ಮೆಕ್ಸಿಕೋ ಅಧ್ಯಕ್ಷೆಗೆ ಕಿರುಕುಳ: ಹೆಗಲಿಗೆ ಕೈ ಹಾಕಿ ಮುತ್ತಿಕ್ಕಲು ಮುಂದಾದ ಯುವಕ

Published : Nov 06, 2025, 10:43 PM IST
Man Gropes Mexican President

ಸಾರಾಂಶ

Claudia Sheinbaum viral video: ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರಿಗೆ ಸಾರ್ವಜನಿಕವಾಗಿ ಯುವಕನೊಬ್ಬ ಲೈಂ*ಗಿಕ ಕಿರುಕುಳ ನೀಡಿದ್ದಾನೆ. ಮೊದಲು ಇದನ್ನು ಗಂಭೀರವಾಗಿ ಪರಿಗಣಿಸದ ಅಧ್ಯಕ್ಷೆ ನಂತರ ಪೊಲೀಸ್ ದೂರು ದಾಖಲಿಸಿದ್ದಾರೆ.

ಮೆಕ್ಸಿಕೋ ಅಧ್ಯಕ್ಷರಿಗೆ ಲೈಂಗಿಕ ಕಿರುಕುಳ:

ಮೆಕ್ಸಿಕೋ ದೇಶದ ಅಧ್ಯಕ್ಷೆಗೆ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಡೆದಿದೆ. ಮೆಕ್ಸಿಕೋ ನಗರದ ಐತಿಹಾಸಿಕ ನಗರ ಕೇಂದ್ರದ ಬೀದಿಯಲ್ಲಿ ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ನಾಗರಿಕರನ್ನು ಸ್ವಾಗತಿಸುತ್ತಾ ಅವರೊಂದಿಗೆ ಮಾತನಾಡುತ್ತಿದ್ದಾಗ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಅಧ್ಯಕ್ಷೆ ಕ್ಲೌಡಿಯಾ ಭುಜದ ಮೇಲೆ ಒಂದು ಕೈ ಇಟ್ಟು, ಆಕೆಯ ಕತ್ತಿಗೆ ಮುತ್ತಿಕ್ಕಲು ಪ್ರಯತ್ನಿಸಿದ್ದಾನೆ. ಅಲ್ಲದೆ, ಎರಡೂ ಕೈಗಳಿಂದ ಆಕೆಯ ದೇಹವನ್ನು ಹಿಂದಿನಿಂದ ಮುಟ್ಟಲು ಪ್ರಯತ್ನಿಸಿದ್ದಾನೆ.

ಹಿಂದಿನಿಂದ ಬಂದು ಕತ್ತಿಗೆ ಮುತ್ತಿಕ್ಕಲು ಯತ್ನಿಸಿದ ಯುವಕ

ಅಧ್ಯಕ್ಷರ ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸುವಷ್ಟರಲ್ಲಿ ಇಷ್ಟು ಘಟನೆ ನಡೆದು ಹೋಗಿದ್ದು, ಆತ ದೇಶದ ಅಧ್ಯಕ್ಷೆಯನ್ನೇ ಚುಂಬಿಸಲು ಪ್ರಯತ್ನಿಸಿದ್ದ ವೀಡಿಯೊ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಇತ್ತ ಕ್ಲೌಡಿಯಾ ಶೀನ್‌ಬಾಮ್ ತಿರುಗಿದ ತಕ್ಷಣವೇ ಭದ್ರತಾ ಸಿಬ್ಬಂದಿ ಆ ಕಾಮುಕ ವ್ಯಕ್ತಿಯನ್ನು ದೂರ ಎಳೆದೊಯ್ದಿದ್ದಾರೆ. ಈ ವೇಳೆ ಅಧ್ಯಕ್ಷರು ಚಿಂತೆ ಮಾಡಬೇಡಿ ಎಂದು ಹೇಳಿದ್ದಲ್ಲೇ ಆತನ ಜೊತೆಗೆ ಫೋಟೋ ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಲ್ಲೇ ಆತನ ಬೆನ್ನುತಟ್ಟಿದ್ದಾರೆ. ಆದರೆ ಆ ಕಾಮುಕ ಯುವಕ ಮಾತ್ರ ಇತರ ಮಹಿಳೆಯರಿಗೂ ಇದೇ ರೀತಿ ಕಿರುಕುಳ ನೀಡಿದ್ದಾನೆ ಈ ವಿಚಾರ ಅರಿವಾಗುತ್ತಲೇ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಪೊಲೀಸ್ ದೂರು ದಾಖಲಿಸಿದ್ದಾಗಿ ಹೇಳಿದ್ದಾರೆ.

