ಹೆಬ್ಬಾವಿನ ಸುಳಿಯಿಂದ ಮೇಕೆಯನ್ನು ರಕ್ಷಿಸಿದ ಮೂವರು ಸಾಹಸಿ ಬಾಲಕರು

Published : Nov 18, 2022, 04:52 PM IST
ಹೆಬ್ಬಾವಿನ ಸುಳಿಯಿಂದ ಮೇಕೆಯನ್ನು ರಕ್ಷಿಸಿದ ಮೂವರು ಸಾಹಸಿ ಬಾಲಕರು

ಸಾರಾಂಶ

ಇಲ್ಲೊಂದು ಕಡೆ ಹೆಬ್ಬಾವಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೇಕೆಯೊಂದನ್ನು ಮೂವರು ಪುಟಾಣಿಗಳು ಸೇರಿಕೊಂಡು ರಕ್ಷಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಧೈರ್ಯ ಸಾಹಸಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  

ಹಾವುಗಳಲ್ಲಿ ಹೆಬ್ಬಾವುಗಳು ಅತ್ಯಂತ ಅಪಾಯಕಾರಿಗಳು. ಅವುಗಳು ಹಿಡಿತಕ್ಕೆ ಸಿಲುಕಿದರೆ ಬಿಡಿಸಿಕೊಳ್ಳುವುದು ಭಾರಿ ಕಷ್ಟದ ಕೆಲಸ. ಹಾವು ಎಂದ ತಕ್ಷಣ ಮಕ್ಕಳು ಬಿಡಿ ದೊಡ್ಡವರು ಕೂಡ ಹೆದರಿ ಓಡುವುದೇ ಹೆಚ್ಚು. ಆದರೆ ಇಲ್ಲೊಂದು ಕಡೆ ಹೆಬ್ಬಾವಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೇಕೆಯೊಂದನ್ನು ಮೂವರು ಪುಟಾಣಿಗಳು ಸೇರಿಕೊಂಡು ರಕ್ಷಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಧೈರ್ಯ ಸಾಹಸಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಸಾಮಾನ್ಯವಾಗಿ ಹೆಬ್ಬಾವುಗಳು(Python) ತಮ್ಮ ಬೇಟೆಯ (prey) ಬಗ್ಗೆ ತುಸು ಹೆಚ್ಚೆ ಮುತುವರ್ಜಿ ವಹಿಸುತ್ತವೆ. ತನ್ನ ಬೇಟೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವವರೆಗೂ ಅನೇಕ ಪ್ರಾಣಿಗಳಿಗೆ ತಾವು ಹಾವಿನ ರಕ್ಕಸ ಸುಳಿಯಲ್ಲಿ ಸಿಲುಕಿದ್ದೇವೆ ಎಂಬುದು ತಿಳಿಯುವುದಿಲ್ಲ. ಅಲ್ಲದೇ ತಿಳಿಯುವ ವೇಳೆಗೆ ಏನು ಮಾಡಲಾಗದ ಸ್ಥಿತಿ ತಲುಪಿರುತ್ತವೆ. 

ಹಾಗೆಯೇ ಇಲ್ಲೊಂದು ಕಡೆ ಮೇಕೆಯೊಂದು (Goat) ಹಾವಿನ ಹಿಡಿತಕ್ಕೆ ಸಿಲುಕಿದೆ. ಒದ್ದಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಹೊಲದಲ್ಲಿ ಮೇಯಲು ಬಿಟ್ಟಿದ್ದ ಮೇಕೆಯ ಮೇಲೆ ಹೆಬ್ಬಾವು ದಾಳಿ ನಡೆಸಿ ಸಂಪೂರ್ಣವಾಗಿ ಅದನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಇತ್ತ ಮೇಕೆ ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲಾಗದೇ ಹೆಣಗಾಡುತ್ತಿದ್ದು, ಹಾವು ಹಿಡಿತ ಬಿಗಿಗೊಳಿಸುತ್ತಿದ್ದಂತೆ ನರಳಾಡುತ್ತಾ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದೆ. ಕೂಡಲೇ ಕೈಯಲ್ಲಿ ಕೋಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನಿಧಾನವಾಗಿ ಹಾವಿನ ಹಿಡಿತದಿಂದ ಮೇಕೆಯನ್ನು ಬಿಡಿಸಲು ಯತ್ನಿಸಿದ್ದಾರೆ. ಸ್ವಲ್ಪ ಬಿಡಿಸಿದಷ್ಟು ಮತ್ತೆ ಮತ್ತೆ ಹಿಡಿತ ಬಿಗಿಗೊಳಿಸುತ್ತಿದ್ದ ಹಾವಿನ (snake) ಹಿಡಿತದಿಂದ ಮೇಕೆಯನ್ನು ಬಹಳ ಹರ ಸಾಹಸಪಟ್ಟು ಮಕ್ಕಳು ರಕ್ಷಣೆ ಮಾಡಿದ್ದಾರೆ.

