ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ

Published : Feb 11, 2026, 04:34 PM IST
Dollars of Dung

ಸಾರಾಂಶ

ವ್ಯಾಲೆಟೈನ್ಸ್ ಡೇ ಆಫರ್, ಕೈಕೊಟ್ಟ ಪ್ರೀತಿ ಸೇಡು ತೀರಿಸಲು ವಿಚಿತ್ರ ಯೋಜನೆ ಘೋಷಿಸಿದ ಝೂ, ತಮಾಷೆಯಾಗಿದ್ದರೂ ಇದು ನಿಜ. ಮಾಜಿ ಲವರ್ ಮೇಲೆ ಕೋಪ ಇದ್ದರೆ, ಸೇಡು ತೀರಿಸುವ ಬಯಕೆ ಇದ್ದರೆ ಮೃಗಾಲಯ ವಿಶೇಷ ಆಫರ್ ನೀಡಿದೆ. 

ಪ್ರೇಮಿಗಳ ದಿನ ಹತ್ತಿರಬರುತ್ತಿದೆ. ಪ್ರಣಯ ಹಕ್ಕಿಗಳಂತೆ ಸುತ್ತಾಡುತ್ತಿರುವ ಜೋಡಿಗಳ ಉಲ್ಲಾಸ, ಉತ್ಸಾಹ ಹೆಚ್ಚಾಗಿದೆ. ಇತ್ತ ಪ್ರಪೋಸ್ ಮಾಡಲು ದಿನ ಕಾಯುತ್ತಿರುವ ಒನ್ ಸೈಡೆಡ್ ಪ್ರೇಮಿಗಳು ಭಾರಿ ತಯಾರಿ ನಡೆಸುತ್ತಿದ್ದಾರೆ. ವ್ಯಾಲೆಂಟೈನ್ಸ್ ದಿನ ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್, ಜ್ಯೂಸ್ ಸೆಂಟರ್, ಗಿಫ್ಟ್ ಸೆಂಟರ್ ಸೇರಿದಂತೆ ಹಲವು ಶಾಪ್‌ಗಳು ಭರ್ಜರಿ ಆಫರ್ ಘೋಷಿಸುತ್ತದೆ. ಇತ್ತ ಪ್ರೇಮಿಗಳ ದಿನಾಚರಣೆಗೆ ಕೆಲ ಸಂಘಟನೆಗಳು ಎಚ್ಚರಿಕೆ ನೀಡಿದ ಊದಾಹರಣೆಗಳೂ ಇವೆ. ಇವೆಲ್ಲದರ ನಡುವೆ ಮೃಗಾಲಯ ಒಂದು ಪ್ರೇಮಿಗಳ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದೆ. ಇದು ಝೂ ಪ್ರವೇಶಕ್ಕೆ ಡಿಸ್ಕೌಂಟ್ ಆಫರ್ ಅಲ್ಲ, ಕೈಕೊಟ್ಟ ಪ್ರೀತಿ, ಮಾಜಿ ಪ್ರೇಮಿಗಳ ಮೇಲಿನ ಕೋಪ, ಸೇಡು ತೀರಿಸಿಕೊಳ್ಳಲು ನೀಡಿರುವ ಆಫರ್. ಇದು ವಿಚಿತ್ರವಾದರೂ ಸತ್ಯ.

ಡಾಲರ್ಸ್ ಆಫ್ ಡಂಗ್

ಈ ಆಫರ್ ಘೋಷಣೆ ಮಾಡಿರುವುದು ಅಮೆರಿಕದ ಮೇರಿಲ್ಯಾಂಡ್ ಝೂ. ಅಮೆರಿಕದ ಅತೀ ದೊಡ್ಡ ಹಾಗೂ ಅತೀ ವಿರಳ ಪ್ರಾಣಿ ಸಂಕುಲ ಹೊಂದಿರುವ ಮೃಗಾಲಯ ಇದಾಗಿದೆ. ಈ ಬಾರಿಯ ವ್ಯಾಲೈಟೈನ್ಸ್ ಡೇಗೆ ಮೇರಿಲ್ಯಾಂಡ್ ಝೂ ಡಾಲರ್ಸ್ ಆಫ್ ಡಂಗ್ ( ಸೆಗಣಿಗಾಗಿ ಡಾಲರ್) ವಿಶೇಷ ಅಭಿಯಾನ ಆರಂಭಿಸಿದೆ. ಈ ವಿಶೇಷ ಅಭಿಯಾನ ಹಾಗೂ ಆಫರ್ ಭಾರಿ ಸದ್ದು ಮಾಡುತ್ತಿದೆ.

