ಸ್ನೇಹಿತರ ಕಿತಾಪತಿ... ಶವ ಪೆಟ್ಟಿಗೆಯೇರಿ ಮದುವೆ ಮನೆಗೆ ಬಂದ ಮದುಮಗ

Published : Nov 17, 2022, 05:13 PM IST
ಸ್ನೇಹಿತರ ಕಿತಾಪತಿ... ಶವ ಪೆಟ್ಟಿಗೆಯೇರಿ ಮದುವೆ ಮನೆಗೆ ಬಂದ ಮದುಮಗ

ಸಾರಾಂಶ

ವರನ ಸ್ನೇಹಿತರು ಮದುವೆ ದಿನ ಕಿತಾಪತಿ ಮಾಡಿದ್ದು, ಇದರಿಂದ ವರ ಶವಪೆಟ್ಟಿಗೆಯೇರಿ ಮದುವೆ ಮನೆಗೆ ಬರುವಂತಾಗಿದೆ. ವರನನ್ನು ಶವಪೆಟ್ಟಿಗೆಯಲ್ಲಿ ತುಂಬಿಸಿ ಕರೆತರುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗುತ್ತಿದೆ.

ಮದುವೆಯ ದಿನ ಸ್ನೇಹಿತರು ಮಾಡುವ ಕಿತಾಪತಿಗಳು ತುಂಟಾಟ, ತರಲೆ ಕೀಟಲೆಗಳಿಗೆ ಲೆಕ್ಕವೇ ಇರುವುದಿಲ್ಲ. ಸಿಕ್ಕಿದೊಂದೇ ಛಾನ್ಸ್, ಇನ್ಮುಂದೆ ಇಂತಹ ಅವಕಾಶ ಸಿಗುವುದಿಲ್ಲ ಎಂದು ಭಾವಿಸಿ ಇಲ್ಲದ ತಲೆಹರಟೆಗಳನ್ನು ಮಾಡುತ್ತಾರೆ. ದಿನಗಳ ಹಿಂದಷ್ಟೇ ಅಮೆರಿಕಾದಲ್ಲಿ ಭಾರತೀಯ ವರನೊಬ್ಬನ ಸ್ನೇಹಿತರು ಗೆಳೆಯನ ಮದುವೆ ದಿನ ಹೆಣ್ಮಕ್ಕಳಂತೆ ಸೀರೆಯುಟ್ಟು ಮದುಮಗ ಬಿದ್ದು ಬಿದ್ದು ನಗುವಂತೆ ಮಾಡಿದ್ದರು. ಅದೇ ರೀತಿ ಇಲ್ಲೊಂದು ಕಡೆ ವರನ ಸ್ನೇಹಿತರು ಮದುವೆ ದಿನ ಕಿತಾಪತಿ ಮಾಡಿದ್ದು, ಇದರಿಂದ ವರ ಶವಪೆಟ್ಟಿಗೆಯೇರಿ ಮದುವೆ ಮನೆಗೆ ಬರುವಂತಾಗಿದೆ. ವರನನ್ನು ಶವಪೆಟ್ಟಿಗೆಯಲ್ಲಿ ತುಂಬಿಸಿ ಕರೆತರುತ್ತಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗುತ್ತಿದೆ. ಆದರೆ ಎಲ್ಲರೂ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೇ ಮದುವೆ ದಿನ ಹೀಗೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಂದಹಾಗೆ ಅಮೆರಿಕಾದ (America) ನ್ಯೂಯಾರ್ಕ್‌ನಲ್ಲಿ (New York) ಈ ಮದುವೆ ನಡೆದಿದೆ. ನ್ಯೂಯಾರ್ಕ್‌ ಪೋಸ್ಟ್ ವರದಿ ಮಾಡಿರುವಂತೆ ವೈರಲ್ ಆಗಿರುವ ವಿಡಿಯೋದಲ್ಲಿ ಅನಾಮಧೇಯ ವರನೋರ್ವ (Groom) ಶವಪೆಟ್ಟಿಗೇರಿ ಮದುವೆ ಮನೆಗೆ ಬರುತ್ತಿದ್ದರೆ ವಧುವಿನ ಸಹಾಯಕರು ಆತನಿಗೆ ಈ ಮೆರವಣಿಗೆಗೆ ಜೊತೆಯಾಗಿದ್ದಾರೆ. ವರನ ಗೆಳೆಯರು ಶವಪೆಟ್ಟಿಗೆಗೆ ಹೆಗಲು ಕೊಟ್ಟು ಒಳಗಿದ್ದ ಮದುಮಗನನ್ನು ಮದುವೆ ಮನೆಗೆ ಕರೆತಂದಿದ್ದಾರೆ. 

