
ನವದೆಹಲಿ: 2ನೇ ಮೇ 2011ರಂದು ಜಗತ್ತಿನ ಅತಿದೊಡ್ಡ ಸೇನಾ ಕಾರ್ಯಾಚರಣೆಯೊಂದು ನಡೆದಿತ್ತು. ಪಾಕಿಸ್ತಾನದಲ್ಲಿ ಅಡಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಒಸಾಮಾ ಬಿನ್ ಲಾಡೆನ್ ಎಂಬಾತನನ್ನು ಅಮೆರಿಕದ ಸೇನೆ ಹೊಡೆದುರುಳಿಸಿತ್ತು. 9/11 ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಒಸಾಮಾ ಬಿನ್ ಲಾಡೆಲ್ ಸಾವಿನ ಸುದ್ದಿ ಕೇಳಿ ಜಗತ್ತು ಅಚ್ಚರಿಯಾಗಿತ್ತು. ಪಾಕಿಸ್ತಾನದ ಎಬೊಟಾಬದ್ ಎಂಬಲ್ಲಿ ಅಮೆರಿಕ ಸೇನೆ ಬರೋಬ್ಬರಿ 40 ನಿಮಿಷ ಈ ಕಾರ್ಯಾಚರಣೆಯನ್ನು ನಡೆಸಿತ್ತು. ಈ ಮೂಲಕ ಪಾಕಿಸ್ತಾನದ ಉಗ್ರ ಮುಖವಾಡವನ್ನು ಅಮೆರಿಕ ಜಗತ್ತಿಗೆ ತೋರಿಸಿತ್ತು. ಪಾಕಿಸ್ತಾನ ಉಗ್ರರ ಅಡಗುತಾಣ ಎಂಬುವುದು ಮತ್ತೊಮ್ಮೆ ಜಗಜ್ಜಾಹೀರು ಆಗಿತ್ತು. ಲಾಡೆನ್ ತನ್ನ ದೇಶದಲ್ಲಿದ್ದರೂ ಇಲ್ಲ ಎಂದೇ ಪಾಕಿಸ್ತಾನ ಸುಳ್ಳು ಹೇಳುತ್ತತ್ತು. ಈ ಘಟನೆ ಬಳಿಕ ಪಾಕಿಸ್ತಾನದ ಜೊತೆಗಿನ ವ್ಯವಹಾರ ಮುಂದುವರಿಸಬೇಕಾ ಎಂಬ ಚರ್ಚೆಗಳು ಅಂತರಾಷ್ಟ್ರೀಯಮಟ್ಟದಲ್ಲಿ ನಡೆದಿದ್ದವು.
ಈ ಸೇನಾ ಕಾರ್ಯಾಚರಣೆ ಬಳಿಕ ಒಸಾಮಾ ಬಿನ್ ಲಾಡೆನ್ ಆಶ್ರಯ ನೀಡಿದ್ದ ಪಾಕಿಸ್ತಾನದ ವಿಶ್ವಾಸರ್ಹತೆ ಬಗ್ಗೆ ಹಲವು ದೇಶಗಳು ಪ್ರಶ್ನೆ ಮಾಡಿದ್ದವು. ತನ್ನ ದೇಶದೊಳಗೆ ಅಮೆರಿಕಾದ ಕಾರ್ಯಾಚರಣೆ ಕಂಡು ಪಾಕಿಸ್ತಾನ ಸೇನೆಯೇ ಶಾಕ್ ಆಗಿತ್ತು. ಈ ಘಟನೆ ಬಳಿಕ ಒಸಾಮಾ ಬಿನ್ ಲಾಡೆನ್ ಕುಟುಂಬಸ್ಥರು ಏನಾದ್ರು? ಅವರ ಪತ್ನಿಯರೊಂದಿಗೆ ಪಾಕಿಸ್ತಾನ ನಡೆದುಕೊಂಡಿದ್ದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರಗಳು ಸಿಕ್ಕಿರಲಿಲ್ಲ. ಇತ್ತೀಚೆಗೆ The Zardari Presidency: Now It Must Be Told ಹೆಸರಿನ ಪುಸ್ತಕ ಬಿಡುಗಡೆಯಾಗಿದ್ದು, ಇದನ್ನು ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಅಸಿಪ್ ಅಲಿ ಜರ್ದಾರಿ ಅವರ ಪ್ರವಕರ್ತ, ಆಪ್ತರಾಗಿ ಗುರುತಿಸಿಕೊಂಡಿದ್ದ ಫರ್ಹತುಲ್ಲಾಹ ಬಾಬರ್ ಬರೆದಿದ್ದಾರೆ. ಈ ಪುಸ್ತಕದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿವೆ.
