Twitterನಲ್ಲಿ ಕ್ಷಣಾರ್ಧದಲ್ಲಿ ಮಾಯವಾದ್ರು ಲಕ್ಷಾಂತರ ಫಾಲೋವರ್ಸ್‌, CEO ಪರಾಗ್ ಮೇಲೆ ಬಳಕೆದಾರ ಗರಂ!

By Suvarna News  |  First Published Dec 3, 2021, 7:55 AM IST

* ಟ್ವಿಟರ್‌ನಿಂದ ನಕಲಿ ಫಾಲೋವರ್ಸ್‌ಗೆ ಕಡಿವಾಣ ಹಾಕಲು ನೂತನ ಕ್ರಮ

* ಬಳಕೆದಾರರ ಅನುಯಾಯಿಗಳಲ್ಲಿ ಏಕಾಏಕಿ ಇಳಿಕೆ

* ಸಿಇಒ ಪರಾಗ್ ಅಗರ್ವಾಲ್ ವಿರುದ್ಧ ಬಳಕೆದಾರರು ಗರಂ


ನವದೆಹಲಿ(ಡಿ.03): ಗುರುವಾರ ರಾತ್ರಿ, ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ (Twitter) ಅನೇಕ ಬಳಕೆದಾರರ ಲಕ್ಷಾಂತರ ಅನುಯಾಯಿಗಳು (Followers) ಏಕಾಏಕಿ ಕಡಿಮೆಯಾಗಿದ್ದಾರೆ. ಇದರಲ್ಲಿ ಸಾಮಾನ್ಯ ಜನರ ಜತೆಗೆ ಸೆಲೆಬ್ರಿಟಿಗಳು, ರಾಜಕಾರಣಿಗಳೂ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi), ರಾಹುಲ್ ಗಾಂಧಿ (Rahul gandhi) ಸೇರಿದಂತೆ ಎಲ್ಲ ದೊಡ್ಡ ನಾಯಕರ ಹಿಂಬಾಲಕರು ಕಡಿಮೆಯಾಗಿದ್ದಾರೆ. ಸಿನಿಮಾ ನಟ ಅಮಿತಾಬ್ ಬಚ್ಚನ್ (Amitabh Bachchan) ಫಾಲೋವರ್ಸ್ ಕೂಡ ಕಡಿಮೆಯಾಗಿದ್ದಾರೆ.

ಫಾಲೋವರ್ಸ್ ಕಡಿಮೆಯಾಗುತ್ತಿರುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಬಳಕೆದಾರರು ದೂರಿದ್ದಾರೆ. ದೆಹಲಿಯ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಮುಖೇಶ್ ಶರ್ಮಾ (Congress MLA Mukhesh Sharma) ಅವರು ಸಿಇಒ ಪರಾಗ್ ಅಗರ್ವಾಲ್ (Twitter CEO Parag Agrawal) ವಿರುದ್ಧ ಕಿಡಿ ಕಾರಿದ್ದಾರೆ. ಧನ್ಯವಾದ ಸಹೋದರ ಪರಾಗ್ ಜಿ, ನಾನು ಎರಡನೇ ಟ್ವೀಟ್ ಮಾಡಿದ ತಕ್ಷಣ ಟ್ವಿಟರ್ ಇಂಡಿಯಾ ನನ್ನ ಹಿಂಬಾಲಕರನ್ನು 68.3 ಸಾವಿರದಷ್ಟು ಕಡಿಮೆ ಮಾಡಿದೆ ಎಂದು ಅವರು ಬರೆದಿದ್ದಾರೆ. ಇದು ಶೂನ್ಯಕ್ಕಿಳಿದರೂ ಆಕಾಶ ಕುಸಿದು ಬೀಳುವುದಿಲ್ಲ. ಮೋದಿ ಸರಕಾರಹೋಗುತ್ತದೆ, ನಿಮ್ಮಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

Latest Videos

undefined

ಅತ್ತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಅವರು ಸುಮಾರು 3,000 ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ದೂರಿದ್ದಾರೆ. ಮಹಿಳಾ ಲೇಖಕಿ ಶೆಫಾಲಿ ವೈದ್ಯ ಅವರು ರಾತ್ರಿ 9.37 ರಿಂದ 10.25 ರ ನಡುವೆ ಸುಮಾರು 800 ಅನುಯಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ನಕಲಿ ಅನುಯಾಯಿಗಳನ್ನು ತೆಗೆದುಹಾಕಲು ಟ್ವಿಟರ್ ಇದನ್ನು ಮಾಡಿದೆ

ನಕಲಿ ಅನುಯಾಯಿಗಳನ್ನು (Fake Follwoers) ತೆಗೆದುಹಾಕುವ ಟ್ವಿಟರ್‌ನ ಕ್ರಮದಿಂದಾಗಿ ಬಳಕೆದಾರರ ಅನುಯಾಯಿಗಳು ಕಡಿಮೆಯಾಗುತ್ತಿರುವ ದೂರುಗಳು ಕೇಳಿ ಬರಿತ್ತಿವೆ. ಅಂತಹ ಅನುಯಾಯಿಗಳನ್ನು ಬಾಟ್‌ಗಳು ಎಂದು ಕರೆಯಲಾಗುತ್ತದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಸಮಸ್ಯೆಯಾಗಿರುವ ಬಾಟ್‌ಗಳನ್ನು ತೊಡೆದುಹಾಕಲು ಟ್ವಿಟರ್ ಈ ಕ್ಲೀನ್-ಅಪ್ ವ್ಯವಸ್ಥೆ ಜಾರಿಗೊಳಿಸಿದೆ. ಇದರ ಅಡಿಯಲ್ಲಿ, ಪಾಸ್‌ವರ್ಡ್ ಮತ್ತು ಫೋನ್ ಸಂಖ್ಯೆಯಂತಹ ವಿವರಗಳನ್ನು ಮರು ಪರಿಶೀಲಿಸಲು ಬಳಕೆದಾರರನ್ನು ಕೇಳಲಾಗುತ್ತದೆ.

