
ಕಠ್ಮಂಡು: ನೇಪಾಳದಲ್ಲಿ 2 ವರ್ಷದ ಹೆಣ್ಣು ಮಗುವನ್ನು ಹೊಸ ಜೀವಂತ ದೇವತೆಯಾಗಿ ನೇಮಕ ಮಾಡಲಾಗಿದೆ. ಹಿಂದೆ ದೇವತೆಯಾಗಿ ಅಥವಾ ಕುಮಾರಿಯಾಗಿ ನೇಮಿಸಲ್ಪಟ್ಟಿದ್ದ ಮಗುವ ಇತ್ತೀಚೆಗೆ ಪ್ರೌಢಾವಸ್ಥೆಗೆ ಕಾಲಿಟ್ಟ ಹಿನ್ನೆಲೆಯಲ್ಲಿ ಈಗ ಹೊಸ ದೇವತೆಯನ್ನು ನೇಮಕ ಮಾಡಲಾಗಿದೆ. ಇಲ್ಲಿ ಜೀವಂತ ಹೆಣ್ಣು ಮಗುವನ್ನು ದೇವಿಯಂತೆ ಪೂಜಿಸಲಾಗುತ್ತದೆ. ಎರಡು ವರ್ಷ 8 ತಿಂಗಳ ಮಗು ಅರ್ಯತಾರಾ ಶಕ್ಯಾ ನೇಪಾಳದ ಹೊಸ ಕುಮಾರಿ ದೇವತೆಯಾಗಿದ್ದಾರೆ.
ನೇಪಾಳದ ಹೊಸ ಜೀವಂತ ದೇವತೆಯಾಗಿ ಆಯ್ಕೆಯಾದ 2 ವರ್ಷದ ಬಾಲಕಿಯನ್ನು ಮಂಗಳವಾರ ನಡೆದ ದೇಶದ ಅತಿ ದೊಡ್ಡ ಮತ್ತು ಮಹತ್ವದ ಹಿಂದೂ ಉತ್ಸವದದಲ್ಲಿ ಕುಟುಂಬ ಸದಸ್ಯರು ಕಠ್ಮಂಡುವಿನ ಓಣಿಯಲ್ಲಿರುವ ಮನೆಯಿಂದ ದೇವಾಲಯದ ಅರಮನೆಗೆ ಕರೆದುಕೊಂಡು ಹೋಗಿದ್ದಾರೆ. 2 ವರ್ಷದ ಮಗುವನ್ನು ಅಪ್ಪ ಎತ್ತಿಕೊಂಡು ಹೋಗುತ್ತಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 2 ವರ್ಷ 8 ತಿಂಗಳು ವಯಸ್ಸಿನ ಆರ್ಯತಾರ ಶಕ್ಯಳನ್ನು ಹೊಸ ಕುಮಾರಿ ಅಥವಾ ಕನ್ಯೆ ದೇವತೆಯಾಗಿ ಆಯ್ಕೆ ಮಾಡಲಾಗಿದ್ದು, ಸಂಪ್ರದಾಯದ ಪ್ರಕಾರ ಈ ಮಗು ಪ್ರೌಢಾವಸ್ಥೆಯನ್ನು ತಲುಪಿದ ನಂತರವಷ್ಟೇ ಹೊಸ ಕನ್ಯಾ ದೇವತೆಯನ್ನು ಆಯ್ಕೆ ಮಾಡಲಾಗುತ್ತದೆ.