ನನ್ನ ಅಭಿಪ್ರಾಯವೇನೆಂದರೆ, ನಾನು ದೂರು ದಾಖಲಿಸದಿದ್ದರೆ, ಇತರ ಮೆಕ್ಸಿಕನ್ ಮಹಿಳೆಯರಿಗೆ ಏನಾಗುತ್ತದೆ? ಆತ ಅಧ್ಯಕ್ಷರಿಗೆ ಹೀಗೆ ಮಾಡಿದ ಮೇಲೆ ಇತರ ಮಹಿಳೆಯರನ್ನು ಸುಮ್ಮನೇ ಬಿಡುತ್ತಾನಾ? ಎಂದು ಶೀನ್‌ಬಾಮ್ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಆ ವ್ಯಕ್ತಿ ಸಂಪೂರ್ಣವಾಗಿ ಕುಡಿದು ನನ್ನ ಬಳಿಗೆ ಬಂದ ಅವನು ಡ್ರಗ್ಸ್ ವ್ಯಸನಿಯಾಗಿದ್ದಾನೋ ಇಲ್ಲವೋ ನನಗೆ ತಿಳಿದಿಲ್ಲ. ನಾನು ವೀಡಿಯೊಗಳನ್ನು ನೋಡಿದ ನಂತರವೇ ನಿಜವಾಗಿಯೂ ಏನಾಯಿತು ಎಂದು ನನಗೆ ಅರಿವಾಯಿತು ಎಂದು ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಹೇಳಿದ್ದಾರೆ. ಆತನ ವರ್ತನೆ ಎಲ್ಲಾ ರಾಜ್ಯಗಳಲ್ಲಿ ಕ್ರಿಮಿನಲ್ ಅಪರಾಧವೇ ಎಂದು ಸರ್ಕಾರ ಪರಿಶೀಲಿಸಲಿದೆ, ಏಕೆಂದರೆ ಇದು ಕ್ರಿಮಿನಲ್ ಅಪರಾಧವಾಗಬೇಕು ಮತ್ತು ನಾವು ಇದಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಲಿದ್ದೇವೆ ಎಂದು ಅವರು ಹೇಳಿದರು.

ಈ ಘಟನೆ ವೈರಲ್ ಆದ ನಂತರ ಶೀನ್‌ಬಾಮ್ ಅವರ ಭದ್ರತಾ ಸಿಬ್ಬಂದಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ ಮೆಕ್ಸಿಕೋದಲ್ಲಿ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸುಮಾರು 70 ಪ್ರತಿಶತ ಮೆಕ್ಸಿಕನ್ ಮಹಿಳೆಯರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ.

 

 

ಇದನ್ನೂ ಓದಿ: ಬಿಹಾರ ವಿಧಾನಸಭೆಗೆ ಮೊದಲ ಹಂತದ ಮತದಾನ ಅಂತ್ಯ: ಶೇಕಡಾ 64 ಮತದಾನ

ಇದನ್ನೂ ಓದಿ: ಕ್ರಿಕೆಟರ್ ಸುರೇಶ್ ರೈನಾ ಶಿಖರ್ ಧವನ್‌ಗೆ ಇಡಿ ಶಾಕ್‌: ಬೆಟ್ಟಿಂಗ್ ಆಪ್ ಕೇಸಲ್ಲಿ 11.14 ಕೋಟಿ ಆಸ್ತಿ ಮುಟ್ಟುಗೋಲು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!