ಟೈಟಾನಿಕ್ ಹಡಗಿನ ಅವಶೇಷ ನೋಡಲು ಹೋಗಿ ನಾಪತ್ತೆಯಾದ ಐವರು ಯಾರು?

By Anusha Kb  |  First Published Jun 21, 2023, 11:40 AM IST

ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದು, ಅದರಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ.


ಉತ್ತರ ಅಟ್ಲಾಂಟಾ: ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸಿಗರ ಹೊತ್ತಯ್ದು ಬಳಿಕ ನಾಪತ್ತೆಯಾದ ಜಲಂತರ್ಗಾಮಿ ನೌಕೆಯಲ್ಲಿ ಒಟ್ಟು ಐವರು ಪ್ರವಾಸಿಗರಿದ್ದು, ಅದರಲ್ಲಿ ಪಾಕಿಸ್ತಾನದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಅವರ ಮಗನೂ ಇದ್ದರೂ ಎಂಬ ಮಾಹಿತಿ ಲಭ್ಯವಾಗಿದೆ.  1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಬಳಿಕ ನಾಪತ್ತೆಯಾಗಿತ್ತು. ಈ ನತದೃಷ್ಟ ಜಲಂತರ್ಗಾಮಿ ನೌಕೆ ಐವರು ಪ್ರವಾಸಿಗರನ್ನು ಹೊತ್ತುಕೊಂಡು ಭಾನುವಾರ ಅಟ್ಲಾಂಟಾದ ಸಮುದ್ರದಾಳಕ್ಕೆ ಜಿಗಿದಿತ್ತು. ಹೀಗೆ ಹೊರಟ ನೌಕೆ ಬಳಿಕ ಸಂಪರ್ಕ ಕಳೆದುಕೊಂಡಿದ್ದು,  ಈ ನೌಕೆಯ ಪತ್ತೆಗಾಗಿ ಭಾರೀ ಹುಡುಕಾಟ ನಡೆಯುತ್ತಿದೆ. 

ನೌಕೆಯಲ್ಲಿದ್ದ ಪಾಕಿಸ್ತಾನದ ಪ್ರಸಿದ್ಧ ಉದ್ಯಮಿ

Tap to resize

Latest Videos

ಇತ್ತ ಈ ಜಲಂತರ್ಗಾಮಿ ನೌಕೆಯಲ್ಲಿ ಪಾಕಿಸ್ತಾನ ಮೂಲದ ಬ್ರಿಟನ್‌ನಲ್ಲಿ ನೆಲೆಯಾಗಿರುವ ಪ್ರಸಿದ್ಧ ಉದ್ಯಮಿ  ಶಹಜಾದಾ ದಾವೂದ್ ಹಾಗೂ ಅವರ ಪುತ್ರ ಸುಲೇಮಾನ್  ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಅವಶೇಷಗಳನ್ನು ನೋಡಲು ಹೊರಟಿದ್ದರು. ಈ ವಿಚಾರವನ್ನು ಅವರ ಕುಟುಂಬ ದೃಢಪಡಿಸಿದೆ. ದಾವೂದ್ ಕುಟುಂಬದ ಇಬ್ಬರು ಈ ನೌಕೆಯಲ್ಲಿದ್ದರು, ನಂತರ ಅವರು ಸಂಪರ್ಕಕಳೆದುಕೊಂಡಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.  ಪಾಕಿಸ್ತಾನದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಶಹಜಾದಾ ದಾವೂದ್ ಬ್ರಿಟನ್‌ನಲ್ಲಿ ನೆಲೆಸಿದ್ದು,  ಅಲ್ಲಿನ ಸಿಇಟಿಐ ಇನ್‌ಸ್ಟಿಟ್ಯೂಟ್‌ನಲ್ಲಿ ಟ್ರಸ್ಟಿಯಾಗಿದ್ದರು.  2003 ರಲ್ಲಿ ಎಂಗ್ರೋ ಕಾರ್ಪೊರೇಷನ್ ಮಂಡಳಿಗೆ ಸೇರಿದ್ದ ಅವರು ಪ್ರಸ್ತುತ ಅದರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಟೈಟಾನಿಕ್‌ ನಟಿ ಕೇಟ್‌ ಮುಳುಗಿದ್ದು ಸಮುದ್ರದಲ್ಲಲ್ಲ ಬಾತ್‌ಟಬ್‌‌‌ ಒಳಗೆ!

