ಅಂತ್ಯ ಹಾಡುತ್ತೇವೆ... ಗಾಜಾದಲ್ಲಿ ಇನ್ನೆಂದು ಹೀಗಾಗಲು ಬಿಡಲ್ಲ: ಇಸ್ರೇಲ್ ರಕ್ಷಣಾ ಸಚಿವ

By Anusha Kb  |  First Published Oct 11, 2023, 12:11 PM IST

ಇಸ್ರೇಲ್ ರಕ್ಷಣಾ ಪಡೆ ಯುದ್ಧದ ಎಲ್ಲಾ ನಿಯಮಗಳನ್ನು ಮೀರಿದ್ದು, ಇಸ್ರೇಲ್‌ ಸೈನಿಕರಿಗೆ  ಇದ್ದ ಎಲ್ಲಾ ನಿರ್ಬಂಧಗಳನ್ನು  ಸಂಪೂರ್ಣ ಮುಕ್ತಗೊಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ  ಯೋವಾ ಗ್ಯಾಲಂಟ್  ಹೇಳಿದ್ದಾರೆ.


ಟೆಲ್‌ ಅವೀವ್‌: ಇಸ್ರೇಲ್ ಸೇನೆ ಹಮಾಸ್ ಉಗ್ರರ ನಡುವಿನ ಯುದ್ಧ ಇಂದು 5ನೇ ದಿನಕ್ಕೆ ಕಾಲಿರಿಸಿದೆ. ಈ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ರಕ್ಷಣಾ ಪಡೆಗಳಿಗೆ ಇದ್ದ ಎಲ್ಲಾ ನಿರ್ಬಂಧಗಳನ್ನು  ಸಂಪೂರ್ಣ ಮುಕ್ತಗೊಳಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ  ಯೋವಾ ಗ್ಯಾಲಂಟ್  ಹೇಳಿದ್ದಾರೆ. ಇಸ್ರೇಲ್ ಜನರ ಶಿರಚ್ಛೇದ ಮಾಡಲು ಮಹಿಳೆ ಮಕ್ಕಳನ್ನು ಕೊಲ್ಲಲು ಯಾರೇ ಬಂದರೂ ನಾವು ಅವರ ಹುಟ್ಟಡಗಿಸುತ್ತೇವೆ. ಯಾವುದೇ ರಾಜೀ ಇಲ್ಲದೇ ಅವರ ಸರ್ವನಾಶ ಮಾಡಲಾಗುತ್ತದೆ ಎಂದು ಅವರು ಹೇಳಿದ್ದು, ಇದರ ಜೊತೆಗೆ ಇನ್ನು ಯಾವತ್ತೂ ಗಾಜಾ ಮೊದಲಿನಂತಿರುವುದಿಲ್ಲ ಗಾಜಾ ಯಾವತ್ತೂ ಈ ಹಿಂದೆ ಇದ್ದ ಸ್ಥಿತಿಗೆ ಹಿಂತಿರುಗುವುದಿಲ್ಲ, ಗಾಜಾದಲ್ಲಿ ಈಗ ಏನಾಯಿತೋ ಅದು ಮುಂದೆ ಆಗಲು ಸಾಧ್ಯವಿಲ್ಲ, ಆಗುವುದು ಇಲ್ಲ ಎಂದು ಅವರು ಹೇಳಿದ್ದಾರೆ. 

