ಅಮೆರಿಕಾದಲ್ಲಿ ಕಿಡ್ನ್ಯಾಪ್ ಆಗಿದ್ದ ಭಾರತೀಯರ ಶವಪತ್ತೆ: ಜನಾಂಗೀಯ ದ್ವೇಷಕ್ಕೆ ಬಲಿ?

By Anusha Kb  |  First Published Oct 6, 2022, 11:51 AM IST

ಆಕ್ಟೋಬರ್‌ 3ರಂದು ಅಪಹರಣಕ್ಕೊಳಗಾಗಿದ್ದರು ಎನ್ನಲಾದ ಭಾರತೀಯ ಮೂಲದ ಕುಟುಂಬವು ಶವವಾಗಿ ಪತ್ತೆಯಾಗಿದೆ. ಎಂಟು ತಿಂಗಳ ಮಗು, ಆಕೆಯ ಪೋಷಕರಾದ ತಾಯಿ ಜಸ್ಲೀನ್ ಕೌರ್, ತಂದೆ ಎಂ ಜಸ್ದೀಪ್ ಸಿಂಗ್ ಮತ್ತು ಮಗುವಿನ ಚಿಕ್ಕಪ್ಪ ಅಮನದೀಪ್ ಸಿಂಗ್ ಸೋಮವಾರದಿಂದ ನಾಪತ್ತೆಯಾಗಿದ್ದರು.


ಕ್ಯಾಲಿಫೋರ್ನಿಯಾ:  ಆಕ್ಟೋಬರ್‌ 3ರಂದು ಅಪಹರಣಕ್ಕೊಳಗಾಗಿದ್ದರು ಎನ್ನಲಾದ ಭಾರತೀಯ ಮೂಲದ ಕುಟುಂಬವು ಶವವಾಗಿ ಪತ್ತೆಯಾಗಿದೆ. ಎಂಟು ತಿಂಗಳ ಮಗು, ಆಕೆಯ ಪೋಷಕರಾದ ತಾಯಿ ಜಸ್ಲೀನ್ ಕೌರ್, ತಂದೆ ಎಂ ಜಸ್ದೀಪ್ ಸಿಂಗ್ ಮತ್ತು ಮಗುವಿನ ಚಿಕ್ಕಪ್ಪ ಅಮನದೀಪ್ ಸಿಂಗ್ ಸೋಮವಾರದಿಂದ ನಾಪತ್ತೆಯಾಗಿದ್ದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಅವರನ್ನು ಟ್ರಕ್‌ನೊಳಗೆ ಬಲವಂತವಾಗಿ ನುಗ್ಗಿಸುತ್ತಿರುವುದು ಸಿಸಿಟಿವಿ ದ್ಯಶ್ಯಾವಳಿಯಲ್ಲಿ ಸೆರೆ ಆಗಿತ್ತು. ಆದರೆ ಈಗ ಮಗು ಸೇರಿ ನಾಲ್ವರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. 

ಕ್ಯಾಲಿಫೋರ್ನಿಯಾದ (California) ಮರ್ಸಿಡ್ ಕೌಂಟಿಯಿಂದ (Merced County) ಭಾರತೀಯ ಮೂಲದ ಎಂಟು ತಿಂಗಳ ಮಗು, ಆಕೆಯ ಪೋಷಕರು ಮತ್ತು ಚಿಕ್ಕಪ್ಪ ಅಪಹರಣಕ್ಕೊಳಗಾಗಿದ್ದರು. ಆದರೆ ಈಗ ಅವರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಜಿಲ್ಲಾಧಿಕಾರಿ ಖಚಿತಪಡಿಸಿದ್ದಾರೆ. ಈ ಕುಟುಂಬ ಭಾರತೀಯ ಮೂಲದವರಾಗಿದ್ದು, ಕಳೆದ ಸೋಮವಾರ ನಾಪತ್ತೆಯಾಗಿದ್ದರು. ಈ ಅಪಹರಣದ ಪ್ರಕರಣಕ್ಕೆ ಸಂಬಂಧಿಸಿದಂತೆ 48 ವರ್ಷದ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ.

