ಶ್ರೀಮಂತರಾಗಿದ್ದ ತಾವು ಬಡತನದಲ್ಲಿ ಬದುಕಬೇಕಲ್ಲಾ ಎನ್ನುವ ಚಿಂತೆಯೇ ತಲೆಗೆ ಹೊಕ್ಕಿತ್ತೇನೋ. ಸಾಲದ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯ ಮೂಲದ ಕುಟುಂಬ ತಮ್ಮ ಐಷಾರಾಮಿ ಬಂಗಲೆಯನ್ನು ಅರ್ಧಬೆಲೆಗೆ ಮಾರಿ ಸಾವಿಗೆ ಶರಣಾಗಿದೆ. ಈ ಘಟನೆ ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ನಡೆದಿದೆ.
ನವದೆಹಲಿ (ಡಿ.30): ಭಾರತೀಯ ಮೂಲದ ಟೆಕ್ ಕಂಪನಿಯ ಮುಖ್ಯಸ್ಥರಾಗಿದ್ದ ದಂಪತಿ ಹಾಗೂ ಅವರ ಹದಿಹರೆಯದ ಪುತ್ರಿ ಅಮೆರಿಕದ ಮ್ಯಾಸಚೂಸೆಟ್ಸ್ ರಾಜ್ಯದ ಬಾಸ್ಟನ್ ಸಮೀಪ ಇರುವ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಅಧಿಕಾರಿಗಳ ಪ್ರಕಾರ ಕೌಟುಂಬಿಕ ಕಲಹ ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಿದ್ದಾರೆ. ಪ್ರಾಸಿಕ್ಯೂಟರ್ ಮೈಕೆಲ್ ಮೊರಿಸ್ಸೆ ಪ್ರಕಾರ, ಅವರನ್ನು 57 ವರ್ಷದ ರಾಕೇಶ್ ಕಮಲ್, ಅವರ ಪತ್ನಿ, 54 ವರ್ಷದ ಟೀನಾ ಮತ್ತು ಅವರ 18 ವರ್ಷದ ಮಗಳು ಅರಿಯಾನಾ ಎಂದು ಗುರುತಿಸಿದ್ದಾರೆ ಮತ್ತು ಘಟನೆ ಗುರುವಾರ ಸಂಜೆ ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಟೀನಾ ಮತ್ತು ಅವರ ಪತಿ ರಾಕೇಶ್ ಈ ಹಿಂದೆ ಎಡುನೋವಾ ಎಂಬ ಶಿಕ್ಷಣ ವ್ಯವಸ್ಥೆಗಳ ಕಂಪನಿಯನ್ನು ನಡೆಸುತ್ತಿದ್ದರು. ಈ ಕಂಪನಿ ಈಗ ಕಾರ್ಯನಿವರ್ಹಿಸುತ್ತಿಲ್ಲ. ನಾರ್ಫೋಕ್ ಡಿಸ್ಟ್ರಿಕ್ಟ್ ಅಟಾರ್ನಿ ಮೈಕೆಲ್ ಮೊರಿಸ್ಸೆ ಪ್ರಕಾರ, ಮೇಲ್ನೋಟಕ್ಕೆ ಇದು ಕೌಟುಂಬಿಕ ಹಿಂಸಾಚಾರದ ಪರಿಸ್ಥಿತಿ ಆಗಿರುವಂತೆ ಕಂಡಿದೆ. ಗಂಡನ ದೇಹದ ಬಳಿ ಗನ್ ಕಂಡುಬಂದಿದೆ ಎಂಧು ಅವರು ಹೇಳಿದ್ದಾರೆ. ಕುಟುಂಬದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದಿರಬಹುದಲ್ಲವೇ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.