ಜನ್ಮಕ್ಕಿಷ್ಟು.. ಭೂಮಿ ಮೇಲಿದ್ದ ಒಂದೇ ಒಂದು ಬಿಳಿ ಹೆಣ್ಣು ಜಿರಾಫೆಯನ್ನು ಕೊಂದು ತಿಂದ ಮಾನವ!

By Suvarna NewsFirst Published Mar 11, 2020, 11:35 PM IST
Highlights

ಬಿಳಿ ಜಿರಾಫೆ ಸಂತತಿಗೆ ಅಂತ್ಯ ಹಾಡಿದ ಮಾನವ/ ಹೆಣ್ಣು ಜಿರಾಫೆಯನ್ನು ಕೊಂದು ತಿಂದ/ ಆಫ್ರಿಕಾದ ಘಟನೆಗೆ ಪ್ರಪಂಚದಾದ್ಯಂತ ಬೇಸರ

ಕೀನ್ಯಾ(ಮಾ. 11) ಈ ಭೂಮಿಯ ಮೇಲೆ ಬದುಕಲು ಅನರ್ಹ ಎಂದಾದರೆ ಅದು ಮಾನವ ಮಾತ್ರ. ನಿಸರ್ಗ ಆಗಾಗ ಏಟು ಕೊಡುತ್ತಲೇ ಇದ್ದರೂ ಈತ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಇದೀಗ ಹೇಳುವ ಮತ್ತೊಂದು ಕತೆ ಸಹ ನಿಮ್ಮನ್ನು ಕಾಡುತ್ತದೆ.

ಅಪರೂಪದಲ್ಲಿ ಅಪರೂಪವಾಗಿದ್ದ ಬಿಳಿ ಜಿರಾಫೆಗಳನ್ನು  ಮಾನವ ಕೊಂದುಹಾಕಿದ್ದಾನೆ. ಬೇಟೆಗಾರರ ರಣಬೇಟೆಗೆ ಏನೂ ಅರಿಯದ ಪ್ರಾಣಿಗಳು ಬಲಿಯಾಗಿವೆ. ಕೀನ್ಯಾದ ಈಶಾನ್ಯ ಭಾಗದ ಕಾಡಿನಲ್ಲಿ ಮೂರು ಬಿಳಿಯ ಜಿರಾಫೆಗಳು ಸ್ವಚ್ಚಂದವಾಗಿ ಓಡಾಡಿಕೊಂಡಿದ್ದವು. ಆದರೆ ಕಾಡಿನ ಭಾಗದಲ್ಲಿರುವ ಹಳ್ಳಿಯ ಜನ ಮೂರು ಜಿರಾಫೆಗಳ ಪೈಕಿ 2 ಜಿರಾಫೆಗಳನ್ನು ಹತ್ಯೆ ಮಾಡಿದ್ದು ಅಲ್ಲದೇ ಭೋಜನ ಮಾಡಿದ್ದಾರೆ.

ಕೋಣ ಬಲಿ ತೆಯಲು ದೇವಾಲಯದಲ್ಲಿ ಕಾವಲು ಕುಳಿತ ಡಿಸಿ

ಭೂಮಿಯ ಮೇಲೆ ಇದ್ದ ಒಂದೇ ಒಂದು ಬಿಳಿ ಹೆಣ್ಣು ಜಿರಾಫೆಯನ್ನು ಕೊಂದು ಹಾಕಲಾಗಿದ್ದು ಸಂತತಿಗೆ ಮಾನವ ಅಂತ್ಯ ಹಾಡಿದ್ದಾನೆ. ಇಶಾಕ್ಬಿನಿ ಅಭಯಾರಣ್ಯ ಪ್ರದೇಶದಲ್ಲಿ 2017 ರಲ್ಲಿ ಬಿಳಿಯ ಜಿರಾಫೆ ತನ್ನ ಮರಿಯೊಂದಿಗೆ ಕಾಣಿಸಿಕೊಂಡಿತ್ತು. ಕಳೆದ ವರ್ಷ ಹೆಣ್ಣು ಜಿರಾಫೆ ಇನ್ನೊಂದು ಮರಿ ಜಿರಾಫೆಗೆ ಜನ್ಮ ನೀಡಿತ್ತು.

 2 ಜಿರಾಫೆಗಳು ಹಲವು ದಿನಗಳಿಂದ ನಾಪತ್ತೆಯಾಗಿತ್ತು. ಜಿರಾಫೆ ದೇಹದ ಭಾಗಗಳು ಪತ್ತೆಯಾಗಿದ್ದು ಮಾನವನ ಕ್ರೌರ್ಯದ ಅನಾವರಣವಾಗಿದೆ ಎಂದು ಕೀನ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಭೂಮಿಯ ಮೇಲೆ ಒಂದು ಗಂಡು ಬಿಳಿ ಜಿರಾಫೆ ಉಳಿದುಕೊಂಡಿದೆ.

click me!