ಫರ್ಹತುಲ್ಲಾಹ ಬಾಬರ್ ಪ್ರಕಾರ, ಬಿನ್ ಲಾಡೆನ್ ಹತ್ಯೆ ಬಳಿಕ ಪಾಕಿಸ್ತಾನದ ಅಧಿಕಾರಿಗಳು ಆತನ ಪತ್ನಿಯರನ್ನು ವಶಕ್ಕೆ ಪಡೆದುಕೊಂಡಿದ್ದರು. ಅಚ್ಚರಿಯ ವಿಷಯ ಏನು ಅಂದ್ರೆ ಕೆಲವು ದಿನಗಳ ಬಳಿಕ CIA ತಂಡ ಎಬೊಟಾಬದ್ ಕಂಟೋಮೆಂಟ್ ತಲುಪಿತ್ತು. ಈ ತಂಡಕ್ಕೆ ಮಹಿಳೆಯರನ್ನು ವಿಚಾರಣೆ ನಡೆಸಲು ಅನುಮತಿ ನೀಡಲಾಯ್ತು. ಈ ಘಟನೆ ಪಾಕಿಸ್ತಾನದ ಸಾರ್ವಭೌಮತ್ವದ ಬಗ್ಗೆ ಕಳವಳವನ್ನುಂಟು ಮಾಡಿತ್ತು. ಇದು ಪಾಕಿಸ್ತಾನದ ರಾಷ್ಟ್ರೀಯ ಗೌರವ ಅವಮಾನ ಮಾಡಿದಂತಾಗಿತ್ತು ಎಂದು ಹೇಳುತ್ತಾರೆ.
ಇದನ್ನೂ ಓದಿ: ಗುಂಡೇಟಿಗೆ ಬಲಿಯಾದ ಅಮೆರಿಕಾದ ಬಲಪಂಥೀಯ ನಾಯಕ ಚಾರ್ಲಿ ಕಿರ್ಕ್ ಆಪರೇಷನ್ ಸಿಂದೂರ್ ಬಗ್ಗೆ ಏನಂದಿದ್ದರು?
ಅಂದು ಅಮೆರಿಕದ ಏಜೆಂಟ್‌ಗಳಿಗೆ ಪಾಕಿಸ್ತಾನದಲ್ಲಿ ಹೆಚ್ಚು ಸ್ವತಂತ್ರವಿತ್ತು. ಪಾಕಿಸ್ತಾನದ ರಾಜಕೀಯ ವ್ಯವಸ್ಥೆ ಮತ್ತು ಸೇನೆ ಹೆಚ್ಚು ಒತ್ತಡದಲ್ಲಿತ್ತು. ಈ ಬೆಳವಣಿಗೆ ಪಾಕಿಸ್ತಾನದ ಪಾಲಿಗೆ ಅಸಫಲತೆ ಮತ್ತು ನಾಚಿಕೆಯ ಕ್ಷಣವಾಗಿತ್ತು (failure and embarrassment for Pakistan) ಎಂದು ಫರ್ಹತುಲ್ಲಾಹ ಬಾಬರ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಈ ತಂಡದಲ್ಲಿ ಅಂದಿನ ಅಮೆರಿಕಾದ ವರಿಷ್ಠ ಅಧಿಕಾರಿಗಳು, ವಿದೇಶಾಂಗ ಸಚಿವ ಹಿಲರಿ ಕ್ಲಿಂಟನ್ ಮತ್ತು ಸಿನೆಟರ್ ಜಾನ್ ಕೈರಿ ಉಪಸ್ಥಿತರಿದ್ದರು. ಇವರೆಲ್ಲರೂ ಪಾಕಿಸ್ತಾನಕ್ಕೆ ಬಂದು ವಿಚಾರಣೆ ನಡೆಸಿದರು. ಅಂದು ಅಮೆರಿಕದ ಏಕಪಕ್ಷೀಯ ದಾಳಿ ನಡೆಸಬಾರದು. ಈ ಬಗ್ಗೆ ಗ್ಯಾರಂಟಿ ನೀಡಬೇಕೆಂದು ಪಾಕಿಸ್ತಾನ ಬಯಸಿತ್ತು ಅದರೆ ಅಮೆರಿಕಾ ಯಾವುದೇ ಸ್ಪಷ್ಟವಾದ ಭರವಸೆಯನ್ನು ನೀಡಿರಲಿಲ್ಲ ಎಂದು ಬಾಬರ್ ಹೇಳುತ್ತಾರೆ.
ಈ ಪುಸ್ತಕದಲ್ಲಿ ಸಿಐಎ ಹಲವು ದಿನಗಳ ಮುಂಚೆಯೇ ಒಸಾಮಾ ಬಿನ್ ಲಾಡೆನ್ ಇರುವಿಕೆಯನ್ನು ಗುರುತಿಸಿತ್ತು. ಇಷ್ಟುಮಾತ್ರವಲ್ಲ ಉಗ್ರರಿಗೆ ವಾಸವಾಗಲು ಸ್ಥಳಾವಕಾಶ ನೀಡಿದ್ದ ಜಮೀನಿನ ಮಾಲೀಕನ ಮಾಹಿತಿಯನ್ನು ಅಮೆರಿಕಾ ಸಂಗ್ರಹಿಸಿತ್ತು. 2ನೇ ಮೇ 2011ರಂದು ಅಮೆರಿಕಾದ ದಾಳಿ ಎಲ್ಲವೂ ಪೂರ್ವಯೋಜಿತವಾಗಿತ್ತ ಎಂದು ಫರ್ಹತುಲ್ಲಾಹಬಾಬರ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