ನಂ.1 ಚೀನಾಕ್ಕೆ ಇದೀಗ ಜನಸಂಖ್ಯೆ ಕುಸಿತ ಭೀತಿ!

By Kannadaprabha NewsFirst Published May 12, 2021, 7:50 AM IST
Highlights

* ಒಂದು ವರ್ಷದಲ್ಲಿ ಜನಸಂಖ್ಯೆ 1 ಕೋಟಿ ಮಾತ್ರವೇ ಏರಿಕೆ

* ಚೀನಾದ ಜನಸಂಖ್ಯಾ ಅಭಿವೃದ್ಧಿ ದರ ಶೂನ್ಯಕ್ಕೆ

* 2022ರಿಂದ ಇಳಿಕೆ ಸಾಧ್ಯತೆ, ಕಾರ್ಮಿಕರ ಕೊರತೆ ಆತಂಕ

ಬೀಜಿಂಗ್‌(ಮೇ.12): ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ, ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. 2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟುಮಾತ್ರವೇ ಏರಿಕೆ ಆಗಲಿದೆ ಎಂದು ಮಂಗಳವಾರ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ. ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಿದೆ.

ರಾಷ್ಟ್ರೀಯ ಸಂಖ್ಯಾಶಾಸ್ತ್ರೀಯ ಬ್ಯೂರೋ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, 2010ರಲ್ಲಿ ನಡೆಸಲಾದ 6ನೇ ಜನಗಣತಿಗೆ ಹೋಲಿಸಿದರೆ 7ನೇ ಜನಗಣತಿಯಲ್ಲಿ ಜನಸಂಖ್ಯೆಯ ವೃದ್ಧಿ ಪ್ರಮಾಣ ಶೇ.0.57ರಿಂದ ಶೇ.0.53ಕ್ಕೆ ಇಳಿಕೆ ಆಗಿದೆ. 2020ರಲ್ಲಿ ಜನಸಂಖ್ಯೆ ವೃದ್ಧಿ ಶೂನ್ಯಕ್ಕೆ ಸಮೀಪಿಸಿದೆ. ಕಳೆದೊಂದು ದಶಕದಲ್ಲಿ ಚೀನಾದ ಜನಸಂಖ್ಯೆ7.2 ಕೋಟಿ ಮಾತ್ರವೇ ಏರಿಕೆ ಆಗಿದೆ.

ಕಳೆದ ವರ್ಷ ಚೀನಾದಲ್ಲಿ 60 ವರ್ಷ ಮೇಲ್ಪಟ್ಟವರ ಜನಸಂಖ್ಯೆ ಶೇ.18.7ರಷ್ಟುಹೆಚ್ಚಳ ಆಗಿದ್ದು, 26.4 ಕೋಟಿಗೆ ಏರಿಕೆ ಆಗಲಿದೆ. ಆದರೆ, 15ರಿಂದ 59 ವರ್ಷದ ಒಳಗಿನವರ ಸಂಖ್ಯೆಶೇ.6.79ರಷ್ಟುಇಳಿಕೆ ಆಗಿದ್ದು, 89.4ಗೆ ಇಳಿಕೆ ಆಗಿದೆ. ಇದೇ ವೇಳೆ ಜನನ ಪ್ರಮಾಣದಲ್ಲಿಯೂ ಇಳಿಕೆ ಆಗುತ್ತಿದ್ದು, 2019ರಲ್ಲಿ ಜನಿಸಿದ 1.46 ಕೋಟಿ ಮಕ್ಕಳಿಗೆ ಹೋಲಿಸಿದರೆ ಕಳೆದ ವರ್ಷ 1.2 ಕೋಟಿಗೆ ಇಳಿಕೆ ಆಗಿದೆ.

ಉಳಿದಂತೆ 8 ಜಿಲ್ಲೆಯಲ್ಲಿ ಎರಡಂಕಿಯಲ್ಲಿ ಕೋವಿಡ್‌ ಸಾವು ವರದಿಯಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಶೇ.1 ಮೀರಿದ ಸಾವಿನ ದರ ದಾಖಲಾಗುತ್ತಿದೆ.

ಈ ಮಧ್ಯೆ ಮೇ 2ರ ಬಳಿಕ ಹೊಸ ಸೋಂಕಿನ ಪ್ರಕರಣ 40 ಸಾವಿರದ ಗಡಿಯೊಳಗೆ ಬಂದಿದೆ. ಆದರೆ ಕೋವಿಡ್‌ ಪರೀಕ್ಷೆಯ ಪ್ರಮಾಣ ಕೂಡ ಸುಮಾರು 30 ರಿಂದ 40 ಸಾವಿರದಷ್ಟುಕಡಿಮೆ ಆಗಿದೆ. ಸೋಮವಾರ 1.24 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಈವರೆಗೆ 19.73 ಲಕ್ಷ ಕೋವಿಡ್‌ ಪ್ರಕರಣ ದಾಖಲಾಗಿದ್ದು 13.83 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 19,372 ಮಂದಿ ಮರಣವನ್ನಪ್ಪಿದ್ದಾರೆ. ಈವರೆಗೆ ಒಟ್ಟು 2.71 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

"

ಜನಸಂಖ್ಯೆ ವೇಗವಾಗಿ ಇಳಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ 2016ರಲ್ಲಿ ಒಂದೇ ಮಗು ನೀತಿಯನ್ನು ರದ್ದು ಮಾಡಿ ದಂಪತಿ 2 ಮಕ್ಕಳನ್ನು ಹೊಂದಲು ಅವಕಾಶ ನೀಡಿತ್ತು. ಆದರೆ, ಇದರ ಹೊರತಾಗಿಯೂ ಜನಸಂಖ್ಯೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಏರಿಕೆ ಆಗುತ್ತಿಲ್ಲ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!