ನಾಪತ್ತೆಯಾಗಿರುವ ಟೈಟಾನಿಕ್ ಜಲಾಂತರ್ಗಾಮಿ ನೌಕೆಯಲ್ಲಿ (Titanic submarine) ನಮ್ಮ ಉತ್ತಮ ಸ್ನೇಹಿತ ಮತ್ತು ಬೆಂಬಲಿಗ ಶಹಜಾದಾ ದಾವೂದ್ ಮತ್ತು ಅವರ ಮಗ ಸುಲೇಮಾನ್ ಇದ್ದಾರೆ ಎಂಬ ಭಯಾನಕ ಸುದ್ದಿಯಿಂದ ನಾವೆಲ್ಲರೂ ಸಂಪೂರ್ಣವಾಗಿ ಆಘಾತಗೊಂಡಿದ್ದೇವೆ  ಎಂದು ಬ್ರಿಟಿಷ್ ಏಷ್ಯನ್ ಟ್ರಸ್ಟ್‌ನ ಸಿಇಒ ರಿಚರ್ಡ್ ಹಾಕ್ಸ್ ಹೇಳಿದ್ದಾರೆ.

ಇವರಿಬ್ಬರ ಜೊತೆಗೆ, ಬ್ರಿಟಿಷ್ ಸಾಹಸಿ ಹಮೀಶ್ ಹಾರ್ಡಿಂಗ್ (Hamish Harding) ಕೂಡ ಈ ಕಾಣೆಯಾದ ಜಲಾಂತರ್ಗಾಮಿ ನೌಕೆಯಲ್ಲಿದ್ದಾರೆ. ಹಮೀಶ್ ಹಾರ್ಡಿಂಗ್ ಅವರು ಏರ್‌ಕ್ರಾಫ್ಟ್ ಸಂಸ್ಥೆಯಾದ ಆಕ್ಷನ್ ಏವಿಯೇಷನ್‌ನ ಅಧ್ಯಕ್ಷರಾಗಿದ್ದು, ಬಾಹ್ಯಾಕಾಶ ಯಾನವನ್ನು ಮಾಡಿ ಮೂರು ಗಿನ್ನೆಸ್ ರೆಕಾರ್ಡ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಇದರ ಜೊತೆ ಹಾರ್ಡಿಂಗ್ ಅವರು ದಕ್ಷಿಣ ಧ್ರುವಕ್ಕೂ ಹಲವು ಬಾರಿ ಭೇಟಿ ನೀಡಿದ್ದರು. 2022 ರಲ್ಲಿ ಬ್ಲೂ ಒರಿಜಿನ್‌ನ (Blue Origin) ಐದನೇ ಮಾನವರಿರುವ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶ ಯಾನ ಮಾಡಿದ್ದ ಇವರು ಸಮುದ್ರದಾಳದಲ್ಲಿ ಸುಧೀರ್ಘ ಸಮಯವನ್ನು ಕಳೆದ ದಾಖಲೆಯನ್ನು ಮಾಡಿದ್ದಾರೆ.  ಪಾಕಿಸ್ತಾನದ ಅಪ್ಪ ಮಗ, ಬ್ರಿಟಿಷ್‌ ಸಾಹಸಿ ಮಾತ್ರವಲ್ಲದೇ ಟೈಟಾನಿಕ್ ವಿಶೇಷ ತಜ್ಞ ಹಾಗೂ ಸಿಇಒ ಈ ನಾಪತ್ತೆಯಾದ ನೌಕೆಯಲ್ಲಿದ್ದರು.

ಕಾವೇರಿ ಕೂಗು ಅಭಿಯಾನಕ್ಕೆ ಟೈಟಾನಿಕ್‌ ಹೀರೋ ಡಿಕ್ಯಾಪ್ರಿಯೋ ಬೆಂಬಲ!