ಗಾಜಾ ಪಟ್ಟಿಯಲ್ಲಿರುವ ಇಸ್ರೇಲ್ ಗಡಿಯುದ್ಧಕ್ಕೂ ಮುಂಚೂಣಿಯ ತಪಾಸಣೆ ವೇಳೆ ಇಸ್ರೇಲ್ ಯೋಧರ ಜೊತೆ ಮಾತನಾಡಿದ ವೇಳೆ ಅವರು ಹೀಗೆ ಹೇಳಿದ್ದಾರೆ. ಹಮಾಸ್‌ ಗಾಜಾದಲ್ಲಿ ಬದಲಾವಣೆ ಬಯಸಿದೆ.  ಆದರೆ ಅವರು ಯೋಚಿಸಿದ್ದಕ್ಕಿಂತ  180 ಡಿಗ್ರಿಯಷ್ಟು ಗಾಜಾ ಬದಲಾಗಲಿದೆ. ಅವರು ಈ ಕ್ಷಣದಲ್ಲಿ  ತಮ್ಮ ಕೃತ್ಯದ ಬಗ್ಗೆ ವಿಷಾದಿಸಬಹುದು. ಆದರೆ ಗಾಜಾ ಯಾವತ್ತೂ ಈ ಹಿಂದೆ ಇದ್ದ ಸ್ಥಿತಿಗೆ ಹಿಂತಿರುಗುವುದಿಲ್ಲ ಎಂದು ಹೇಳಿದ ಗ್ಯಾಲಂಟ್, ಹಮಾಸ್ ಅನ್ನು 'ಗಾಜಾದ ಐಸಿಸ್' ಎಂದು ಬಣ್ಣಿಸಿದರು.  ರೀಮ್ ಸೇನಾ ನೆಲೆಯಲ್ಲಿರುವ ಇಸ್ರೇಲ್ ಸೇನಾ ನೆಲೆಯ ಗಾಜಾ ವಿಭಾಗದ ಪ್ರಧಾನ ಕಚೇರಿಗೆ ಭೇಟಿ ನೀಡಿದ ಅವರು, ಹಮಾಸ್ ಮೊದಲು ದಾಳಿ ಮಾಡಿದ ಪ್ರದೇಶಗಳಲ್ಲಿ ಒಂದಾದ ಕಿಬ್ಬುಟ್ಜ್ ಬೀರಿಯಲ್ಲಿ ಶಾಲ್ದಾಗ್ ಪಡೆಯ ಯೋಧರು (Shaldag fighters), ಪ್ಯಾರಾಟ್ರೂಪರ್‌ಗಳು ಮತ್ತು ಇತರ ಸೈನಿಕರೊಂದಿಗೆ ಮಾತನಾಡಿದರು.

Tap to resize

Latest Videos

1500 ಹಮಾಸ್‌ ಉಗ್ರರ ಶವ ಪತ್ತೆ: ವಿಶ್ವಸಂಸ್ಥೆ ಸ್ಥಾಪಿಸಿರುವ ನಿರಾಶ್ರಿತ ಕ್ಯಾಂಪ್‌ ಮೇಲೂ ಇಸ್ರೇಲ್‌ ದಾಳಿ

ಕೆಲವೇ ತಿಂಗಳುಗಳಲ್ಲಿ ನಾವು ಇಲ್ಲಿಗೆ, ಬೀರಿಗೆ (Be’eri) ಹಿಂತಿರುಗುತ್ತೇವೆ ಮತ್ತು ಆ ಸಂಸರ್ಭ ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ನಾವು ಕಿಬ್ಬುಟ್ಜ್  ಪ್ರದೇಶವನ್ನು ಕೊನೆಯ ಮೀಟರ್‌ಗೆ ಹೊಂದಿಸುತ್ತೇವೆ ಹಾಗೂ ಗಾಜಾದಲ್ಲಿ ಈಗ ಏನಾಯಿತೋ ಅದು ಮುಂದೆ ಆಗಲು ಸಾಧ್ಯವಿಲ್ಲ ಎಂದು ಗ್ಯಾಲಂಟ್ ಹೇಳಿದ್ದಾರೆ.  ಹಮಾಸ್ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸಿರುವ ಪ್ರತಿದಾಳಿಯಿಂದಾಗಿ ಗಾಜಾದ ಜನನಿಬಿಡ ಪ್ರದೇಶದ 140 ಚದರ ಅಡಿ ಕರಾವಳಿ ಪ್ರದೇಶಗಳಲ್ಲಿರುವ ಹಲವು ಕಟ್ಟಗಳು ನಾಮಾವಶೇಷವಾಗಿದೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದು, ಗಾಯಾಳುಗಳಿಂದ ಆಸ್ಪತ್ರೆಗಳು ತುಂಬಿ ಹೋಗಿವೆ. 

ಹಮಾಸ್‌ ಉಗ್ರರಿಗೆ ಸಮುದ್ರ, ಸುರಂಗ ಮಾರ್ಗದಿಂದ ಶಸ್ತ್ರಾಸ್ತ್ರ ಪೂರೈಕೆ?

⚡️Israeli Defense Minister announced We have abolished all the rules of war. Our soldiers will not be held responsible for anything. There will be no military courts,” Sputnik quotes Gallant.

I have released all the restraints, we have [regained] control of the area, and we are… pic.twitter.com/QfsfgUPvFy

— Megh Updates 🚨™ (@MeghUpdates)

ಇಸ್ರೇಲ್‌ ಸೇನೆಯಿಂದ ಗಾಜಾ಼ದಲ್ಲಿ ನಿಷೇಧಿತ ವೈಟ್‌ ಫಾಸ್ಫರಸ್‌ ಬಳಕೆ?

click me!