
ಜಿನೆವಾ(ಜೂ.26): ಕೊರೋನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಲು ವಿಶ್ವ ಆರೋಗ್ಯ ಸಂಸ್ಥೆಯ ವೈಫಲ್ಯ ಕೂಡ ಕಾರಣ ಅನ್ನೋ ಆರೋಪಗಳಿವೆ. ಅಮೆರಿಕ ನೇರ ಆರೋಪ ಮಾಡಿದೆ. ಇನ್ನುಳಿದ ದೇಶಗಳು ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದೆ. ಕೊರೋನಾ ವೈರಸ್ ಎಲ್ಲಾ ದೇಶಗಳ ಪರಿಸ್ಥಿತಿಯನ್ನು ಹದಗೆಡಿಸಿದೆ. ಪರಿಸ್ಥಿತಿ ಕೈಮೀರುತ್ತಿರುವ ಹಂತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸುದ್ದಿಗೋಷ್ಠಿ ಮಾಡುತ್ತಲೇ ಇದೆ. ಆದರೆ ಯಾವ ಪರಿಹಾರ ಮಾತ್ರ ಸಿಗುತ್ತಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ, ನಮ್ಮಲ್ಲಿ ಕೊರೋನಾಗೆ ಸದ್ಯ ಔಷಧಿ ಇಲ್ಲ ಎಂದಿದೆ.
ಬೆಂಗಳೂರು ಲಾಕ್‌ಡೌನ್: ಶಾಸಕರು -ಸಚಿವರು-ಸಂಸದರು ಹೇಳೋದೇನು..?.
ಕೊರೋನಾ ವೈರಸ್‌ಗೆ ಔಷಧಿ ಇಲ್ಲ. ತಜ್ಞರು, ಸಂಶೋಧಕರು ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಒಂದು ವರ್ಷದೊಳಗೆ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಆದರೆ ಸದ್ಯ ಪರಿಣಾಮಕಾರಿಯಾದ ಲಸಿಕೆ ಲಭ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಟೆಡ್ರೋಸ್ ಅಧನಮ್ ಗೆಬ್ರೆಸಸ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಜನರು ಮನ್ನಣೆ ನೀಡುತ್ತಿಲ್ಲ.
ಕೊರೋನಾ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ: ಸಚಿವ ಸುಧಾಕರ್
ಪ್ರತಿ ದೇಶದಿಂದ ಫಂಡ್ ಕಲೆಕ್ಟ್ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ವಿಶ್ವವನ್ನೇ ಕಾಡುವ ವೈರಸ್ ಅಪ್ಪಳಿಸಿದಾಗ ಕೈಚೆಲ್ಲಿ ಕೂತಿರುವುದು ಹಲವು ದೇಶಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ನಿರ್ವಹಣೆ ಕುರಿತು ಅಸಮಧಾನ ಹೆಚ್ಚಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