ನ್ಯೂಫೌಂಡ್‌ಲ್ಯಾಂಡ್‌ನಲ್ಲಿ 40 ವರ್ಷಗಳಲ್ಲೇ ಅತ್ಯಂತ ಕೆಟ್ಟದೆನಿಸಿದ ಚಳಿಗಾಲದ ಕಾರಣ, ಈ ಪ್ರವಾಸವೂ 2023 ರಲ್ಲಿ ಟೈಟಾನಿಕ್‌ಗೆ ತೆರಳುತ್ತಿರುವ ಮೊದಲ ಮತ್ತು ಏಕೈಕ ಮಾನವಸಹಿತ ನೌಕೆ ಆಗಿರಬಹುದು ಎಂದು ಅವರು ಪ್ರವಾಸದ ಆರಂಭದಲ್ಲಿ ಹಾಕಿದ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಾರ್ಡಿಂಗ್  ಹೇಳಿದ್ದರು. 1912 ರಲ್ಲಿ ಮುಳುಗಡೆಯಾಗಿ 1500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಟೈಟಾನಿಕ್ ಹಡಗಿನ ಅವಶೇಷಗಳಿರುವ ಸಮುದ್ರದಾಳಕ್ಕೆ ಪ್ರವಾಸ ಹೋದ ಜಲಂತರ್ಗಾಮಿ ಪ್ರವಾಸಿ ನೌಕೆ ಭಾನುವಾರ ನಾಪತ್ತೆಯಾಗಿತ್ತು.  ಸಮುದ್ರದಾಳಕ್ಕೆ ಪ್ರವಾಸ ಆರಂಭಿಸಿ ಒಂದು ಮುಕ್ಕಾಲು ಗಂಟೆಯ ನಂತರ ಈ ಅವಘಡ ಸಂಭವಿಸಿದೆ ಎಂದು ಅಮೆರಿಕಾದ ಕೋಸ್ಟ್‌ ಗಾರ್ಡ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದರು.

ಟೈಟಾನಿಕ್‌ ಅವಶೇಷಗಳ ವೀಕ್ಷಣೆಗೆ ಅವಕಾಶ ಸೇರಿದಂತೆ  3,800m (12,500 ಅಡಿ) ಆಳ ಸಮುದ್ರದಲ್ಲಿ 8 ದಿನಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ 250,000 ಡಾಲರ್ ಅಂದರೆ 2,05,11,575 ಭಾರತೀಯ ರೂಪಾಯಿಗಳು. ಇಷ್ಟೊಂದು ವೆಚ್ಚ ಮಾಡಿ ಟೈಟಾನಿಕ್ ಅವಶೇಷಗಳ ನೋಡುವ ಕನಸಿನೊಂದಿಗೆ ತೆರಳಿದ ಪ್ರವಾಸಿಗರನ್ನು ಹೊತ್ತೊಯ್ದ ಜಲಂತರ್ಗಾಮಿ ನೌಕೆ ನಾಪತ್ತೆಯಾಗಿದ್ದು ಎಲ್ಲರಲ್ಲಿ ಆತಂಕ ಮೂಡಿಸಿದೆ. 

ಟೈಟಾನಿಕ್‌ ಹಡಗು ಮುಳುಗಿದ ದಿನ ಪ್ರಯಾಣಿಕರು ತಿಂದಿದ್ದೇನು? 111 ವರ್ಷ ಹಳೆಯ ಮೆನು ವೈರಲ್

ಈ ಹಡಗಿನಲ್ಲಿದ್ದ ಎಲ್ಲಾ ಐದು ಜನರನ್ನು ರಕ್ಷಿಸಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಈ ಪ್ರವಾಸ ಆಯೋಜಿಸಿರುವ ಪ್ರವಾಸಿ ಸಂಸ್ಥೆ ಓಷನ್‌ಗೇಟ್ ಹೇಳಿದೆ. ಈ ಸಮುದ್ರದಾಳದ ಪ್ರವಾಸ ಯೋಜನೆಗಾಗಿ ಸಂಸ್ಥೆ ಒಬ್ಬರಿಂದ 250,000 ಡಾಲರ್ ಹಣ ಪಡೆದಿದೆ.  ನಾಪತ್ತೆಯಾದ ಜಲಂತರ್ಗಾಮಿ ನೌಕೆಗಾಗಿ ಅಮೆರಿಕಾದ ಸರ್ಕಾರಿ ಏಜೆನ್ಸಿಗಳು, ಯುಎಸ್ (US) ಮತ್ತು ಕೆನಡಾದ ನೌಕಾಪಡೆಗಳು (Canadian navies) ಮತ್ತು ಆಳ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸುವ ವಾಣಿಜ್ಯ ಸಂಸ್ಥೆಗಳು  ಸಹಾಯ ಮಾಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

1912 ರಲ್ಲಿ ಮುಳುಗಿದ ಟೈಟಾನಿಕ್  ಹಡಗಿನ ಅವಶೇಷವೂ ಸೇಂಟ್ ಜಾನ್ಸ್‌ನ (St John) ದಕ್ಷಿಣಕ್ಕೆ ನ್ಯೂಫೌಂಡ್‌ಲ್ಯಾಂಡ್‌ನ  (Newfoundland)ಸುಮಾರು 435 ಮೈಲಿ (700 ಕಿಮೀ) ದೂರದಲ್ಲಿ ಇದೆ.

click me!