ಏನಿದು ಸೆಗಣಿಗಾಗಿ ಡಾಲರ್ ಯೋಜನೆ

ಪ್ರೇಮಿಗಳ ದಿನಾಚರಣೆ ಅಂಗವಾಗಿ ಮೃಗಾಲಯ ಜಾರಿಗೆ ತಂದಿರುವ ವಿಶೇಷ ಅಭಿಯಾನ ಇದಾಗಿದೆ. ಪ್ರೀತಿಸಿದಾಕೆ ಅಥವಾ ಪ್ರೀತಿಸಿದವ ದೂರವಾಗಿದ್ದರೆ, ವಿರಹ ವೇದನೆಯಲ್ಲಿರುವವರು, ಮಾಜಿ ಪ್ರೇಮಿಗಳಿಗಾಗಿ ಈ ಡಾಲರ್ಸ್ ಆಫ್ ಡಂಗ್ ಅಭಿಯಾನ ಆರಂಭಿಸಲಾಗಿದೆ. ಮಾಜಿ ಪ್ರೇಮಿಗಳ ಮೇಲಿನ ಕೋಪ ತೀರಿಸಿಕೊಳ್ಳಲು, ನೋವು ಕಡಿಮೆ ಮಾಡಲು ತಮ್ಮ ಮಾಜಿಗಳ ಹೆಸರನ್ನು ಪ್ರಾಣಿಗಳ ಮಲಕ್ಕೆ ಸಾಂಕೇತಿಕವಾಗಿ ಇಡಬಹುದು. ಇದಕ್ಕೆ ಕೇವಲ 5 ಡಾಲರ್ ಅಂದರೆ ಸರಿಸುಮಾರು 460 ರೂಪಾಯಿ ಪಾವತಿಸಿದರೆ ಸಾಕು.

ಮೇಲ್ನೋಟಕ್ಕೆ ಇದು ತಮಾಷೆಯಾಗಿ ಕಾಣಬಹುದು. ಆದರೆ ಮೇರಿಲ್ಯಾಂಡ್ ಮೃಗಲಾಯ ಈ ಅಭಿಯಾನದ ಹಿಂದೆ ಮಹತ್ವದ ಕಾರ್ಯವೊಂದಕ್ಕೆ ಸಜ್ಜಾಗಿದೆ. ಈ ಅಭಿಯಾನದ ಮೂಲಕ ಸಂಗ್ರಹವಾಗುವ ಹಣದಲ್ಲಿ ಮೃಗಾಲಯದಲ್ಲಿನ ಪ್ರಾಣಿಗಳ ಆರೈಕೆ, ಆಹಾರ, ಔಷಧಿಗಳ ಬಳಕೆಗೆ ಉಪಯೋಗಿಸಲು ನಿರ್ಧರಿಸಿದೆ. ಪ್ರಾಣಿಗಳ ಆರೈಕೆ ಮೇರಿಲ್ಯಾಂಡ್ ಝೋಗೆ ಸವಾಲಾಗಿ ಪರಿಣಿಮಿಸುತ್ತಿದೆ. ಕಾರಣ ಹಲವು ಅಪರೂಪದ ತಳಿಯ ಪ್ರಾಣಿಗಳು ಇಲ್ಲಿವೆ. ಇವುಗಳನ್ನು ಅತೀ ಸೂಕ್ಷ್ಮವಾಗಿ ಆರೈಕೆ ಮಾಡಬೇಕು. ಇದು ಖರ್ಚು ವೆಚ್ಚವನ್ನು ಹೆಚ್ಚಿಸುತ್ತಿದೆ. ಸರ್ಕಾರದ ಅನುದಾನಗಳ ಹೊರತಾಗಿಯೂ ಹೆಚ್ಚಿನ ಹಣ ವ್ಯಯಿಸಲಾಗುತ್ತಿದೆ. ಹೀಗಾಗಿ ಮೇರಿಲ್ಯಾಂಡ್ ಮೃಗಾಲಯ ಹೊಸ ಅಭಿಯಾನದ ಮೂಲಕ ಹಣ ಸಂಗ್ರಹಕ್ಕೆ ಮುಂದಾಗಿದೆ.

ಈ ರೀತಿಯ ಅಭಿಯಾನದ ಮೂಲಕ ಅದೆಷ್ಟು ಹಣ ಸಂಗ್ರಹವಾಗುತ್ತೆ ಎಂದು ಕಡೆಗಣಿಸಬೇಡಿ. ಈಗಾಗಲೇ ಹಲವರು ಹೆಸರು ನೋಂದಾಯಿಸಿ ಹಣ ಪಾವತಿಸಿದ್ದಾರೆ. ಇದೀಗ ಮೃಗಾಲಯಕ್ಕೆ ಹಣ ಹರಿದು ಬಂದಿದೆ. ಇದರ ಬೆನ್ನಲ್ಲೇ ಸಿಬ್ಬಂದಿಗಳಿಗೆ ಆತಂಕವೂ ಎದುರಾಗಿದೆ. ಇಷ್ಟು ಹೆಸರನ್ನು ಪ್ರಾಣಿಗಳ ಮಲಕ್ಕೆ ಇಡಲು ಪ್ರಾಣಿಗಳ ಮಲ ಅಥವಾ ಸೆಗಣಿ ಎಲ್ಲಿಂದ ತರಲಿ ಎಂದು ಆತಂಕಗೊಂಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Dubai gold in India: ದುಬೈನ ಶುದ್ಧ ಚಿನ್ನವನ್ನು ಭಾರತದಲ್ಲಿ ಮಾರಿದ್ರೆ ಇಷ್ಟು ಲಾಭ ಆಗೋದು ಪಕ್ಕಾ!
ಕೆನಡಾದ ಶಾಲೆಯಲ್ಲಿ ಮಹಿಳೆಯ ಅಟ್ಟಹಾಸ: ಗುಂಡಿನ ದಾಳಿಗೆ 10 ಬಲಿ, 25ಕ್ಕೂ ಹೆಚ್ಚು ಜನರಿಗೆ ಗಾಯ