ಘಟನೆಯನ್ನು ಕೊಲೆ ಅಥವಾ ಆತ್ಮಹತ್ಯೆ ಎಂದು ಉಲ್ಲೇಖಿಸಬೇಕೆ ಎಂದು ನಿರ್ಧರಿಸುವ ಮೊದಲು ವೈದ್ಯಕೀಯ ಪರೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದೇನೆ ಎಂದು ಮೊರಿಸ್ಸೆ ತಿಳಿಸಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿರುವ ಟೀನಾ ಕಮಲ್ ಅವರು ಎಡುನೋವಾ ಕಂಪನಿಯ ಸಿಇಒ ಆಗಿದ್ದರು ಎಂದು ಅಮೆರಿಕದ ಮ್ಯಾಸಚೂಸೆಟ್ಸ್ ವಿಭಾಗದ ರೆಡ್ ಕ್ರಾಸ್ ಸಂಸ್ಥೆಯ ಪ್ರಕಾರ ಈಕೆ ನಿರ್ದೇಶಕರ ಮಂಡಳಿಯಲ್ಲೂ ಅವರು ಸ್ಥಾನ ಪಡೆದಿದ್ದರು. ಇನ್ನು ಬೆಟರ್ ಬಿಸಿನೆಸ್ ಬ್ಯೂರೋನಲ್ಲಿ ಈಕೆಯನ್ನು ಕಂಪನಿಯ ಸಿಇಒ ಆಗಿ ಗುರುತಿಸಿದ್ದರೆ, ರಿಕ್ ಅಲಿಯಾಸ್ ರಾಕೇಶ್ ಕಮಲ್ ಅವರನ್ನು ಅಧ್ಯಕ್ಷರನ್ನಾಗಿ ತೋರಿಸಿದೆ. ಬೋಸ್ಟನ್‌ನಲ್ಲಿರುವ ಡಬ್ಲ್ಯುಬಿಜಡ್ ಟಿವಿ ಪ್ರಕಾರ, ತನಿಖಾಧಿಕಾರಿಗಳ ಪ್ರಕಾರ ಕುಟುಂಬವನ್ನು ಪರಿಶೀಲಿಸಲು ಸಂಬಂಧಿಕರೊಬ್ಬರು ಮನೆಗೆ ಹೋಗಿದ್ದಾರೆ. ಈ ವೇಳೆ ಯಾರೋ ಸತ್ತಿರುವುದನ್ನು ನೋಡಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬೋಸ್ಟನ್‌ನ 25 ನ್ಯೂಸ್ ಪ್ರಕಾರ, ಇವರ ಕುಟುಂಬ ಆರ್ಥಿಕ ಮುಗ್ಗಟ್ಟಿನಲ್ಲಿರುವ ಸೂಚನೆಯಿತ್ತು ಎಂದು ತಿಳಿಸಿದ್ದಾರೆ. ಕಳೆದ ವರ್ಷ ಟೀಮಾ ಕಮಲ್ ಇಲ್ಲಿನ ಕೋರ್ಟ್‌ಗೆ ದಿವಾಳಿತನದ ಅರ್ಜಿ ಸಲ್ಲಿಕೆ ಮಾಡಿದ್ದರು. ತ್ವರಿತವಾಗಿ ಹಣ ಬೇಕಿದ್ದ ಕಾರಣಕ್ಕೆ ತಮ್ಮ 6.8 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಐಷಾರಾಮಿ ಬಂಗಲೆಯನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಅಂದರೆ, 3 ಮಿಲಿಯನ್ ಯುಎಸ್ ಡಡಾಲರ್‌ಗೆ ಮಾರಾಟ ಮಾಡಿದ್ದರು. ವರದಿಯ ಪ್ರಕಾರ, ಬೋಸ್ಟನ್‌ನಿಂದ ಸುಮಾರು 30 ಕಿಮೀ ದೂರದಲ್ಲಿರುವ ಡೋವರ್‌ನಲ್ಲಿರುವ ಅರಮನೆಯಂಥ ಮನೆಯಲ್ಲಿ 27 ಕೊಠಡಿಗಳು ಇದ್ದವು. ಹೊಂದಿದೆ. ಟಿವಿ ಸುದ್ದಿ ಪ್ರಸಾರಗಳಲ್ಲಿ, ಮನೆಯನ್ನು ದೀಪಗಳು ಮತ್ತು ಕ್ರಿಸ್ಮಸ್ ಆಭರಣಗಳಿಂದ ಅಲಂಕರಿಸಲಾಗಿತ್ತು.
