*ರೋಗಿಗಳಿಗಾಗಿ ಮಿನಿ ಗ್ರಂಥಾಲಯ ಆರಂಭಿಸಿದ 9 ವರ್ಷದ ಅನೈಕ
*ಭಾರತೀಯ ಮೂಲದ ಅಮೆರಿಕಾ ಬಾಲಕನ ವಿಡಿಯೋ ವೈರಲ್
*ಅನೈಕ್ ಚಿಂತನಶೀಲ ಗೆಸ್ಚರ್‌ಗೆ ನೆಟ್ಟಿಗರಿಂದ ಪ್ರಶಂಸೆ!
ಯುಎಸ್‌ಎ(ಡಿ. 03): ಆಸ್ಪತ್ರೆಗೆ ದಾಖಲಾದ ಕೋವಿಡ್ ರೋಗಿಗಳ (Covid Patients) ಒಂಟಿತನ ದೂರ ಮಾಡಲು ಭಾರತೀಯ ಮೂಲದ ಅಮೆರಿಕಾದ 9 ವರ್ಷದ ಬಾಲಕ ಅನೈಕ್ (Anaik) ‘ಲವಿಂಗ್ ಲೈಬ್ರರಿ’ (Loving Library) ಆರಂಭಿಸಿದ್ದಾನೆ. ಈ ಯೋಜನೆಯ ಬಗ್ಗೆ ಸ್ವತಃ ಅನೈಕ್ ವಿವರಿಸಿದ ವಿಡಿಯೋ ಈಗ ವೈರಲ್ ಆಗಿದೆ. ಅಮೆರಿಕದ ಫೀನಿಕ್ಸ್‌ನ 9 ವರ್ಷದ ಬಾಲಕನ ಸ್ಪೂರ್ತಿದಾಯಕ ವೀಡಿಯೊ ನೆಟ್ಟಿಗರನ್ನು ಬೆರಗುಗೊಳಿಸಿದೆ. ಎಲ್ಲೆನ್ ಡಿಜೆನೆರೆಸ್ ಹೋಸ್ಟ್ (Ellen DeGeneres) ಮಾಡಿದ ದಿ ಎಲ್ಲೆನ್ ಶೋನ (The Ellen Show) ಅಧಿಕೃತ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
9 ವರ್ಷದ ಬಾಲಕ ಅನೈಕ್ ಇರುವ ಈ ವೀಡಿಯೊ ಎಲ್ಲೆನ್ ಮತ್ತು ಅನೈಕ್ ನಡುವಿನ ಸಂಭಾಷಣೆಯಾಗಿದ್ದು, ಅಗತ್ಯವಿರುವ ರೋಗಿಗಳಿಗೆ ತನ್ನ ಉಚಿತ ಲೈಬ್ರರಿಯ ಕಲ್ಪನೆಯನ್ನು ಅವನು ಹೇಗೆ ರೂಪಿಸಿದನು ಎಂಬುದನ್ನು ಬಾಲಕ ವಿವರಿಸಿದ್ದಾನೆ. ತನ್ನ ಅಜ್ಜಿಗೆ ಕೋವಿಡ್‌ನಿಂದ ಪಾಸಿಟಿವ್ ಬಂದ ನಂತರ ಲೈಬ್ರರಿಯನ್ನು ರಚಿಸುವ ಆಲೋಚನೆಯನ್ನು ಹೇಗೆ ಪಡೆದ ಎಂದು ಅನೈಕ್ ವಿಡಿಯೋದಲ್ಲಿ ತಿಳಿಸಿದ್ದಾನೆ.
ಕೋವಿಡ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಸಂತೋಷದಾಯಕ ವಾತಾವರಣ ನಿರ್ಮಿಸಲು ಅನೈಕ್ ನಿರ್ಧರಿಸಿದ್ದಾನೆ. ಮುಂದುವರೆಸಿ ನಿರಾಶ್ರಿತರು ಸೇರಿದಂತೆ ಸಾಮಾನ್ಯ ಜೀವನನಿಂದ ಕೊಂಚ ಬಿಡುವು ಬೇಕಿದ್ದವರಿಗೆ ಗ್ರಂಥಾಲಯವನ್ನು ವಿಸ್ತರಿಸಿದ್ದಾನೆ. ಅನೈಕ್ ಪುಸ್ತಕಗಳನ್ನು (Books) ಓದುವುದನ್ನು ಇಷ್ಟಪಡುತ್ತಾರೆ ಮತ್ತು ‘ಲವಿಂಗ್ ಲೈಬ್ರರಿ’ಯಲ್ಲಿ ಶಾಂತಿಯುತ ಸಮಯವನ್ನು ಕಳೆಯುವ ಜನರಿಗೆ ಸಹಾಯ (Helping People) ಮಾಡಲು ಬಯಸುತ್ತಾನೆ ಎಂದು ಹೇಳಿದ್ದಾನೆ.
Vineeta Agarwal: ಟ್ವಿಟ್ಟರ್ ಸಿಇಒ ಪರಾಗ್ ಪತ್ನಿ ವಿನೀತಾ ಅಗರ್ವಾಲ್ ಯಾರು ಗೊತ್ತಾ?
