ಗುರಿ ತಪ್ಪಿ ಅತಿಥಿ ಮೈಮೇಲೆಯೇ ಇಳಿದುಬಿಟ್ಟ ಪ್ಯಾರಾಗ್ಲೈಡರ್: ಜನರು ಕಕ್ಕಾಬಿಕ್ಕಿ- ನಕ್ಕು ನಗಿಸುವ ವಿಡಿಯೋ ವೈರಲ್

By Suchethana D  |  First Published Dec 5, 2024, 2:14 PM IST

ಗುರಿ ತಪ್ಪಿ ಅತಿಥಿ ಮೈಮೇಲೆಯೇ ಇಳಿದುಬಿಟ್ಟ ಪ್ಯಾರಾಗ್ಲೈಡರ್ ನ ನಕ್ಕು ನಗಿಸುವ ವಿಡಿಯೋ ಒಂದು ವೈರಲ್‌ ಆಗಿದೆ.  
 


ಪಾಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ಯಾರಾಗ್ಲೈಡರ್ ಹಠಾತ್ ಕಾರ್ಯಕ್ರಮವೊಂದರ ವೇದಿಕೆ ಮೇಲೆ ಲ್ಯಾಂಡಿಂಗ್ ಆಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು,  ನಕ್ಕು ನಗಿಸುವಂತಿದೆ.   'ಘರ್ ಕೆ ಕಾಲೇಶ್' ಮೂಲಕ X ನಲ್ಲಿ ಹಂಚಿಕೊಂಡ ಈ ಕ್ಲಿಪ್‌ನಲ್ಲಿ, ವೇದಿಕೆಯೊಂದರ ಮೇಲೆ ಅತಿಥಿಗಳು ಆಸೀನರಾಗಿದ್ದರು. ಕಾರ್ಯಕ್ರಮ ಬಲು ಜೋರಾಗಿ ನಡೆದಿತ್ತು. ಆದರೆ ಗುರಿ ತಪ್ಪಿದ ಪ್ಯಾರಾಗ್ಲೈಡರ್ ವೇದಿಕೆ ಮೇಲೆಯೇ ಇಳಿದುಬಿಟ್ಟಿದ್ದಾನೆ! ಇದರಿಂದ ಆಗಸದಿಂದ ಏನೋ ವಸ್ತು ಕೆಳಕ್ಕೆ ಬಿದ್ದಿತೆಂದು ಗಲಿಬಿಲಿಗೊಂಡ ಅತಿಥಿಗಳು ಅಲ್ಲಿಂದ ಚೆಲ್ಲಾಪಿಲ್ಲಿಯಾಗಿ ಓಡಾಡಿದ್ದು ಅದರ ವಿಡಿಯೋ ವೈರಲ್‌ ಆಗಿದೆ. 

ಖಲೀಜ್ ಟೈಮ್ಸ್ ಪ್ರಕಾರ , ಈ ಘಟನೆಯು 2023 ರಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್‌ನ 76 ನೇ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಯಲ್ಲಿ ನಡೆಯಿತು.  ಪ್ಯಾರಾಗ್ಲೈಡರ್ ತನ್ನ ಲ್ಯಾಂಡಿಂಗ್ ಸಮಯ ಮತ್ತು ವೇಗವನ್ನು ತಪ್ಪಾಗಿ ಅಂದಾಜು ಮಾಡಿದ್ದಾನೆ. ಮೈದಾನಕ್ಕೆ ಇಳಿಯುವ ಬದಲು ನೇರವಾಗಿ ಮುಖ್ಯ ಅತಿಥಿಗಳು ಕುಳಿತಿದ್ದ ಮೊದಲ ಸಾಲಿನಲ್ಲಿ ಇಳಿದಿದ್ದಾನೆ. ಮುಖ್ಯ ಅತಿಥಿಯ ಸುತ್ತ ನಿಂತಿದ್ದ ಜನರು ಕೂಡ ಗಾಬರಿಯಿಂದ ಓಡಿ ಹೋಗಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯವಾಗಲಿಲ್ಲ. ಆದರೆ,  ಪ್ಯಾರಾಗ್ಲೈಡರ್ ಲ್ಯಾಂಡಿಂಗ್ ನಂತರ ಹಾನಿಗೊಳಗಾದ ಪ್ಯಾರಾಚೂಟ್‌ನಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಂಡುಬಂದಿದೆ. 

