
ವಾಶಿಂಗ್ಟನ್ (ಅ.02) ಭಾರತ ಸೇರಿದಂತೆ ಹಲವು ದೇಶಗಳಿಗೆ ದುಬಾರಿ ತೆರಿಗೆ, ಹೆಚ್1ಬಿ ವೀಸಾ ನೀತಿ ಸೇರಿದಂತೆ ಒಂದರ ಮೇಲೊಂದರಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆದೇಶಗಳ ಜಗತನ್ನೇ ಬೆಚ್ಚಿ ಬೀಳಿಸುತ್ತಿದೆ. ಡೋನಾಲ್ಡ್ ಟ್ರಂಪ್ ಪ್ರಬಲ ರಾಷ್ಟ್ರಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೊಸ ಹೊಸ ರಣಂತ್ರ ಹೂಡುತ್ತಿದ್ದಾರೆ. ಆದರೆ ಜಗತ್ತಿಗೆ ಶಾಕ್ ಕೊಡುತ್ತಿರುವ ಡೋನಾಲ್ಡ್ ಟ್ರಂಪ್‌ಗೆ ಇದೀಗ ಕೋವಿಡ್ ವೈರಸ್ ಶಾಕ್ ಕೊಟ್ಟಿದೆ. ಅಮೆರಿಕದಲ್ಲಿ ಕೋವಿಡ್ ಹೊಸ ತಳಿ ಸ್ಟ್ರಾಟಸ್ ವೈರಸ್ ತೀವ್ರವಾಗಿ ಹರಡುತ್ತಿದೆ.
ಅಮೆರಿಕದ ಸೆಂಟರ್ ಫಾರ್ ಡೀಸಿಸ್ ಕಂಟ್ರೋಲ್ ಆ್ಯಂಡ್ ಪ್ರಿವೇಶ್ಶನ್ (CDC) ಕೋವಿಡ್ ವೈರಸ್ ಅಂಕಿ ಅಂಶ ಪ್ರಕಟಿಸಿದೆ. ಅಮೆರಿಕದಲ್ಲಿ ಕಾಣಿಸಿಕೊಂಡಿರುವುದು ರೂಪಾಂತರಗೊಂಡಿರುವ ಕೋವಿಡ್ ಸ್ಟ್ರಾಟಸ್ ವೈರಸ್. ಇದು ಹೆಚ್ಚಾದಿ ತಾಜ್ಯ ನೀರು ಅಥವಾ ಶುಚಿಯಾಗಿಲ್ಲದ ನೀರಿನಿಂದ ಹರಡುತ್ತಿದೆ ಎಂದಿದೆ. ಅಮರಿಕದ 19 ರಾಜ್ಯದಲ್ಲಿ ಕೋವಿಡ್ ಸ್ಟ್ರಾಟಸ್ ವೈರಲ್ ತೀವ್ರಗೊಂಡಿದೆ ಎಂದು ಸಿಡಿಸಿ ತನ್ನ ವರದಿಯಲ್ಲಿ ಹೇಳಿದೆ.
ಅಮೆರಿಕದಲ್ಲಿ ಕೋವಿಡ್ ವೇರಿಯೆಂಟ್ ವೈರಸ್ ಮಾರ್ಚ್ ತಿಂಗಳ ಅಂತ್ಯದಲ್ಲಿ ಶೇಕಡಾ 3ರಷ್ಟಿತ್ತು. ಆದರೆ ಸೆಪ್ಟೆಂಬರ್ 27ರ ಅಂತ್ಯದ ವೇಳೆ ಬರೋಬ್ಬರಿ ಶೇಕಡಾ 85ರಷ್ಟು ಏರಿಕೆ ಕಂಡಿದೆ. ಅಮೆರಿಕದಲ್ಲಿ ಸ್ಟ್ರಾಟಸ್ ಕೋವಿಡ್ ವೇರಿಯೆಂಟ್ ತೀವ್ರಗೊಳ್ಳುತ್ತಿದೆ. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಬಹುತೇಕ ಪ್ರಕರಣಗಳು ಮೈಲ್ಡ್ ಆಗಿದೆ ಎಂದು ಸಿಡಿಸಿ ವರದಿ ಮಾಡಿದೆ. ಆದರೆ ಸ್ಟಾಟಸ್ ವೈರಸ್ ಆರೋಗ್ಯ ಸಮಸ್ಯೆ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಸದ್ಯ ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸ್ಟ್ರಾಟಸ್ ವೇರಿಯೆಂಟ್ ಅಥವಾ XFG ತಳಿ ತೀವ್ರವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ SARS-CoV-2 ಕೋವಿಡ್ ವೇರಿಯೆಂಟ್ ರೂಪಾಂತರದಿಂದ ಕಾಣಿಸಿಕೊಂಡಿರುವ ವೈರಸ್ ಈ ಸ್ಟ್ರಾಟಸ್. ಎರಡು ಹೈಬ್ರಿಡ್ ಒಮಿಕ್ರಾನ್ ಸಬ್ ವೇರಿಯೆಂಟ್‌ನಿಂದ ಹುಟ್ಟಿಕೊಂಡಿರುವ ಈ ಕೋವಿಡ್ ಸ್ಟ್ರಾಟಸ್(XFG) ವೇರಿಯೆಂಟ್ 2025ರ ಜನವರಿಯಲ್ಲಿ ಸೌತ್ಈಸ್ಟ್ ಏಷ್ಯಾದಲ್ಲಿ ಪತ್ತೆಯಾಗಿತ್ತು. ಆದರೆ ಈ ವೈರಸ್ ಹೆಚ್ಚು ಸದ್ದು ಮಾಡುತ್ತಿರುವುದು ಅಮೆರಿಕದಲ್ಲಿ. ಇದು ಒಮಿಕ್ರಾನ್ ವೇರಿಯೆಂಟ್‌ಗಿಂತ ತೀವ್ರವಾಗಿದೆ. ಹೆಚ್ಚು ಆರೋಗ್ಯ ಸಮಸ್ಯೆ ಸೃಷ್ಟಿಸಲಿದೆ. ಹೀಗಾಗಿ ಮುತುವರ್ಜಿ ವಹಿಸುವಂತೆ ಅಮರಿಕ ಸಿಡಿಸಿ ಕೇಂದ್ರ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