ದುಬೈಯಲ್ಲಿ Indo Arebic ಸಂಸ್ಕೃತಿ ಬಿಂಬಿಸುವ ಭವ್ಯ ಹಿಂದು ದೇಗುಲ ಉದ್ಘಾಟನೆ

By Kannadaprabha NewsFirst Published Oct 6, 2022, 8:38 AM IST
Highlights

ದುಬೈಯ ಜೆಬೆಲ್‌ ಅಲಿ ವಿಲೇಜ್‌ನಲ್ಲಿ ಭಾರತೀಯ ಹಾಗೂ ಅರೆಬಿಕ್‌ ವಾಸ್ತುಶಿಲ್ಪ ವಿನ್ಯಾಸವುಳ್ಳ ಭವ್ಯವಾದ ಹಿಂದು ದೇವಾಲಯವನ್ನು ಉದ್ಘಾಟನೆ ಮಾಡಲಾಗಿದೆ.

ದುಬೈ: ದುಬೈಯ ಜೆಬೆಲ್‌ ಅಲಿ ವಿಲೇಜ್‌ನಲ್ಲಿ ಭಾರತೀಯ ಹಾಗೂ ಅರೆಬಿಕ್‌ ವಾಸ್ತುಶಿಲ್ಪ ವಿನ್ಯಾಸವುಳ್ಳ ಭವ್ಯವಾದ ಹಿಂದು ದೇವಾಲಯವನ್ನು ಉದ್ಘಾಟನೆ ಮಾಡಲಾಗಿದೆ. ಇದು ಸಹಿಷ್ಣುತೆ, ಶಾಂತಿ ಹಾಗೂ ಸಾಮರಸ್ಯದ ಸಂದೇಶವನ್ನು ಸಾರಲಿದೆ. ದುಬೈಯ ಈ ಗ್ರಾಮವನ್ನು ‘ವರ್‌ಶಿಪ್‌ ವಿಲೇಜ್‌’ (ಪೂಜಾ ಗ್ರಾಮ) ಎಂದು ಕರೆಯಲಾಗುತ್ತಿದ್ದು, ಮಂಗಳವಾರದಿಂದ ದೇವಾಲಯವನ್ನು ಭಕ್ತಾದಿಗಳಿಗಾಗಿ ತೆರಯಲಾಗಿದೆ.

ದುಬೈಯ ಸಹಿಷ್ಣುತೆ ಹಾಗೂ ಸಹಬಾಳ್ವೆ ಖಾತೆ ಸಚಿವ ಶೇಖ್‌ ನಹ್ಯಾನ್‌ ಬಿನ್‌ ಮುಬಾರಕ್‌ ಅಲ್‌ ನಹ್ಯಾನ್‌ (Sheikh Nahyan bin Mubarak Al Nahyan) ಹಾಗೂ ಭಾರತದ ರಾಯಭಾರಿ (Indian Ambassador) ಸಂಜಯ್‌ ಸುಧೀರ್‌ (Sanjay Sudhir) ದೇವಾಲಯವನ್ನು ಉದ್ಘಾಟಿಸಿದ್ದಾರೆ. ಜೆಬೆಲ್‌ ಅಲಿಯಲ್ಲಿ (Jebel Ali) ಒಟ್ಟು 9 ಧಾರ್ಮಿಕ ಕಟ್ಟಡಗಳಿದ್ದು, ಇದರಲ್ಲಿ 7 ಚರ್ಚ್‌ಗಳು, ಗುರುನಾನಕ್‌ ದರ್ಬಾರ್‌ (Guru Nanak Durbar) ಸಿಖ್‌ ಗುರುದ್ವಾರ (Sikh Gurdwara) ಹಾಗೂ ನೂತನ ಹಿಂದು ದೇವಾಲಯಗಳು (Hindu Temples) ಸೇರಿದೆ.

ದೇವಾಲಯ ಹೇಗಿದೆ?:

ಇಂಗ್ಲೆಂಡ್‌ Hindu Temple ಹೊರಗೆ ‘ಅಲ್ಲಾಹು ಅಕ್ಬರ್‌’ ಕೂಗಿದ ಪ್ರತಿಭಟನಾಕಾರರು

70,000 ಚದರ್‌ ಅಡಿ ವಿಸ್ತಾರವಾದ ದೇವಾಲಯ ನಿರ್ಮಾಣ ಯೋಜನೆ ಬಗ್ಗೆ 2020ರಲ್ಲಿ ಘೋಷಿಸಲಾಗಿತ್ತು. ದೇವಾಲಯದಲ್ಲಿ ಭಾರತೀಯ ಹಾಗೂ ಅರೆಬಿಕ್‌ ಸಂಸ್ಕೃತಿಯ ಮಿಶ್ರಣವನ್ನು ಬಿಂಬಿಸುವ ಕೆತ್ತನೆಗಳು, ಅಲಂಕೃತ ಕಂಬಗಳು, ಹಿತ್ತಾಳೆ ಗೋಪುರಗಳಿವೆ. ಈ ದೇವಾಲಯ ಕೇವಲ ಹಿಂದುಗಳಿಗೆ ಮಾತ್ರವಲ್ಲ ಯುಎಇಯ ಎಲ್ಲ ಭಾರತೀಯರಿಗಾಗಿ ನಿರ್ಮಿಸಲಾಗಿದೆ. ವರ್ಷಾಂತ್ಯದಿಂದ ಇಲ್ಲಿ ಹಿಂದು ಸಾಂಪ್ರದಾಯಿಕ ಆಚರಣೆಗಳು, ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವುದು ಸೇರಿ ವಿವಾಹಾದಿ ಸಮಾರಂಭಗಳನ್ನು ಆಯೋಜಿಸಬಹುದಾಗಿದೆ. ದೇವಾಲಯಕ್ಕೆ ಭೇಟಿ ನೀಡಲು ಪೂರ್ವಭಾವಿಯಾಗಿ ಆನ್ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಕೆನಡಾ ಹಿಂದೂ ದೇವಾಲಯ ಮೇಲೆ ದಾಳಿ; ಸಂಸದ ಚಂದ್ರ ಆರ್ಯ ಖಂಡನೆ

click me!