(ಡಿ.22): ನಾಯಿಗಳ ಜೊತೆ ಮಕ್ಕಳು ಸೇರಿದಂತೆ ಮನುಷ್ಯರ ಸಂಬಂಧ ತುಂಬಾ ಅವಿನಾಭಾವವಾದುದು. ಅದರಲ್ಲೂ ಮಕ್ಕಳೊಂದಿಗೆ ಕೆಲವು ನಾಯಿಗಳು ಬೆರೆಯುವ ರೀತಿ ನೋಡಿದರೆ ಇದು ಯಾವುದೋ ಜನ್ಮದ ನಂಟೆಂಬಂತೆ ಭಾಸವಾಗುತ್ತದೆ. ಮೂಕ ಜೀವಿಯೊಂದು ಮನುಷ್ಯರೊಂದಿಗೆ ಅಂತಹ ಅನುಬಂಧವನ್ನು ಹೊಂದಿದೆ. ನಾಯಿಗಳು ಮನುಷ್ಯನ ನಡುವಿನ ಈ ಪ್ರೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳನ್ನು ನೀವು ಕೇಳಿರಬಹುದು. ನಾವೀಗ ಇಲ್ಲಿ ಹೇಳ ಹೊರಟಿರುವುದು ಮಗು ಹಾಗೂ ನಾಯಿಯ ನಡುವಿನ ಜುಗಲ್‌ಬಂಧಿ. ಹೌದು ನಾಯಿಯೊಂದು ಪುಟ್ಟ ಬಾಲಕಿಯೊಂದಿಗೆ ಸಾಹಸ ಮಾಡುವ ದೃಶ್ಯವಿದು.
ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ (social Media)ದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 1 ನಿಮಿಷದ ಈ ವೀಡಿಯೊದಲ್ಲಿ, ಚಿಕ್ಕ ಹುಡುಗಿ ತನ್ನ ಸಾಕು ನಾಯಿಯೊಂದಿಗೆ ಕೆಲವು ಅದ್ಭುತ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಬಾಲಕಿಯ ಜೊತೆ ನಾಯಿಯು ಚುರುಕಾಗಿದ್ದು, ಮಗುವೂ ನೀಡುವ ಎಲ್ಲಾ ಸೂಚನೆಗಳನ್ನು ಆಗಲೇ ಗಮನಿಸಿ ಅಳವಡಿಸಿಕೊಳ್ಳುತ್ತದೆ. ಮತ್ತು ಬಾಲಕಿಯೊಂದಿಗೆ ಒಂದು ಹೆಜ್ಜೆಯೂ ತಪ್ಪಾಗದಂತೆ ಸಾಹಸಗಳನ್ನು ಮಾಡುತ್ತದೆ. ಈ ವಿಡಿಯೋ ನೋಡಿದರೆ ಇಬ್ಬರೂ ಈ ಸಾಹಸಗಳನ್ನು ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿರಬಹುದು ಎಂದು ಎನಿಸುತ್ತದೆ. ಶ್ವಾನ(Dog) ಮತ್ತು ಬಾಲಕಿ ಇಬ್ಬರೂ ಈ ವಿಡಿಯೋವನ್ನು ಮತ್ತಷ್ಟು ಅದ್ಭುತವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಣುತ್ತದೆ.
A girl and her dog.. 😊 pic.twitter.com/W4bj8YJwOM
— Buitengebieden (@buitengebieden_)
ಇಂಟರ್ನೆಟ್(Internet) ಬಳಕೆದಾರರು ಈ ಪುಟ್ಟ ಬಾಲಕಿ ಹಾಗೂ ಆಕೆಯ ಪ್ರೀತಿಯ ನಾಯಿ ಜೊತೆಯಾಗಿ ಮಾಡುತ್ತಿರುವ ಈ ಸಾಹಸಕ್ಕೆ ಭೇಷ್ ಎಂದಿದ್ದಾರೆ. ಇದಂತೂ ನಿಜವಾಗಿಯೂ ಮನೋರಂಜನೆ ನೀಡುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಯಾವುದೇ ಪೂರ್ವಾಗ್ರಹ ಇಲ್ಲದ ಮುಗ್ಧ ಪ್ರೀತಿ(love) ಹಾಗೂ ಖುಷಿ ಇದು. ಚಿಕ್ಕ ಮಕ್ಕಳು ಹಾಗೂ ನಾಯಿಗೆ ಉಸಿರಾಟವಿದ್ದಂತೆ ಇದು ಎಂದೆಲ್ಲಾ ಇದನ್ನು ನೋಡಿದ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ದೊಡ್ಡವರಾಗುತ್ತಿದ್ದಂತೆ ಈ ಮನುಷ್ಯರಿಗೆ(ನಮಗೆ) ಏನಾಗುತ್ತದೆ. ಇಂತಹ ಮುಗ್ಧತೆ ಕೊನೆಯವರೆಗೂ ಇದ್ದರೆ ಜಗತ್ತು ಸ್ವರ್ಗವಾಗುತ್ತದೆ ಎಂದೆಲ್ಲಾ ಜನ ಕಾಮೆಂಟ್ ಮಾಡಿದ್ದಾರೆ. ಇದು ವಿದೇಶದ ವಿಡಿಯೋ ಆಗಿದ್ದು, ಯಾವ ಪ್ರದೇಶ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಉಲ್ಲೇಖವಿಲ್ಲ. Buitengebieden ಎಂಬ ಟ್ವಿಟ್ಟರ್ ಪೇಜ್‌ನಲ್ಲಿ ಈ ವಿಡಿಯೋ ಅಪ್‌ಲೋಡ್ ಆಗಿದೆ.
ನವ ದಂಪತಿಯ ಡಾನ್ಸ್‌ಗೆ ಜೊತೆಯಾದ ಪ್ರೀತಿಯ ಶ್ವಾನ
ಶ್ವಾನಗಳು ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಮನುಷ್ಯನ ಮೇಲೆ ಶ್ವಾನದ ಪ್ರೀತಿ ಊಹೆಗೂ ನಿಲುಕದು. ಮಾಲೀಕ ಸತ್ತಾಗ ಶ್ವಾನವೂ ಪ್ರಾಣ ಬಿಟ್ಟಂತಹ ಅನೇಕ ಘಟನೆಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಸಾಕುಪ್ರಾಣಿಗಳು ಮಾನವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಅದರಲ್ಲೂ ಶ್ವಾನಗಳ ಸ್ವಾಮಿನಿಷ್ಠೆಗೆ ಸರಿಸಾಟಿ ಯಾರು ಇಲ್ಲ. ಅನ್ನ ಹಾಕಿದ ಮನೆಗೆ ಎಂದಿಗೂ ಎರಡು ಬಗೆಯದ ಅವುಗಳು ಉಸಿರಿರುವವರೆಗೆ ಮಾನವನಿಗೆ ಋಣಿಯಾಗಿ ಇರುವವು. ಶ್ವಾನದ ನಿಯತ್ತಿನ ಬಗ್ಗೆ ಸಾಕಷ್ಟು ನಿದರ್ಶನಗಳು ಈಗಾಗಲೇ ಆಗಿ ಹೋಗಿವೆ.
Chhattisgarh: ಕರುಳ ಕುಡಿಯನ್ನು ಬೀದಿಗೆಸೆದ ಹೆತ್ತವ್ವ, ಕಂದನಿಗೆ ಕಾವಲು ನಿಂತ ಶ್ವಾನಗಳು!