ಇಲ್ಲಿ ಕುಮಾರಿಗಳನ್ನು ಅಥವಾ ಕನ್ಯಾ ದೇವತೆಯನ್ನು ನೇವಾರ್ ಸಮುದಾಯದ ಶಾಕ್ಯ ಕುಲಗಳಿಂದ ಆಯ್ಕೆ ಮಾಡಲಾಗುತ್ತದೆ. ಈ ಮಗುವನ್ನು ಕಠ್ಮಂಡು ಕಣಿವೆಯ ಸ್ಥಳೀಯರು, ಹಿಂದೂಗಳು ಮತ್ತು ಬೌದ್ಧರು ಆರಾಧಿಸುತ್ತಾರೆ. ಈ ಕನ್ಯಾ ದೇವತೆಯಾಗಿ 2 ರಿಂದ 4 ವರ್ಷದೊಳಗಿನ ಹೆಣ್ಣು ಮಗುವನ್ನು ಆಯ್ಕೆ ಮಾಡಲಾಗುತ್ತದೆ. ಈ ಸ್ಥಾನಕ್ಕೆ ಆಯ್ಕೆಯಾಗುವ ಮಗು ಕಲೆಯಿಲ್ಲದ ಚರ್ಮ ಹೊಂದಿರಬೇಕು, ಕೂದಲು, ಕಣ್ಣು ಮತ್ತು ಹಲ್ಲುಗಳನ್ನು ಹೊಂದಿರಬೇಕು ಹಾಗೂ ಅವರು ಕತ್ತಲೆಗೆ ಹೆದರಬಾರದು ಈ ಎಲ್ಲ ಮಾನದಂಡಗಳನ್ನು ಹೊಂದಿರುವ ಮಗುವನ್ನು ದೇವತೆಯಾಗಿ ಆಯ್ಕೆ ಮಾಡಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ ನಡೆದ ಇಂದ್ರ ಜಾತ್ರಾ ಉತ್ಸವದ ಸಮಯದಲ್ಲಿ, ಈ ಹಿಂದಿನ ಕುಮಾರಿಯನ್ನು ಭಕ್ತರು ಎಳೆಯುವ ರಥದ ಮೇಲೆ ಕೂರಿಸಿ ನಗರ ಪ್ರದಕ್ಷಿಣೆ ಮಾಡಲಾಗಿತ್ತು. ಕುಮಾರಿ ಯಾವಾಗಲೂ ಕೆಂಪು ಬಣ್ಣವನ್ನು ಧರಿಸುತ್ತಾಳೆ, ಕೂದಲನ್ನು ಮೇಲೆ ಗಂಟುಗಳಲ್ಲಿ ಕಟ್ಟಲಾಗುತ್ತದೆ ಮತ್ತು ಅವರ ಹಣೆಯ ಮೇಲೆ ಮೂರನೇ ಕಣ್ಣನ್ನು ಚಿತ್ರಿಸಲಾಗುತ್ತದೆ. ವಾರಪೂರ್ತಿ ನಡೆಯುವ ಈ ಇಂದ್ರ ಜಾತ್ರಾ ಉತ್ಸವವು ಅಕ್ಟೋಬರ್‌ನಲ್ಲಿ ನೇಪಾಳದಲ್ಲಿ ನಡೆಯುವ ಆಚರಣೆಗಳ ಸರಣಿಯಲ್ಲಿ ಮೊದಲನೆಯದಾಗಿದೆ. ಇದರಲ್ಲಿ ಮುಖ್ಯ ಹಬ್ಬವಾದ ದಶೈನ್ ಮತ್ತು ಬೆಳಕಿನ ಹಬ್ಬವಾದ ತಿಹಾರ್ ಅಥವಾ ದೀಪಾವಳಿ ಸೇರಿವೆ.
ನೇಪಾಳದ ಜೀವಂತ ದೇವತೆಯನ್ನು ಕುಮಾರಿ ಎಂದು ಕರೆಯಲಾಗುತ್ತದೆ, ಈ ಯುವತಿಯನ್ನು ನೇವಾರಿ ಬೌದ್ಧ ಸಮುದಾಯದಿಂದ ಆಯ್ಕೆ ಮಾಡಲಾಗಿದೆ. ಅವಳನ್ನು ಹಿಂದೂ ದೇವತೆ ತಲೇಜು ಅಂದರೆ ದುರ್ಗೆಯ ಅವತಾರ ದ ಜೀವಂತ ಸಾಕಾರವೆಂದು ಪರಿಗಣಿಸಲಾಗುತ್ತದೆ. ಕುಮಾರಿಯನ್ನು ಕಠಿಣವಾದ ವಿಧ್ಯುಕ್ತ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಒಮ್ಮೆ ಆಯ್ಕೆಯಾದ ನಂತರ, ಹಿಂದೂಗಳು ಮತ್ತು ಬೌದ್ಧರು ಇಬ್ಬರೂ ದೈವಿಕ ವ್ಯಕ್ತಿಯಾಗಿ ಆಕೆಯನ್ನು ಪೂಜಿಸುತ್ತಾರೆ, ಅವರು ವಯಸ್ಸಿಗೆ ಬರುವವರೆಗೆ ಅಥವಾ ತೀವ್ರವಾದ ಗಾಯ ಅಥವಾ ಅನಾರೋಗ್ಯದಿಂದ ಬಳಲುವವರೆಗೆ ಪ್ರತ್ಯೇಕವಾಗಿ ವಾಸಿಸುತ್ತಾರೆ ಆ ಸಮಯದಲ್ಲಿ ದೇವಿಯು ತನ್ನ ದೇಹವನ್ನು ಬಿಡುತ್ತಾಳೆ ಎಂದು ನಂಬಲಾಗುತ್ತದೆ.
