ಗಿನ್ನಿಸ್‌ ಪುಟ ಸೇರಿದ ಭಾರಿ ಗಾತ್ರದ ಸ್ಟ್ರಾಬೆರಿ

Suvarna News   | Asianet News
Published : Feb 17, 2022, 04:18 PM IST
ಗಿನ್ನಿಸ್‌ ಪುಟ ಸೇರಿದ ಭಾರಿ ಗಾತ್ರದ ಸ್ಟ್ರಾಬೆರಿ

ಸಾರಾಂಶ

ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಬೆಳೆದ ರೈತ 289 ಗ್ರಾಂ ತೂಕ 18 ಸೆ.ಮೀ. ಉದ್ದ 4 ಸೆ.ಮೀ. ಅಗಲ  ಗಿನ್ನೆಸ್ ದಾಖಲೆ ಪುಟ ಸೇರಿದ ಸ್ಟ್ರಾಬೆರಿ

ಇಸ್ರೇಲ್‌ನ ರೈತರೊಬ್ಬರು ಅತೀ ದೊಡ್ಡ ಸ್ಟ್ರಾಬೆರಿ ಬೆಳೆದು ಗಿನ್ನಿಸ್‌ ವಿಶ್ವದಾಖಲೆಯ ಪುಟ ಸೇರಿದ್ದಾರೆ. ಈ ಸ್ಟ್ರಾಬೆರಿ 289 ಗ್ರಾಂ ತೂಕವಿದ್ದು,ವಿಶ್ವದ ಅತ್ಯಂತ ಭಾರವಾದ ಸ್ಟ್ರಾಬೆರಿ ಎಂಬ ಹೆಗ್ಗಳಿಕೆ ಗಳಿಸಿದೆ. ಇದು 18 ಸೆಂಟಿಮೀಟರ್ ಉದ್ದ, 4 ಸೆಂಟಿ ಮೀಟರ್ ದಪ್ಪ ಇದೆ ಹಾಗೂ 34 ಸೆಂಟಿಮೀಟರ್ ಸುತ್ತಳತೆಯನ್ನು ಹೊಂದಿದೆ. ಇಸ್ರೇಲ್‌ನ ಏರಿಯಲ್ ಚಾಹಿ(Ariel Chah) ಎಂಬುವರ ಕುಟುಂಬವು ಈ ಭಾರಿ ಗಾತ್ರದ ಸ್ಟ್ರಾಬೆರಿಯನ್ನು ಬೆಳೆದಿದೆ. 

ಈ ಸ್ಟ್ರಾಬೆರಿಯು ಇಲಾನ್ ಜಾತಿಗೆ ಸೇರಿದ ಸ್ಟ್ರಾಬೆರಿಯಾಗಿದ್ದು, ಇಸ್ರೇಲ್‌ನ ಕಡಿಮಾ ಜೋರಾನ್‌ನಲ್ಲಿರುವ ( Kadima-Zoran) ಏರಿಯಲ್ ಅವರ ಕುಟುಂಬದ  'ಸ್ಟ್ರಾಬೆರಿ ಇನ್ ದಿ ಫೀಲ್ಡ್‌ ಹೆಸರಿನ ಫಾರ್ಮ್‌ನಲ್ಲಿ ಇದು ಬೆಳೆದಿದೆ.ಇಲಾನ್ ವಿಧದ ಸ್ಟ್ರಾಬೆರಿಗಳನ್ನು ಮೂಲತಃ ಇಸ್ರೇಲ್‌ನ ಕೃಷಿ ಸಂಶೋಧನಾ ಸಂಸ್ಥೆಯ (ARO) ಸಂಶೋಧಕರಾದ ಡಾ ನಿರ್ ಡೈ ( Dr Nir Dai) ಅವರು ಟೆಲ್-ಅವೀವ್ (Tel-Aviv)ಬಳಿಯ ಬೆಟ್-ಡಗನ್‌ನಲ್ಲಿರುವ(Bet-Dagan) ಎಆರ್‌ಒ ವೊಲ್ಕನಿ ಕೇಂದ್ರದಲ್ಲಿ (ARO Volcani Center) ಬೆಳೆಸಿದ್ದರು. ಇಲಾನ್ ಜಾತಿಯ ಸ್ಟ್ರಾಬೆರಿಯೂ ದೊಡ್ಡ ಗಾತ್ರಕ್ಕೆ ಖ್ಯಾತಿ ಗಳಿಸಿದೆ.

ಕಲಘಟಗಿಯಲ್ಲಿ ಸ್ಟ್ರಾಬೆರಿ ಬೆಳೆದು ಲಕ್ಷಾಂತರ ಆದಾಯ ಪಡೆದ ಗುತ್ತಿಗೆದಾರ!

ಜನವರಿ ಅಂತ್ಯದಲ್ಲಿ ಮತ್ತು ಫೆಬ್ರವರಿ ಆರಂಭದಲ್ಲಿ ಬರುವ ಈ ಸ್ಟ್ರಾಬೆರಿ ಋತುವಿನಲ್ಲಿ, ಇದು ವಿಶೇಷವಾಗಿ ತಂಪಾಗಿರುತ್ತದೆ. ಈ ಸ್ಟ್ರಾಬೆರಿ ಹೂ ಬಿಡುವುದರಿಂದ ಆರಂಭವಾಗಿ 45 ದಿನಗಳಿಗಿಂತಲೂ ಹೆಚ್ಚು ಕಾಲ ನಿಧಾನವಾಗಿ ಬೆಳವಣಿಗೆ ಹೊಂದಿದ್ದು ಇದು ಪೂರ್ಣ ಮಾಗಿದಾಗ ಈ ಭಾರಿ ಗಾತ್ರಕ್ಕೆ ಕಾರಣವಾಯಿತು ಎಂದು ಡಾ ನಿರ್ ದಾಯ್ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಗೆ ತಿಳಿಸಿದರು.