Tap to resize

Latest Videos

ಅಮೆರಿಕದಲ್ಲಿ ಭಾರತ ಮೂಲದ ವ್ಯಕ್ತಿಯ ಕೊಲೆ: ಕಾರಿನಲ್ಲಿ ಕುಳಿತಿದ್ದವನ ಮೇಲೆ ಗುಂಡಿನ ದಾಳಿ

ಇದೊಂದು  ಭಯಾನಕ, ಆಘಾತಕಾರಿ ಹಾಗೂ ಪ್ರಜ್ಞಾಶೂನ್ಯ ಪ್ರಕರಣ ಎಂದು  ಮರ್ಸಿಡ್ ಕೌಂಟಿ ಶೆರಿಫ್ ವರ್ನ್ ವಾರ್ನ್ಕೆ (Sheriff Vern Warnke) ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಹೇಳಿಕ ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ. ಹಾಗೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ವ್ಯಕ್ತಿಯ ಚಹರೆ ಸಿಸಿಟಿವಿಯಲ್ಲಿ ಸೆರೆ ಆಗಿತ್ತು. ಆತ ಈ  ಕುಟುಂಬವನ್ನು ಬಲವಂತವಾಗಿ ಟ್ರಕ್‌ಗೆ ಹತ್ತಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಎಂಟು ತಿಂಗಳ ಮಗು (infant), ಆಕೆಯ ಪೋಷಕರು ಹಾಗೂ ಚಿಕ್ಕಪ್ಪ ಅಮನ್‌ದೀಪ್ ಸಿಂಗ್ ಸೋಮವಾರದಿಂದ ಕಾಣೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರು ಅವರನ್ನು ಹುಡುಕುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ದುರಾದೃಷ್ಟವಶಾತ್ ಗುರುವಾರ ರಾತ್ರಿ ಅವರ ಶವ ಪತ್ತೆಯಾಗಿದೆ. 

2005 ರಲ್ಲಿ ಸಶಸ್ತ್ರ ದರೋಡೆ  ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಯೇ ಈ ಕೃತ್ಯವೆಸಗಿದ್ದಾನೆ. ಆದರೆ ಈ ಕೃತ್ಯದಲ್ಲಿ ಇನ್ನು ಹಲವರಿರುವ ಶಂಕೆ ಇದ್ದು, ಈತನೋರ್ವನೇ ಈ ಕೃತ್ಯವೆಸಗುವುದು ಅಸಾಧ್ಯ ಎಂದು ಮರ್ಸಿಡ್ ಕೌಂಟಿ (Merced County) ಶೆರಿಫ್ ವೆರ್ನ್ ವಾರ್ನ್ಕೆ ಹೇಳಿದ್ದಾರೆ. ಪೊಲೀಸರ ಬಳಿ ಇರುವ ಪ್ರಮುಖ ಸಾಕ್ಷಿ ಎನಿಸಿದ ವಿಡಿಯೋದಲ್ಲಿ ಜಸ್ದೀಪ್(Jasdeep) ಮತ್ತು ಅಮನದೀಪ್ (Amandeep) ಒಂಬತ್ತು ನಿಮಿಷಗಳ ಅಂತರದಲ್ಲಿ ತಮ್ಮ ಕುಟುಂಬದ ಟ್ರಕ್‌ನಲ್ಲಿ ಆಗಮಿಸುತ್ತಿರುವ ದೃಶ್ಯವಿದೆ. ಈ ವೇಳೆ ಕಸದ ಚೀಲ ಹೊತ್ತೊಯ್ಯುವವನೋರ್ವ ಇವರಿಗೆ ಎದುರಾಗಿದ್ದಾನೆ. ಅದೇ ವ್ಯಕ್ತಿ ನಂತರ ಬಂದೂಕು ಹೊರತೆಗೆಯುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ.

ಎನ್‌ಆರ್‌ಐ ಸೈಟಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ: ಐವರ ಬಂಧನ

ನಂತರ ಜಸ್ದೀಪ್ ಮತ್ತು ಅಮನದೀಪ್ ಅವರ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿದ್ದಾರೆ. ಅಲ್ಲದೇ ಅವರನ್ನು ಬಲವಂತವಾಗಿ ಟ್ರಕ್‌ಗೆ ನುಗ್ಗಿಸಿದ್ದಾನೆ. ನಂತರ ಬಂದೂಕುಧಾರಿ ಅವರ ಹಿಂದೆ ಹೋಗಿದ್ದಾನೆ. ಸೋಮವಾರ ರಸ್ತೆಯೊಂದರಲ್ಲಿ ರೈತರೊಬ್ಬರು ಹೀಗೆ ಅಪಹರಣಕ್ಕೊಳಗಾದವರ ಸಂತ್ರಸ್ತರ ಎರಡು ಸೆಲ್ ಫೋನ್‌ಗಳನ್ನು ನೋಡಿದ್ದು, ಅದನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಜಸ್ದೀಪ್ ಹಾಗೂ ಅಮನ್ದೀಪ್ ಅವರ ಪೋಷಕರಾದ ಡಾ. ರಂಧೀರ್ ಸಿಂಗ್ (Randhir Singh) ಹಾಗೂ ಕೃಪಾಲ್ ಕೌರ್ (Kirpal Kaur) ಅವರು ಪಂಜಾಬ್‌ನ ಹೋಶಿಯರ್ಪುರದ ಹರ್ಸಿ ಪಿಂಡ್ ಗ್ರಾಮದವರಾಗಿದ್ದಾರೆ.
 

click me!