ಕುಮಾರಿ ದೇವಿಗೆ ಇರಬೇಕಾದ ಪರಿಪೂರ್ಣತೆಗಳು ಮಾನದಂಡಗಳು ಹೀಗಿವೆ.
ಮೊದಲನೇಯದಾಗಿ ಕನ್ಯೆಯಾಗಿರಬೇಕು.
ಹಸುವಿನಂತೆ ಕಣ್ಣುರೆಪ್ಪೆಗಳನ್ನು ಹೊಂದಿರಬೇಕು
ಅಗಲವಾದ ಹಣೆ
ಶಂಖದ ಚಿಪ್ಪಿನಂತಹ ಕುತ್ತಿಗೆ
ದುರ್ವಾಸನೆ ಇರಬಾರದು
ಪರಿಪೂರ್ಣ ಆಕಾರದ ಸಂಪೂರ್ಣ ಬಳಿ ಹಲ್ಲುಗಳು
ಪ್ರಶಾಂತತೆ ಮತ್ತು ನಿರ್ಭಯತೆಯ ಸಂಕೇತ
ಕಲೆಗಳು, ಮಚ್ಚೆಗಳು ಅಥವಾ ಜನ್ಮ ಗುರುತುಗಳಿಲ್ಲದಿರುವುದು
ಸಪ್ತಛತ ಎಲೆಯಂತೆ ರೂಪುಗೊಂಡ ದೇಹ ಇರಬೇಕು
ಬಾತುಕೋಳಿಯಂತೆ ಮೃದುವಾದ ಮತ್ತು ಸ್ಪಷ್ಟವಾದ ಧ್ವನಿ
ರಾಜನಂತೆಯೇ ಜಾತಕ, ದುಂಡಗಿನ ತಲೆ, ದುಂಡಗಿನ ಭುಜಗಳು
ಚೆನ್ನಾಗಿ ರೂಪುಗೊಂಡ ಹಿಮ್ಮಡಿ ಆಕಾರದ ಪಾದಗಳು
ಪಾದದ ಅಡಿಭಾಗದ ಕೆಳಗೆ ವೃತ್ತ, ದುಂಡಗಿನ ಕಾಲ್ಬೆರಳುಗಳು
ಶುದ್ಧ ದೇಹ, ಕಪ್ಪು ನೇರ ಕೂದಲು ಮತ್ತು ಕಪ್ಪು ಕಣ್ಣುಗಳು
ಸುಂದರವಾದ ಚರ್ಮ, ಸೂಕ್ಷ್ಮ ಮತ್ತು ಮೃದುವಾದ ಕೈಗಳು ಮತ್ತು ಪಾದಗಳು
ಸಣ್ಣ ಮತ್ತು ತೇವಾಂಶವುಳ್ಳ ನಾಲಿಗೆ, ಬಲವಾದ ದೇಹ
ಹೀಗೆ ಕನ್ಯಾಕುಮಾರಿಯನ್ನು ಹಲವು ಕಠಿಣ ಮಾನದಂಡಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: ಡ್ರಗ್ ಓವರ್‌ಡೋಸ್ ಆಗಿ ನಾಲ್ವರು ಸಾವು: ಮಕ್ಕಳ ಶವ ಬೀದಿಯಲ್ಲಿರಿಸಿ ಪೋಷಕರ ಆಕ್ರೋಶ
ಇದನ್ನೂ ಓದಿ: ರಾಜಸ್ಥಾನದಲ್ಲಿ ಕೇಸನ್ ಫಾರ್ಮಾ ಸಂಸ್ಥೆಯ ಕಪ್ ಸಿರಪ್ ಸೇವಿಸಿ ಇಬ್ಬರು ಮಕ್ಕಳು ಸಾವು: ವೈದ್ಯನು ಅಸ್ವಸ್ಥ
ಇದನ್ನೂ ಓದಿ: ಆತ ಊರಲ್ಲಿದ್ದವರ ಜೊತೆಗೆಲ್ಲಾ ಮಲಗುತ್ತಿದ್ದ: ಅದ್ಕೆ ಬ್ರೇಕಪ್ ಆಯ್ತು
ಇದನ್ನೂ ಓದಿ: ಇವ್ರು ಮೇಷ್ಟ್ರು ಹೆಂಗಾದ್ರೋ: ಬಿಸಿಯೂಟದವರಿಗೆ ನೀಡಿದ್ದ ಚೆಕ್‌ನಲ್ಲಿ ಹಲವು ಮಿಸ್ಟೆಕ್: ಬ್ಯಾಂಕ್‌ನಿಂದ ಚೆಕ್ ರಿಜೆಕ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