ರಾಂಗ್ ಅಡ್ರೆಸ್... ಜೆಂಟ್ಸ್ ಟಾಯ್ಲೆಟ್‌ನಿಂದ ಹೊರಬಂದ ಲೇಡಿ ಸಿಂಹ!

By Suvarna News  |  First Published Oct 4, 2021, 5:21 PM IST

*ಪುರುಷರ  ಶೌಚಾಲಯದಿಂದ ಹೊರಗೆ ಬಂದ ಹೆಣ್ಣು ಸಿಂಹ!
* ಬೇರೆಯವರ ಶೌಚಾಲಯ ಬಳಕೆ ಮಾಡುವ ಮುನ್ನ ಎಚ್ಚರ!
* ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ
* ನೆಟ್ಟಿಗರಿಂದ ಬಗೆ ಬಗೆಯ ಕಮೆಂಟ್


ಬೆಂಗಳೂರು(ಅ. 04)  ಪುರುಷರ ಶೌಚಾಲಯದದಿಂದ(toilet) ಸಿಂಹ(Lion) ಹೆಜ್ಜೆ ಇಟ್ಟುಕೊಂಡು ಹೊರಗೆ ಬಂದರೆ ಹೇಗಿರುತ್ತದೆ? ಎದೆ ಧಸ್ ಅನ್ನುತ್ತಿದೆಯಾ?  ಆದರೆ ಈ ದೃಶ್ಯ ನಿಜಕ್ಕೂ ನಡೆದು ಹೋಗಿದೆ. ಸೋಶಿಯಲ್ ಮೀಡಿಯಾದಲ್ಲಿ(Social Media) ಸಿಂಹದ ನಡಿಗೆ ವೈರಲ್ ಆಗುತ್ತಿದೆ.

ಒಂದು  ನಿಮಿಷದ ವಿಡಿಯೋ ವೈರಲ್ ಆಗುತ್ತಿದ್ದು ಗಂಭೀರ ಹೆಜ್ಜೆ ಇಟ್ಟುಕೊಂಡು ಹೆಣ್ಣು ಸಿಂಹ ಪುರುಷರ ಶೌಚಾಲಯದಿಂದ ಹೊರಗೆ ಬರುತ್ತದೆ.  ಆ ಕಡೆ ಈ ಇಕಡೆ ನೋಡಿ ನಂತರ ಅಲ್ಲಿಂದ ತೆರಳುತ್ತದೆ.

Tap to resize

Latest Videos

ಈ ವಿಡಿಯೋವನ್ನು ಹಂಚಿಕೊಂಡಿರುವ WildLense Eco Foundation ಎಚ್ಚರಿಕೆ ನೀಡಿದ್ದು ಬೇರೆಯರ ಶೌಚಾಲಯ ಬಳಕೆ ಮಾಡುವ ಮುಮ್ಮ ಜಾಗೃತೆಯಿರಲಿ ಎಂದಿದೆ.

ಮರೆಯಾದ ಮಾವುತನಿಗೆ ಗಜರಾಜನ ಕಣ್ಣೀರ ವಿದಾಯ

ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ( Susanta Nanda) ಈ ವಿಡಿಯೋವನ್ನು ಹಂಚಿಕೊಂಡು   ಸಿಂಹ ತನ್ನ ಸುತ್ತಮುತ್ತಲಿನ ವಾತಾವರಣ ಕ್ಲೀನ್ ಆಗಿ ಇಟ್ಟುಕೊಳ್ಳಲು ನೋಡುತ್ತಿದೆ ಎಂದಿದ್ದಾರೆ.

ಅನೇಕರು ಬಗೆಬಗೆಯ ಕಮೆಂಟ್ ಮಾಡಿದ್ದಾರೆ. ಸ್ವಚ್ಛ ಫಾರೆಸ್ಟ್ ಅಭಿಯಾನ,  ಶೌಚಾಲಯ ಕ್ಲಿನ್ ಆಗಿದೆಯೋ ಇಲ್ಲವೋ ಎಂದು ಕಾಡಿನ ರಾಜನಿಂದ ತಪಾಸಣೆ, ಕ್ಲೀನಿಂಗ್ ಇನ್ಸ್ ಪೆಕ್ಟ್ ರಿಂದ ದಿಢೀರ್ ಭೇಟಿ,   ಹೆಣ್ಣು ಸಿಂಹ ಪುರುಷರ ಟಾಯ್ಲೆಟ್ ಗೆ ಹೋಗಿ ತಪ್ಪು ಮಾಡಿದೆ.  ತನ್ನ ತಪ್ಪು ಗೊತ್ತಾಗಿ ಅಲ್ಲಿಂದ ಕಾಲು ಕಿತ್ತಿದೆ..  ನನಗೆ ಈ ಸಿಂಹದ ಕಾಂಟಾಕ್ಟ್  ನಂಬರ್ ಬೇಕಿದ್ದು ನನ್ನ ಮಗನಿಗೂ ಶೌಚಾಲಯಕ್ಕೆ ತೆರಳುವ ತರಬೇತಿ ನೀಡಬೇಕಿದೆ..  ನಿಸರ್ಗ್ ಕರೆ.. ಹೀಗೆ ಬಗೆ ಬಗೆಯ ಕಮೆಂಟ್ ಗಳು ಬಂದಿವೆ. 

 

 

Loo is not always safe & reliver for humans, sometime it can be used by others too... pic.twitter.com/MNs9pwCycC

— WildLense® Eco Foundation 🇮🇳 (@WildLense_India)

She is walking out of wrong toilet. Ladies toilet is nearby. It seems she realised her mistake and ran away

— RAKESH KAPOOR (@rakesh_kapoor)
click me!