ನವ ಜೋಡಿಯೊಂದು ಮದುವೆಯ ಸಂಭ್ರಮದಲ್ಲಿ ಡಾನ್ಸ್ ಮಾಡ್ತಿರಬೇಕಾದರೆ ಅವರ ನಾಯಿಯೊಂದು ಜೋಡಿ ಮಧ್ಯೆ ನುಗ್ಗಿ ಬಂದು ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ವಿದೇಶಿ ಜೋಡಿಯೊಂದು ತಮ್ಮ ಮದುವೆಯಲ್ಲಿ ಡಾನ್ಸ್ ಮಾಡುತ್ತಿದ್ದರು. ಈ ವೇಳೆ ಎಲ್ಲಿತ್ತು ಇವರ ಪ್ರೀತಿಯ ಸಾಕು ನಾಯಿ, ಇವರತ್ತ ಓಡಿ ಬಂದು ಡಾನ್ಸ್ ಮಾಡುತ್ತಿದ್ದ ನವ ವಧು ವರನ ಮಧ್ಯೆ ನಿಂತು ಅವರ ಡಾನ್ಸ್‌ಗೆ ಅಡ್ಡಿ ಪಡಿಸಿದೆ. ಈ ಮುದ್ದಾದ ವಿಡಿಯೋವನ್ನು 71,000 ಕ್ಕೂ ಹೆಚ್ಚು ಜನ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿದ್ದಾರೆ.
ಇದು ನವ ಜೋಡಿಯ ಕನಸಿನಂತೆ ರೂಪುಗೊಂಡ ಮದುವೆಯಾಗಿತ್ತು. ನವ ಜೋಡಿ ಇದೇ ಮೊದಲ ಬಾರಿಗೆ ಜೊತೆಯಾಗಿ ಡಾನ್ಸ್ ಮಾಡುತ್ತಿದ್ದರು. ಜೋಡಿ ನೋಡಲು ಸುಂದರವಾಗಿ ಕಾಣಿಸುತ್ತಿದ್ದು, ವರ ಟುಕ್ಸೆಡೊ ಹಾಗೂ ವಧು ಶುಭ್ರ ಶ್ವೇತ ವರ್ಣದ ಹೆಗಲಿನವರೆಗಿನ ಲಾಂಗ್ ಗವನ್ ಧರಿಸಿದ್ದರು. ಆದಾಗ್ಯೂ ಅವರ ಡಾನ್ಸ್ ತುಂಬಾ ಸುಂದರವಾಗಿತ್ತು. ಆದರೆ ಈ ಡಾನ್ಸ್ ಶೋವನ್ನು ಇನ್ನಷ್ಟು ಮಜವಾಗಿಸಿದ್ದು, ಅವರ ಪ್ರೀತಿಯ ಸಾಕು ನಾಯಿ. ಅದೂ ಕೂಡ ಈ ಮದುವೆಯ ವೇದಿಕೆಯಲ್ಲಿ ಮಿಂಚಲು ಬಯಸಿತ್ತು. ಮದುವೆಯಲ್ಲಿ ಅದು ಕೂಡ ಜಾಲಿ ಮಾಡಲು ಬಯಸಿತ್ತು. ಹೀಗಾಗಿ ವಧು ವರ ಡಾನ್ಸ್ ಮಾಡುತ್ತಿದ್ದಂತೆ ಅವರ ಬಳಿ ಧಾವಿಸಿ ಅವರಿಬ್ಬರ ಮಧ್ಯೆ ಬಂದು ನಿಂತಿದೆ.
