ನವದೆಹಲಿ(ಮೇ.12): ಕೊರೋನಾ ವೈರಸ್ 2ನೇ ಅಲೆ ಭಾರತದಲ್ಲಿ ಸೃಷ್ಟಿಸಿದ ಅವಾಂತರ ಎಷ್ಟರ ಮಟ್ಟಿಗಿದೆ ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಭಾರತಕ್ಕೆ ರೂಪಾಂತರಿ ವೈರಸ್ ಕಾಟ ಹೆಚ್ಚಾಗಿ ಕಾಡಿದೆ. ಇದರ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಭಾರತದ ರೂಪಾಂತರಿ ವೈರಸ್ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದಿತ್ತು. ಇದೀಗ ಈ ಕುರಿತು ಸ್ಪಷ್ಟನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆ ರೂಪಾಂತರಿ ವೈರಸ್ ಹೆಸರನ್ನು ಅದು ಪತ್ತೆಯಾದ ದೇಶದ ಹೆಸರಿನೊಂದಿಗೆ ಜೋಡಿಸುವುದಿಲ್ಲ ಎಂದಿದೆ.
ಭಾರತದ ರೂಪಾಂತರಿ ವೈರಸ್ ವಿಶ್ವಕ್ಕೇ ತೀವ್ರ ಅಪಾಯಕಾರಿ!
undefined
ವೈರಸ್ ಮೊದಲು ವರದಿ ಮಾಡಿದ ದೇಶದ ಹೆಸರಿನೊಂದಿಗೆ ವೈರಸ್ ಅಥವಾ ರೂಪಾಂತರಿ ವೈರಸ್‌ಗಳನ್ನು ಗುರುತಿಸುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ವೈರಸ್ ವೈಜ್ಞಾನಿಕ ಹೆಸರಿನಿಂದ ಉಲ್ಲೇಖಿಸುತ್ತಿದೆ. ಜೊತೆಗೆ ಸ್ಥಿರತೆಗಾಗಿ ಎಲ್ಲರು ವೈರಸ್ ಗುರುತಿಸಲು ಇದೇ ಕ್ರಮ ಅನುಸರಿಸಲು ವಿನಂತಿಸಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಟ್ವೀಟ್ ಮಾಡಿದೆ.
WHO does not identify viruses or variants with names of countries they are first reported from. We refer to them by their scientific names and request all to do the same for consistency.
— WHO South-East Asia (@WHOSEARO)ಕಳೆದ ವರ್ಷ ಅಕ್ಟೋಬರ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಭಾರತದಲ್ಲಿ ಮೊದಲ ಬಾರಿ ಪತ್ತೆಯಾದ B.1.617 ಕೊರೋನಾ ರೂಪಾಂತರಿ ವೈರಸ್ ಇದೀಗ 44 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಈ ವೈರಸನ್ನು ಜಾಗತಿಕ ಆತಂಕಕಾರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಲಸಿಕೆಗೂ ಮಣಿಯಲ್ಲ ಭಾರತದ ಬಿ.1.617 ತಳಿಯ ವೈರಸ್?
B.1.617 ರೂಪಾಂತರಿ ವೈರಸ್ ಪತ್ತೆಯಾದ ಐದು ದೇಶಗಳ ವರದಿಯನ್ನು ತರಿಸಿಕೊಳ್ಳಲಾಗಿದೆ. B.1.617 ಇದು ಕೊರೋನಾ ವೈರಸ್‌ನ 4ನೇ ರೂಪಾಂತರಿಯಾಗಿದೆ. ಈ ಕುರಿತು ಅತೀವ ಎಚ್ಚರವಹಿಸಬೇಕಾಗ ಅಗತ್ಯತೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.