
ಪ್ರಪಂಚದೆಲ್ಲೆಡೆ ದಿನವೂ ಯಾವುದಾದರೂ ಒಂದು ಕಾರಣಕ್ಕೆ ಪ್ರತಿಭಟನೆ ನಡೆಯುತ್ತಲೇ ಇರುತ್ತದೆ. ಕೆಲವು ಪ್ರತಿಭಟನೆಗಳು ಪೊಲೀಸರು ಸೇನೆಯಿಂದಲೂ ನಿಯಂತ್ರಿಸಲಾಗದೇ ಕೈ ಮೀರಿ ಹೋಗಿ ಸಾಕಷ್ಟು ಸಾವು ನೋವು ಸಂಭವಿಸುತ್ತದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭಾರತದಲ್ಲಿ ಪೊಲೀಸರು ಮೊದಲಿಗೆ ಲಾಠಿ ಚಾರ್ಜ್ ಮಾಡುತ್ತಾರೆ. ಆದರೆ ಅದರಿಂದಲೂ ನಿಯಂತ್ರಿಸಲು ಆಗದೇ ಹೋದಾಗ ಅಶ್ರುವಾಯು ಪ್ರಯೋಗ, ಜಲಫಿರಂಗಿ, ಗಾಳಿಯಲ್ಲಿ ಗುಂಡು, ಕಂಡಲ್ಲಿ ಗುಂಡು ಮುಂತಾದ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಕ್ರಮ ಕೈಗೊಳ್ಳುತ್ತಾರೆ. ಅಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಪ್ರತಿಭಟನಾಕಾರರಿಗೆ ಹೆಚ್ಚು ದೈಹಿಕ ಹಾನಿಯಾಗದಂತೆ ಜೀವಕ್ಕೆ ಅಪಾಯವಾಗದಂತೆ ಓಡಿಸಬಹುದಾದ ಒಂದು ಕಾರ್ಯತಂತ್ರವಾಗಿದೆ. ಆದರೆ ಇಲ್ಲೊಂದು ಕಡೆ ಜಲಫಿರಂಗಿ ಪ್ರಯೋಗಕ್ಕೂ ಬಗ್ಗದ ಪ್ರತಿಭಟನಾಕಾರರು ಏನು ಮಾಡಿದ್ದಾರೆ ನೋಡಿ. ಈ ವೀಡಿಯೋ ನೋಡಿದರೆ ಪೊಲೀಸರು, ಹಾಗೂ ಆಡಳಿತ ವಲಯ ಆತಂಕಗೊಳ್ಳುವುದು ಪಕ್ಕಾ.
ಜಲಫಿರಂಗಿಗೆ ಪ್ರತಿಯಾಗಿ ಫೈರಿಂಗ್ ಶಾಟ್ಸ್ ಬಳಸಿದ ಪ್ರತಿಭಟನಾಕಾರರು:
ಜಾರ್ಜಿಯಾ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯೊಂದರಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಆದರೆ ಪೊಲೀಸರು ಚಾಪೆ ಕೆಳಗೆ ನುಗ್ಗಿದ್ದರೆ ಇಲ್ಲಿ ಪ್ರತಿಭಟನಾಕಾರರು ರಂಗೋಲಿ ಕೆಳಗೆ ನುಗ್ಗುವ ಯತ್ನ ಮಾಡಿದ್ದು, ಪೊಲೀಸರ ಜಲಫಿರಂಗಿಗೆ ಪ್ರತಿಯಾಗಿ ಪ್ರತಿಭಟನಾಕಾರರು ಬೆಂಕಿಯುಗುಳುವ ಫೈರಿಂಗ್ ಶಾಟ್ಸ್‌ಗಳನ್ನು ಪೊಲೀಸರ ವಿರುದ್ಧ ಬಿಟ್ಟಿದ್ದಾರೆ. ಇದರ ವೀಡಿಯೋ ಈಗ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಪ್ರತಿಭಟನಾಕಾರರ ಕೃತ್ಯ ಪೊಲೀಸರು ಹಾಗೂ ಆಡಳಿತ ವಲಯಕ್ಕೆ ದಿಗ್ಭ್ರಮೆ ಮೂಡಿಸಿದೆ.
ಇಟಲಿಯ ಮೆಲೋನಿ ಬರ್ತ್‌ಡೇಗೆ ಪ್ರೇಮಿಯಂತೆ ಮಂಡಿಯೂರಿ ಗಿಫ್ಟ್ ನೀಡಿದ ಅಲ್ಬೇನಿಯಾ ಪ್ರಧಾನಿ : video
alexshatberg ಎಂಬ ರೆಡಿಟ್ ಬಳಕೆದಾರರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ thecompletefacts ಎಂಬ ಥ್ರೆಡ್ ಪೇಜ್‌ನಲ್ಲೂ ಈ ವೀಡಿಯೋ ವೈರಲ್ ಆಗುತ್ತಿದೆ. ಜಲಫಿರಂಗಿಗೆ ಬದಲು ಜಾರ್ಜಿಯಾದಲ್ಲಿ ಪ್ರತಿಭಟನಾಕಾರರು ಪಟಾಕಿಗಳನ್ನು ಬಳಸಿದರು ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರೆಡಿಟ್‌ನಲ್ಲಿ ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಅನೇಕರು ಈ ಮೂಲಕ ನೀವು ಇದು ಯುರೋಪ್ ಜಾರ್ಜಿಯಾ ಯುಎಸ್ ಜಾರ್ಜಿಯಾ ಅಲ್ಲ ಎಂದು ಹೇಳಬಹುದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪೊಲೀಸರ ಮೇಲೆ ದಾಳಿ ಮಾಡಿದರೆ ನೀವು ಸತ್ತಂತೆ. ನೀವು ನಿಮ್ಮ ಜೀವನದುದ್ದಕ್ಕೂ ಜೈಲಿನಲ್ಲಿರಬೇಕಾಗುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಜಾರ್ಜಿಯಾ ಮೆಲೋನಿ ಜೊತೆಗಿನ ಮೀಮ್ಸ್‌ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಮೋದಿ
ಆ ಪ್ರತಿಭಟನೆಗಳು ಇನ್ನೂ ಸೌಮ್ಯವಾಗಿದ್ದವು. ಹಸಿವು ಅಥವಾ ಬಡತನದಿಂದ ಬರುವ ಪ್ರತಿಭಟನೆಗಳು ಬಹಳಷ್ಟು ಭಿನ್ನವಾಗಿವೆ. ಅಮೆರಿಕ ಹಲವು ದಶಕಗಳಿಂದ ಸುರಕ್ಷಿತವಾಗಿದ್ದು, ನಿಜವಾದ ನಾಗರಿಕ ಅಶಾಂತಿ ಹೇಗಿರುತ್ತದೆ ಎಂದು ನಮಗೆ ತಿಳಿದೇ ಇಲ್ಲ. ಅರ್ಧದಷ್ಟು ಪೊಲೀಸ್ ಪಡೆ ಇನ್ನರ್ಧದಷ್ಟು ಸನ್ನಿವೇಶಗಳನ್ನು ಒಟ್ಟಿಗೆ ಎದುರಿಸಿದ ಹಾಗೆ ಇದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ...
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