ಅನೇಕ ಬೆರಿಗಳು ಬೆಳೆದು ಒಟ್ಟಿಗೆ ಬೆಸೆದು ಒಂದು ದೊಡ್ಡ ಸ್ಟ್ರಾಬೆರಿಯನ್ನು ರೂಪಿಸುತ್ತವೆ. ವಿಶ್ವದ ಅತ್ಯಂತ ತೂಕದ ಸ್ಟ್ರಾಬೆರಿ ಹಿಂದಿನ ದಾಖಲೆ 250 ಗ್ರಾಂ ಆಗಿತ್ತು. ಈ ಸ್ಟ್ರಾಬೆರಿಯನ್ನು ಕೊಜಿ ನಕಾವೊ (Koji Nakao)  ಅವರು ಫುಕುವೋಕಾದಲ್ಲಿ ಬೆಳೆಸಿದ್ದರು ಮತ್ತು 2015 ರ ಜನವರಿ 28ರಂದು , ಜಪಾನ್‌ನ (Japan) ಫುಕುವೋಕಾದಲ್ಲಿ (Fukuoka) ಇದನ್ನು ತೂಕ ಮಾಡಲಾಗಿತ್ತು. ಇದು ಅಮೌ ಎಂಬ ಜಪಾನಿನ ಜಾತಿಗೆ ಸೇರಿದ ಸ್ಟ್ರಾಬೆರಿಯಾಗಿದೆ.

ಸ್ಟ್ರಾಬೆರಿ ಬೆಳೆದು ಭರ್ಜರಿ ಲಾಭ ಮಾಡುತ್ತಿರುವ ಚಿಕ್ಕಬಳ್ಳಾಪುರದ ರೈತ ಸತೀಶ್ ರೆಡ್ಡಿ!

ಸ್ಟ್ರಾಬೆರಿಯ ಉಪಯೋಗ
ಇಂದಿನ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಸೇವಿಸುವಂತಹ ಹಣ್ಣಿನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.ಈ ಹಣ್ಣನ್ನು ತಿನ್ನುವ ಮೂಲಕ ಹಲವಾರು ರೋಗಗಳಿಂದ ದೂರವಿರುತ್ತೀರಿ. ಇಲ್ಲಿಸ್ಟ್ರಾಬೆರಿ ಗಳ ಬಗ್ಗೆ ಹೇಳುತ್ತಿದ್ದೇವೆ.ಬೇಸಿಗೆಯ ಕಾಲದಲ್ಲಿ ಸ್ಟ್ರಾಬೆರಿಯನ್ನು ಸೇವಿಸಬೇಕು. 

 

ಸ್ಟ್ರಾಬೆರಿ ದೇಹದಲ್ಲಿರುವ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ವೈಜ್ಞಾನಿಕ ಅಧ್ಯಯನದಲ್ಲೂ ಸಾಬೀತಾಗಿದೆ. ಸ್ಟ್ರಾಬೆರಿಗಳನ್ನು ಬಳಸುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ರಕ್ಷಿಸಿಕೊಳ್ಳಬಹುದು. ವಾಸ್ತವವಾಗಿ, ಸ್ಟ್ರಾಬೆರಿಗಳಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಗುಣಗಳಿವೆ. ಆದ್ದರಿಂದ ಇದನ್ನು ಅತ್ಯಂತ ಲಾಭದಾಯಕ ಹಣ್ಣು ಎಂದು ಪರಿಗಣಿಸಲಾಗಿದೆ.ಒತ್ತಡ ಒಂದು ರೋಗವಾಗಿ ಮಾರ್ಪಡುತ್ತಿದೆ. ಆದರೆ ಸ್ಟ್ರಾಬೆರಿಗಳನ್ನು ಬಳಸುವುದರಿಂದ  ಒತ್ತಡ ಹೆಚ್ಚಾಗುವುದಿಲ್ಲವಂತೆ.

ಸ್ಟ್ರಾಬೆರಿಗಳನ್ನು ತಿನ್ನುವುದರಿಂದ  ಹೃದಯ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದು ಹೃದಯ ಸಂಬಂಧಿ ತೊಂದರೆಗಳನ್ನು ಉಂಟುಮಾಡುವುದಿಲ್ಲ. ನಿಯಮಿತವಾಗಿ ಸ್ಟ್ರಾಬೆರಿಗಳನ್ನು ಬಳಸಿದರೆ, ಹಲವಾರು ರೋಗಗಳಿಂದ ಸುರಕ್ಷಿತವಾಗಿರಬಹುದು. ಸ್ಟ್ರಾಬೆರಿಗಳು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ. ಸ್ಟ್ರಾಬೆರಿಯಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಪರಿಣಾಮಕಾರಿ ಗುಣಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌
ಸೌದಿ ಬಳಿಕ ದುಬೈ, ಅಬುದಾಭಿಯಲ್ಲೂ ಭಾರೀ ಮಳೆ