ಪರಿಶೀಲನೆ ನಡೆಯುವ ಮೊದಲು ಬಳಕೆದಾರರನ್ನು ಅನುಯಾಯಿಗಳ ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ, ಇದರಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವವರ ಅನುಯಾಯಿಗಳ ಸಂಖ್ಯೆಯಲ್ಲಿ ಹಠಾತ್ ಇಳಿಕೆ ಕಂಡುಬರುತ್ತದೆ. ಖಾತೆಯನ್ನು ಪರಿಶೀಲಿಸಿದ ನಂತರ, ಅನುಯಾಯಿಗಳ ಸಂಖ್ಯೆಯು ಹೆಚ್ಚಾಗುತ್ತದೆ. ಜೂನ್ 2021 ರಲ್ಲಿ Twitter ಇದೇ ರೀತಿಯ ವ್ಯವಸ್ಥೆ ಮಾಡಿತ್ತು. ಆ ಸಮಯದಲ್ಲಿ ನಟ ಅನುಪಮ್ ಖೇರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಫಾಲೋವರ್ಸ್ ಕೊರತೆಯ ಬಗ್ಗೆ ದೂರು ನೀಡಿದ್ದರು.

ಹೀಗಿದ್ದರೂ ಟ್ವಿಇಟರ್‌ ಅಧಿಕೃತವಾಗಿ ಈ ಬಗ್ಗೆ ಏನೂ ಹೇಳಿಲ್ಲ. ಅನುಯಾಯಿಗಳ ಸಂಖ್ಯೆ ಕಡಿಮೆಯಾಗಿದ್ದು ಹೇಗೆ ಎಂಬುವುದಕ್ಕೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. 

Twitter new photo rules: ಹೊಸ CEO, ಹೊಸ ರೂಲ್ಸ್, ಫೋಟೊ ಸಂಬಂಧ ಹಲವು ನಿಬಂಧನೆ

 

ಟ್ವಿಟರ್‌ಗೆ(Twitter) ಹೊಸ ಸಿಇಒ(CEO) ಬಂದಿದ್ದಾರೆ. ಹಾಗೆಯೇ ಒಂದಷ್ಟು ರೂಲ್ಸ್ ಕೂಡಾ ಬದಲಾಗಿವೆ. ಹೌದು. ಟ್ವಿಟರ್‌ನಲ್ಲಿ(Twitter) ಇನ್ನು ಜನರ ಖಾಸಗಿ ಪೋಟೊಗಳನ್ನು ಅವರ ಅನುಮತಿ ಇಲ್ಲದೆ ಬಳಸೋ ಹಾಗಿಲ್ಲ. ಈ ಸಂಬಂಧ ಟ್ವೀಟ್ ಮಾಡಿದ ಟ್ವಿಟರ್, ಇಂದಿನಿಂದ, ಖಾಸಗಿ ವ್ಯಕ್ತಿಗಳ ಸಮ್ಮತಿಯಿಲ್ಲದೆ ಅವರ ಫೋಟೋ ಅಥವಾ ವೀಡಿಯೊಗಳಂತಹ ಖಾಸಗಿ ವಿಚಾರ ಹಂಚಿಕೊಳ್ಳಲು ನಾವು ಅನುಮತಿಸುವುದಿಲ್ಲ. ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನು ಸಹ ನಿಷೇಧಿಸಲಾಗಿದೆ, ಇತರರನ್ನು ಹಾಗೆ ಮಾಡಲು ಬೆದರಿಕೆ ಹಾಕುವುದು ಅಥವಾ ಪ್ರೋತ್ಸಾಹಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.

ಖಾಸಗಿ ಜನರಿಗೆ ಟ್ವಿಟರ್‌ನಲ್ಲಿ ಶೇರ್ ಆದ ತಮ್ಮ ಪರ್ಸನಲ್ ಫೋಟೋ ಅಥವಾ ಗ್ರೂಪ್ ಫೋಟೋಗಳನ್ನು ತೆಗೆಯಿರಿ ಎಂದು ವಿನಂತಿಸಲು ಈ ಹೊಸನಿಯಮಗಳಡಿಯಲ್ಲಿ ಅನಮತಿ ನೀಡಲಾಗಿದೆ. ಖಾಸಗಿ ಮಾಹಿತಿ ರಿವೀಲ್ ಮಾಡುವುದರ ವಿರುದ್ಧ ಈಗಾಗಲೇ ಇರುವ ನಿಯಮದಲ್ಲಿಯೇ ಈ ಹೊಸ ಬದಲಾವಣೆಯೂ ಒಳಗೊಂಡಿದೆ.

click me!