ಕರೋನಾ ವೈರಸ್ ಕೋವಿಡ್-19 ನ್ನು ವಿಶ್ವ ಸಾಂಕ್ರಾಮಿಕ ರೋಗದ ಪಟ್ಟಿಗೆ ಸೇರಿಸಿದೆ.  ಮೂರು ತಿಂಗಳ ಹಿಂದೆ ಏನು ಎಂದು ಗೊತ್ತಿರದ ಕರೋನಾ ಇದೀಗ ವಿಶ್ವದ ಸಾಂಕ್ರಾಮಿಕ ಎಂಬ ಬೇಡದ ಪಟ್ಟ ಪಡೆದುಕೊಂಡಿದೆ. ಅತಿ ತೀವ್ರವಾಗಿ ಹರಡಿದ ವೈರಸ್ 121,000 ಜನರಿಗೆ ಕಾಡಿದೆ. ಏಷ್ಯಾ, ಮಧ್ಯ ಪ್ರಾಚ್ಯ, ಯುರೋಪ್ ಮತ್ತು ಅಮೆರಿಕವನ್ನು ಕಾಡಿದೆ.

ಕಳೆದ ಎರಡು ವಾರದಲ್ಲಿ ಕರೋನಾ ಆರ್ಭಟ ಮತ್ತಷ್ಟು ಜೋರಾಗಿದೆ.  ಹುಟ್ಟಿಕೊಂಡ ಚೀನಾದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣವಾದರೆ ಕರೋನಾ ಪೀಡಿತ ದೇಶಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಭಾರತವೂ ಕರೋನಾ ಸೋಂಕಿತರಿಗೆ ನೆಲೆಯಾಗಿಹೋಗಿದೆ.

ದೇವರಿಗೂ ಕರೋನಾ ನಿರ್ಬಂಧ

ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಜನರಲ್ ಡಾ. ಟೆಡೋರ್ಸ್ ಅಧಾನೋಮ್ ಘೆಬ್ರೆಯುಸಿಯಸ್ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ.  ಯಾವೆಲ್ಲ ದೇಶಗಳು ಕರೋನಾ ಕಂಟಕಕ್ಕೆ ಒಳಗಾಗಿವೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ನಾವು ಎಲ್ಲ ದೇಶಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದ ನಂತರವೇ ಇದನ್ನು ವಿಶ್ವ ಸಾಂಕ್ರಾಮಿಕ ಸೋಂಕು ಎಂದು ಘೋಷಣೆ ಮಾಡಿದ್ದೇವೆ ಎಂದು ಟೆಡೋರ್ಸ್ ತಿಳಿಸಿದ್ದಾರೆ.

click me!