 

ಈ ವಿಡಿಯೋ ಈಗ ಸಾಕಷ್ಟು ವೈರಲ್ (Viral video) ಆಗಿದ್ದು, ಅನೇಕರು ಪುಟ್ಟ ಬಾಲಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಾಲಕ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದು ಎಳೆದರೆ ಮತ್ತೊರ್ವ ತಲೆಯನ್ನು ಹಿಡಿದುಕೊಂಡಿದ್ದಾನೆ ಮತ್ತೊಬ್ಬ ಹಾವಿನ ಮಧ್ಯಭಾಗದಲ್ಲಿ ಹಿಡಿದು ಎಳೆದಿದ್ದು ಈ ವೇಳೆ ನಿಧನಕ್ಕೆ ಎದ್ದ ಮೇಕೆ ಬದುಕಿದೆನೋ ಬಡ ಜೀವ ಅಂತ ಸ್ಥಳದಿಂದ ಹೊರಟು ಹೋಗಿದೆ. ಹಾವಿನಿಂದ ಮೇಕೆಯನ್ನು ರಕ್ಷಿಸುವ ಬದಲು ವಿಡಿಯೋ ಮಾಡುತ್ತಿದ್ದ ನಿಂತಿದ್ದವ ಯಾರು ಎಂದು ನೋಡುಗರೊಬ್ಬರು ಪ್ರಶ್ನಿಸಿದ್ದಾರೆ. 

ಹೆಬ್ಬಾವಿನಿಂದ ಸಾಕುನಾಯಿ ರಕ್ಷಿಸಿದ ಬಾಲಕರು: ನೋಡಿ ಬಾಲಕರ ಶೌರ್ಯದ ವಿಡಿಯೋ

ಹೆಬ್ಬಾವಿನಿಂದ ಶ್ವಾನದ ರಕ್ಷಣೆ

ಕೆಲ ದಿನಗಳ ಹಿಂದೆ ಮೂವರು ಪುಟ್ಟ ಬಾಲಕರು ತಮ್ಮ ಪ್ರೀತಿಯ ಸಾಕುನಾಯಿಯನ್ನು (Pet dog) ದೈತ್ಯ ಹೆಬ್ಬಾವಿನ ಹಿಡಿತದಿಂದ ಬಿಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಾಲಕರ ಪ್ರೀತಿಯ ಶ್ವಾನವೊಂದನ್ನು ಹೆಬ್ಬಾವು ತನ್ನ ಬೇಟೆಯಾಗಿಸಿ ಬಿಗಿಯಾಗಿ ಹಿಡಿದುಕೊಂಡಿತ್ತು. ಆದರೆ ಪ್ರೀತಿಯ ಶ್ವಾನ ಕಣ್ಣೆದುರೇ ಸಾಯುವುದನ್ನು ಯಾವುದೇ ಶ್ವಾನ ಪ್ರಿಯನೂ ಸಹಿಸಕೊಳ್ಳಲಾರ ಅರಗಿಸಿಕೊಳ್ಳಲಾರ. ಅದೇ ರೀತಿ ಈ ಪುಟ್ಟ ಮಕ್ಕಳು ತಮ್ಮ ಕಣ್ಣೆದುರೇ ಹೆಬ್ಬಾವೊಂದು ತಮ್ಮ ಪ್ರೀತಿಯ ಶ್ವಾನವನ್ನು ಬಿಗಿಯಾಗಿ ಹಿಡಿದುಕೊಂಡು ತಿನ್ನಲು ಯತ್ನಿಸುತ್ತಿರುವುದನ್ನು ನೋಡಿದ್ದೇ ತಡ ತಮ್ಮೆಲ್ಲಾ ಶ್ರಮ ಹಾಕಿ ಶಕ್ತಿ ಮೀರಿ ತಮ್ಮ ಪ್ರೀತಿಯ ಶ್ವಾನದ ಉಳಿವಿಗೆ ಯತ್ನಿಸಿದ್ದು, ಅದರಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಬಾಲಕರ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಜೊತೆಗೆ ಬಾಲಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿತ್ತು. ನಿಜಕ್ಕೂ ಈ ಬಾಲಕರು ಸಾಹಸಿ ಕೆಲಸ ಮಾಡುತ್ತಿದ್ದಾರೆ ಎಂದು ನೋಡುಗರು ಬಾಲಕರ ಧೈರ್ಯವನ್ನು ಕೊಂಡಾಡಿದ್ದರು.

Viral News: ಮಹಿಳೆಯ ಹೊಟ್ಟೆಯಿಂದ 4 ಅಡಿ ಉದ್ದದ ಹಾವು ಎಳೆದು ತೆಗೆದ ವೈದ್ಯರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!