ಒಟ್ಟಿನಲ್ಲಿ ಅವರ ಖಾಸಗಿ ಕ್ಷಣಗಳಿಗೆ ಈ ನಾಯಿ ಅಡ್ಡಿಪಡಿಸಿತ್ತು. ವೇದಿಕೆಗೆ ನಾಯಿ ಬರುತ್ತಿದ್ದಂತೆ ಮದುವೆಗೆ ಬಂದಿದ್ದವರೆಲ್ಲಾ ಜೋರಾಗಿ ನಗಲು ಶುರು ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪ್ರಪೋಸಲ್ ಹಾಗೂ ಮದುವೆ (Proposals & Weddings) ಎಂಬ ಖಾತೆಯಿಂದ ಶೇರ್ ಮಾಡಲಾಗಿದ್ದು, ನೋಡಲು ತುಂಬಾ ಮುದ್ದಾಗಿದೆ. 'ಎಕ್ಸ್‌ಕ್ಯೂಸ್ ಮಿ ನಾನು ಕೂಡ ಡಾನ್ಸ್' ಮಾಡುತ್ತೇನೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಆಯ್ತು ವಧು ವರನ ಜಬರ್‌ದಸ್ತ್ ಡಾನ್ಸ್
ಶ್ವಾನಗಳು ಮನುಷ್ಯರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಮನುಷ್ಯನ ಮೇಲೆ ಶ್ವಾನದ ಪ್ರೀತಿ ಊಹೆಗೂ ನಿಲುಕದು. ಮಾಲೀಕ ಸತ್ತಾಗ ಶ್ವಾನವೂ ಪ್ರಾಣ ಬಿಟ್ಟಂತಹ ಅನೇಕ ಘಟನೆಗಳನ್ನು ನಾವು ಈ ಹಿಂದೆ ಕೇಳಿದ್ದೇವೆ. ಸಾಕುಪ್ರಾಣಿಗಳು ಮಾನವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಅದರಲ್ಲೂ ಶ್ವಾನಗಳ ಸ್ವಾಮಿನಿಷ್ಠೆಗೆ ಸರಿಸಾಟಿ ಯಾರು ಇಲ್ಲ. ಅನ್ನ ಹಾಕಿದ ಮನೆಗೆ ಎಂದಿಗೂ ಎರಡು ಬಗೆಯದ ಅವುಗಳು ಉಸಿರಿರುವವರೆಗೆ ಮಾನವನಿಗೆ ಋಣಿಯಾಗಿ ಇರುವವು. ಶ್ವಾನದ ನಿಯತ್ತಿನ ಬಗ್ಗೆ ಸಾಕಷ್ಟು ನಿದರ್ಶನಗಳು ಈಗಾಗಲೇ ಆಗಿ ಹೋಗಿವೆ.
Viral video: ನಾಯಿಯನ್ನು ಮೊದಲ ಬಾರಿ ನೋಡಿದ ಮಗುವಿನ ಕ್ಯೂಟ್ ರಿಯಾಕ್ಷನ್ ನೋಡಿ
ನಾಯಿ(Dog) ಅಂದ್ರೆ ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಪ್ರೀತಿಯ ಪೆಟ್ ಒಂದು ಮನೆಯಲ್ಲಿದ್ದರೆ ಅದರಲ್ಲೇ ನೆಮ್ಮದಿ ಕಾಣುವ ಬಹಳಷ್ಟು ಮಂದಿ ಇದ್ದಾರೆ. ಇಲ್ಲೊಂದು ಪುಟ್ಟ ನಾಯಿಮರಿಯನ್ನು ಕುಟುಂಬ ಎಷ್ಟು ಕ್ಯೂಟ್ ಆಗಿ ವೆಲ್‌ಕಮ್(Welcome) ಮಾಡಿದೆ ನೋಡಿ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಎಲ್ಲರಿಗೂ ನಾಯಿ ಸಾಕೋ ಹವ್ಯಾಸವಿರುತ್ತದೆ. ವಿಜಯ್ ದೇವರಕೊಂಡ, ರಶ್ಮಿಕಾ, ಕೀರ್ತಿ ಸುರೇಶ್, ಮಲೈಕಾರಂತ ಬಹಳಷ್ಟು ಸೆಲೆಬ್ರಿಟಿಗಳು ಪ್ರೀತಿಯಿಂದ ನಾಯಿಗಳನ್ನು ಸಾಕುತ್ತಾರೆ. ಹಾಗೆಯೇ ಜನ ಸಾಮಾನ್ಯರೂ ಅಷ್ಟೇ ಶ್ವಾನಗಳನ್ನು ಸಾಕುತ್ತಾರೆ. ಒಂದು ನಾಯಿ ಸಾಕುವಾಗ ಕುಟುಂಬಕ್ಕೆ ತಮ್ಮ ಪೆಟ್ ಜೊತೆ ಹೊಸ ಬಾಂಡಿಂಗ್ ಬಂದಿರುತ್ತದೆ. ಈಗ ಕುಟುಂಬವೊಂದು ಪುಟ್ಟ ಪಪ್ಪಿಯನ್ನು ಮನೆಗೆ ಸ್ವಾಗತಿಸೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರಿಂದ ಮೆಚ್ಚುಗೆ ಪಡೆಯುತ್ತಿದೆ.