 

ಆದರೆ ಈ ವಿಡಿಯೋದಲ್ಲಿ ನಾಲ್ವರು ಹುಡುಗರು ಹಾಗೂ ಇಬ್ಬರು ಹುಡುಗಿಯರು (Girl) ಕಾರಿನಿಂದ ಶವಪೆಟ್ಟಿಗೆಯನ್ನು (coffin) ಇಳಿಸಿ ಕರೆದುಕೊಂಡು ಹೋಗುತ್ತಿರುವ ದೃಶ್ಯವಿದೆ. ಆದರೆ ಎಲ್ಲೂ ವಧುವಾಗಲಿ ವರನಾಗಲಿ ವಿಡಿಯೋದಲ್ಲಿ ಕಾಣಿಸುತ್ತಿಲ್ಲ. ಅಲ್ಲದೇ ವಧು ವರರ ಪ್ರತಿಕ್ರಿಯೆ ವಿಡಿಯೋದಲ್ಲಿಲ್ಲ. ಆದರೆ ನೆಟ್ಟಿಗರು ಮಾತ್ರ ಈ ಕ್ರಮವನ್ನು ಇಷ್ಟಪಟ್ಟಿಲ್ಲ. ಬಹುತೇಕರು ಬದುಕನ್ನು ಬದಲಿಸುವ ಬದುಕಿನ ಮಹತ್ವದ ಕ್ಷಣವೆನಿಸಿದ ಮದುವೆಯ ಸಮಯದಲ್ಲಿ ಶವಪೆಟ್ಟಿಗೆ ತಂದಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ವಿಡಿಯೋವನ್ನು ಮೂಲತಃ ಟಿಕ್‌ಟಾಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಅಲ್ಲಿ ಇದೇನು ಶವಸಂಸ್ಕಾರವೆಂದು (Cremation) ನೀವು ಭಾವಿಸಿದ್ದೀರಾ? ಅಲ್ಲ ಇದು ನನ್ನ ಸ್ನೇಹಿತ ಹಸೆಮಣೆಯೇರುವ ಮೊದಲು ಮದುವೆ ಮಂಟಪಕ್ಕೆ ಬರಲು ನಿರ್ಧರಿಸಿದ ರೀತಿ ಎಂದು ವಿಡಿಯೋ ಮೇಲೆ ಸಬ್‌ಟೈಟಲ್ (SubTitle) ನೀಡಲಾಗಿದೆ. 

ಹಾರ ಹಾಕುವ ವೇಳೆ ಹಿಂಜರಿದ ವರ: ವಧು ಏನ್ ಮಾಡಿದ್ಲು ನೋಡಿ

ಆದರೆ ಅನೇಕರು ಇದೊಂದು ಹುಚ್ಚು ನಿರ್ಧಾರ ಎಂದು ಕಾಮೆಂಟ್ ಮಾಡಿದ್ದಾರೆ. ಇತ್ತ ಮದ್ವೆ ಮನೆಗೆ ಶವಪೆಟ್ಟಿಗೆ ಆಗಮಿಸುತ್ತಿದ್ದಂತೆ ಮದ್ವೆ (Wedding) ಮನೆಯಲ್ಲಿದ್ದವರೆಲ್ಲ ಗಾಬರಿಯಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ. ಒಟ್ಟಿನಲ್ಲಿ ತಮ್ಮ ಮದ್ವೆ ದಿನವನ್ನು ವಿಭಿನ್ನವಾಗಿಸಲು ಹೀಗೂ ಮಾಡಬಹುದು ಎಂಬುದನ್ನು ಈ ಮದುಮಗ ತೋರಿಸಿಕೊಟ್ಟಿದ್ದಾನೆ. ಆದರೆ ಭಾರತದಲ್ಲಿ ಹೀಗೆ ಮಾಡಿದರೆ ಪೋಷಕರು ಕೋಲು, ದೊಣ್ಣೆ ಚಪ್ಪಲಿ ಹಿಡಿದು ಬರುವುದಂತೂ ಪಕ್ಕಾ. 

ಮದುವೆ ನೆರವೇರಿಸಿಕೊಟ್ಟ ಮುಸ್ಲಿಂ ಮಹಿಳಾ ಧರ್ಮಗುರು : ವಿಡಿಯೋ ವೈರಲ್

ಇತ್ತೀಚೆಗೆ ಮದುವೆ ದಿನ ಎಲ್ಲರಿಗಿಂತ ವಿಭಿನ್ನವಾಗಿ ಮದುವೆ ಮನೆ ಪ್ರವೇಶಿಸಬೇಕು ಎಂಬುದು ಬಹುತೇಕ ನವ ಜೋಡಿಗಳ ಆಸೆ. ಇದೇ ಕಾರಣಕ್ಕೆ ಇದಕ್ಕಾಗಿ ಇನ್ನಿಲ್ಲದ ಸಾಹಸ ಮಾಡುತ್ತಾರೆ. ಕೆಲ ದಿನಗಳ ಹಿಂದೆ ವಧುವೊಬ್ಬಳು ಮದುವೆ ಮನೆಗೆ ಕುದುರೆ ಏರಿ ಬರುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಳು. ಇದಾದ ಬಳಿಕ ವರನೋರ್ವ ಮದುವೆ ಮನೆಗೆ ಜೆಸಿಬಿಯಲ್ಲಿ ಬರುವ ಮೂಲಕ ಸುದ್ದಿಯಾಗಿದ್ದ. ಒಟ್ಟಿನಲ್ಲಿ ಜೀವನದಲ್ಲಿ ಒಮ್ಮೆ ಆಗುವ ಮದುವೆಯನ್ನು ಬಹಳ ಕಾಲ ನೆನಪಿನಲ್ಲಿರಿಸಿಕೊಳ್ಳಲು ಎಲ್ಲರೂ ಇನ್ನಿಲ್ಲದ ಸಾಹಸ ಮಾಡುತ್ತಿರುವುದಂತು ಸುಳ್ಳಲ್ಲ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?