Tap to resize

Latest Videos

ಮಗು ಯಾವಾಗ ಕೇಳ್ತಿದ್ದವರಿಗೆ ಶಾಕ್‌ ಕೊಟ್ಟ ನಟಿ ಕಿಯಾರಾ! ಮದ್ವೆಯಾಗಿ ವರ್ಷದಲ್ಲೇ ಇಷ್ಟು ದೊಡ್ಡ ಮಗ?

ಹೇಳಿ ಕೇಳಿ ಇದು ಪಾಕಿಸ್ತಾನದಲ್ಲಿ ಆಗಿರುವ ಘಟನೆ. ಇನ್ನು ಭಾರತದಲ್ಲಿ ಇದರ ವಿಡಿಯೋ ವೈರಲ್‌ ಆದರೆ ಕೇಳಬೇಕೆ? ಈ ಎಡವಟ್ಟು ವಿಡಿಯೋ ನೋಡಿ ಇನ್ನಿಲ್ಲದಂತೆ ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು. ಪಾಕಿಸ್ತಾನದಲ್ಲಿ ಈ ರೀತಿ ಆಗಿದ್ದರೆ ಅದೇನೂ ಹೊಸ ವಿಷಯವಲ್ಲ ಬಿಡಿ ಎಂದು ಹಲವರು ಹೇಳಿದ್ದರೆ, ಬಾಂಬ್‌ ಬ್ಲಾಸ್ಟ್‌ ಅನ್ನೇ  ವರ್ಕ್ ಫ್ರಮ್ ಹೋಮ್ ಮಾಡಿ, ಮನೆಯಲ್ಲಿಯೇ ಬಾಂಬ್‌ ಬ್ಲಾಸ್ಟ್‌ ಮಾಡಿರುವವರು ಇವರು. ಇನ್ನು ಇದೇನು ಹೊಸ ವಿಷಯವಲ್ಲ ಎಂದು ತಮಾಷೆ ಮಾಡುತ್ತಿದ್ದಾರೆ. 
  
ಈ ಹಿಂದೆ, ಟೇಕ್‌ಆಫ್‌ಗೆ ಸ್ವಲ್ಪ ಮೊದಲು ಏರ್‌ಲೈನ್ ಪೈಲಟ್ ತನ್ನ ವಿಮಾನದ ವಿಂಡ್‌ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುತ್ತಿರುವುದನ್ನು ತೋರಿಸುವ ಮತ್ತೊಂದು ವೀಡಿಯೊ ಪಾಕಿಸ್ತಾನದಿಂದ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತ್ತು. ವಿಮಾನದ ವಿಂಡ್‌ಸ್ಕ್ರೀನ್ ಸ್ವಚ್ಛಗೊಳಿಸಲು ಸೆರಿನ್ ಏರ್ ಪೈಲಟ್ ವಿಮಾನದ ಪಕ್ಕದ ಕಿಟಕಿಯಿಂದ ಹೊರಕ್ಕೆ ವಾಲುತ್ತಿರುವುದನ್ನು ದೃಶ್ಯಾವಳಿಗಳು ತೋರಿಸಿವೆ. ಏರ್‌ಬಸ್ A330-200 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ಜೆಡ್ಡಾ ನಡುವೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸುತ್ತಿದೆ. ಇದೇ ರೀತಿ ಪಾಕಿಸ್ತಾನದ ಎಡವಟ್ಟು ವಿಡಿಯೋಗಳನ್ನು ಜನರು ಶೇರ್‍‌ ಮಾಡಿಕೊಳ್ಳುತ್ತಿದ್ದಾರೆ.

'ಕನ್ನಡ್‌ ಗೊತಿಲ್‌' ಎಂದು ಹೆಮ್ಮೆಯಿಂದ ಹೇಳುವ ಕರುನಾಡಿಗರಿಗೆ ಸೆಡ್ಡು ಹೊಡೆದ ಜರ್ಮನ್‌ ಪುಟಾಣಿಗಳು!

Bud Landed over Chief Guest in Pakistan😭
pic.twitter.com/1y9kjDiOzg

— Ghar Ke Kalesh (@gharkekalesh)
click me!