“9 ವರ್ಷದ ಅನೈಕ್ ಮುದ್ದು ಮುದ್ದಾಗಿದ್ದಾನೆ. ಅಗತ್ಯವಿರುವ ಜನರಿಗಾಗಿ ಅವನು ತಮ್ಮ ಸಮುದಾಯದಲ್ಲಿ ಉಚಿತ ಗ್ರಂಥಾಲಯವನ್ನು ರಚಿಸಿದ್ದಾರೆ, ”ಎಂದು ಶೀರ್ಷಿಕೆ ನೀಡಿ ದಿ ಎಲ್ಲೆನ್ ಶೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. 1.1 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾವಿರಾರು ಪ್ರತಿಕ್ರಿಯೆಗಳೊಂದಿಗೆ ವೀಡಿಯೊ ವೈರಲ್ ಆಗಿದೆ. ಜನರು ಕ್ಲಿಪ್ ಅನ್ನು ಇಷ್ಟಪಟ್ಟಿದ್ದಾರೆ ಮತ್ತು ಅನೈಕ್ ಅವರ ಚಿಂತನಶೀಲ ಗೆಸ್ಚರ್‌ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅನೇಕರು ಅನೈಕ್ ಅವರ ಉದ್ದೇಶಕ್ಕಾಗಿ ದೇಣಿಗೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ರೊಟ್ಟಿ ಮಾಡುತ್ತಿರುವ ಪಾಕ್ ಬಾಲಕಿಯ ವಿಡಿಯೋ ವೈರಲ್!
ಬಾಲಕಿಯೊಬ್ಬಳು ಆಲೂಗಡ್ಡೆಯನ್ನು ಕತ್ತರಿಸುತ್ತಿರುವ ಸಾಮಾನ್ಯವಾದ ವಿಡಿಯೋ ಇದಾಗಿದ್ದು, ಇದನ್ನು ಲಕ್ಷಾಂತರ ಮಂದಿ ವೀಕ್ಷಿಸುವ ಮೂಲಕ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಹಸಿರು ಕಂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಬಾಲಕಿಯ ವಿಡಿಯೋ ಇದಾಗಿದ್ದು, ಅಂತಹ ವಿಶೇಷತೆಯೇನೋ ಈ ವಿಡಿಯೋದಲ್ಲಿ ಇಲ್ಲ. ಅದಾಗ್ಯೂ ಈ ವಿಡಿಯೋವನ್ನು ಲಕ್ಷಾಂತರ ಜನ ನೋಡಿದ್ದು ಅಚ್ಚರಿ ಎನಿಸಿದೆ. ಪಾಕಿಸ್ತಾನ(Pakistan)ದ ಅಮಿನಾ ರಿಯಾಜ್(Aamina Reyaz) ಹೆಸರಿನ 15 ವರ್ಷದ ಬಾಲಕಿ ಈಕೆ. ಕೆಲವು ತಿಂಗಳ ಹಿಂದೆ ಈಕೆ ರೊಟ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಮತ್ತೆ ಆಕೆ ಅಲೂಗಡ್ಡೆ ಕತ್ತರಿಸುತ್ತಿರುವ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದೆ.
ಅಮಿನಾ ರಿಯಾಜ್ ಕರಾಚಿ(Karachi) ನಗರದ ಹೊರವಲಯದ ಸಿಂಧ್ ಪ್ರಾಂತ್ಯದಲ್ಲಿ ವಾಸ ಮಾಡುತ್ತಿದ್ದು, ಅಲೆಮಾರಿ(nomads) ಸಮುದಾಯದ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅದಾಗ್ಯೂ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ಅಮಿನಾ ಅಲ್ಲ, ಆಕೆಯ ನೆರೆ ಮನೆಯಲ್ಲಿ ವಾಸಿಸುವ ತರುಣನೋರ್ವ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಈ ಬಾಲಕಿಯ ಆಕರ್ಷಣೀಯವಾದ ಕಿರುನಗೆ ಹಾಗೂ ಸುಂದರವಾದ ಕಣ್ಣುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಇತ್ತೀಚಿನ ವಿಡಿಯೋದಲ್ಲಿ ಆಕೆ ಅಲೂಗಡ್ಡೆ ಕತ್ತರಿಸುತ್ತಿದ್ದಾಳೆ. ಇನ್ಸ್ಟಾಗ್ರಾಮ್‌ನಲ್ಲಿ ಇಕಿಯಾ5(Ekiya5) ಹೆಸರಿನಲ್ಲಿರುವ ಖಾತೆಯಿಂದ ಸೆಪ್ಟೆಂಬರ್ 10ರಂದು ಈ ವಿಡಿಯೋ ಪೋಸ್ಟ್ ಆಗಿದೆ. ಬಹು ಬಣ್ಣದ ಸಂಯೋಜನೆಯನ್ನು ಒಳಗೊಂಡಿರುವ ಸಲ್ವಾರ್ ಧಿರಿಸಿನಲ್ಲಿ ಈಕೆ ಕಂಗೊಳಿಸುತ್ತಿದ್ದಾಳೆ.