ಭಾರತ ವಿರೋಧಿ ಉಲ್ಫಾ ಉಗ್ರ ಪರೇಶ್ ಬರುವಾ ಶಿಕ್ಷೆ ಇಳಿಕೆ

By Kannadaprabha News  |  First Published Jan 16, 2025, 10:52 AM IST

ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರತ್ಯೇಕವಾದಿ ಉಲ್ಫಾ ಉಗ್ರ ಪರೇಶ್ ಬರುವಾನ ಶಿಕ್ಷೆಯನ್ನು ಬಾಂಗ್ಲಾದೇಶ ಹೈಕೋರ್ಟ್ 14 ವರ್ಷಕ್ಕೆ ಇಳಿಸಿದೆ. 


ಢಾಕಾ: ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರತ್ಯೇಕವಾದಿ ಉಲ್ಫಾ ಉಗ್ರ ಪರೇಶ್ ಬರುವಾನ ಶಿಕ್ಷೆಯನ್ನು ಬಾಂಗ್ಲಾದೇಶ ಹೈಕೋರ್ಟ್ 14 ವರ್ಷಕ್ಕೆ ಇಳಿಸಿದೆ. ಅಲ್ಲದೇ  ಹಲವರನ್ನು  ಖುಲಾಸೆಗೊಳಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಇದೇ ಪ್ರಕರಣದಲ್ಲಿ ಬರುವಾಗೆ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು. ಅದನ್ನು ಇದೀಗ 14 ವರ್ಷಕ್ಕೆ ಇಳಿಸಲಾಗಿದೆ. ಭಾರತದ ಎನ್‌ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಬರುವಾ, ಉಲ್ಫಾ ಸಂಘಟನೆ ಮೂಲಕ ಈಶಾನ್ಯ ರಾಜ್ಯಗಳಲ್ಲಿ ದೇಶ ವಿರೋಧಿ ಕೃತ್ಯ ನಡೆಸಿದ್ದ. ಹೀಗಾಗಿ 2004ರಲ್ಲಿ ಬಾಂಗ್ಲಾದ ಚಿತ್ತಗಾಂಗ್ ಮೂಲಕ ಭಾರತಕ್ಕೆ 10 ಟ್ರಕ್ ಶಸ್ತ್ರಾಸ್ತ್ರ ಸಾಗಿಸಲು ಯತ್ನಿಸಿದ್ದ.

ಅದನ್ನು ವಶಪಡಿಸಿಕೊಂಡಾಗ ಟ್ರಕ್‌ನೊಳಗೆ 27,000ಕ್ಕೂ ಹೆಚ್ಚು ಗ್ರೇನೆಡ್, 150 ರಾಕೆಟ್ ಲಾಂಚರ್, 11 ಲಕ್ಷಕ್ಕೂ ಹೆಚ್ಚು ಮದ್ದುಗುಂಡು, 1100 ಸಬ್ ಮಷಿನ್ ಗನ್, 1  ಕೋಟಿ ಗುಂಡು ವಶಪಡಿಸಿಕೊಳ್ಳಲಾಗಿತ್ತು. ಇದರಲ್ಲಿ  ಬರುವಾ  ಮತ್ತು ಇತರ ನಾಲ್ವರಿಗೆ ಗಲ್ಲು ಶಿಕ್ಷೆ ಪ್ರಕಟಿಸಲಾಗಿತ್ತು.ಸದ್ಯ ಬರುವಾ  ಚೀನಾದಲ್ಲಿದ್ದಾನೆ ಎನ್ನಲಾಗಿದೆ.

Tap to resize

Latest Videos

ಇದನ್ನೂ ಓದಿ: ಕದನ ವಿರಾಮ, ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಉಗ್ರರ ಸಮ್ಮತಿ; ಇಸ್ರೇಲ್‌- ಹಮಾಸ್‌ ಕದನದಲ್ಲಿ ಮಹತ್ವದ ಬೆಳವಣಿಗೆ

click me!