undefined
ಮೊರಿಸ್ಸೆಯ ವಕ್ತಾರ ಡೇವಿಡ್ ಟ್ರೌಬ್ ಅವರು ಹೇಳಿರುವ ಪ್ರಕಾರ, "ಈ ಸಮಯದಲ್ಲಿ ಲಭ್ಯವಿರುವ ಪುರಾವೆಗಳು ಯಾವುದೇ ಹೊರಗಿನ ವ್ಯಕ್ತಿ ಇದರಲ್ಲಿದ್ದಾನ ಎನ್ನುವುದು ಸೂಚಿಸುವುದಿಲ್ಲ, ಆದರೆ ಇದು ಕೌಟುಂಬಿಕ ಹಿಂಸಾಚಾರದ ಮಾರಣಾಂತಿಕ ಘಟನೆ ಎಂದು ಸೂಚಿಸುತ್ತದೆ" ಎಂದು ಹೇಳಿಕೆ ನೀಡಿದರು. ನೆರೆಯ ವರ್ಮೊಂಟ್ ರಾಜ್ಯದ ಮಿಡಲ್ಬರಿ ಕಾಲೇಜಿನಲ್ಲಿ ಅರಿಯಾನಾ ಕಮಲ್ ವಿದ್ಯಾರ್ಥಿನಿ ಎಂದು ಮೊರಿಸ್ಸೆ ತಿಳಿಸಿದ್ದಾರೆ. ಮಿಡಲ್‌ಬರಿ ಕಾಲೇಜಿನಲ್ಲಿ ಓದುತ್ತಿದ್ದ ಅರಿಯಾನಾ ಅದ್ಭುತ ವಿದ್ಯಾರ್ಥಿನಿ ಹಾಗೂ ಶ್ರೇಷ್ಠ ಗಾಯಕಿಯಾಗಿದ್ದ ಈಕೆ ಮೊದಲನೇ ವರ್ಷದಲ್ಲಿ ಓದುತ್ತಿದ್ದಳು ಎಂದು ತಿಳಿಸಿದ್ದಾರೆ.
ಕರ್ನಾಟಕ ಕೈ ತಪ್ಪಿದ ಎಲಾನ್ ಮಸ್ಕ್‌ರ ಟೆಸ್ಲಾ ಕಾರು ಘಟಕ ಗುಜರಾತ್ ಪಾಲು?
ಬೋಸ್ಟನ್‌ನಲ್ಲಿರುವ ಮಿಲ್ಟನ್ ಅಕಾಡೆಮಿಯ ಎನ್‌ಬಿಸಿ 10 ಟಿವಿ ಪ್ರಕಾರ ಅವರು ಈ ವರ್ಷ ಪ್ರೌಢಶಾಲೆಯಿಂದ ಪದವಿ ಪಡೆದಿದ್ದಾರೆ ಮತ್ತು ಅವರ ತಾಯಿ ಪೋಷಕರ ಸಂಘದ ಅಧ್ಯಕ್ಷರಾಗಿದ್ದರು ಎಂದು ತಿಳಿಸಿದೆ. ಅದಲ್ಲದೆ, ಈ ಸಾವು ನಮ್ಮ ಸಮುದಾಯಕ್ಕೆ ದೊಡ್ಡ ನಷ್ಟ ಎಂದು ಶಾಲೆ ತಿಳಿಸಿದೆ. ಅರಿಯಾನಾ ಮುದ್ದು ಹುಡುಗಿಯಾಗಿದ್ದಳು, ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿಯುವ ನಿಟ್ಟಿನಲ್ಲಿ ಅರಿಯಾನಾ ಈಗಷ್ಟೇ ಹೆಜ್ಜೆ ಹಾಕುತ್ತಿದ್ದಳು. ಇನ್ನು ಆಕೆಯ ತಾಯಿ, ಮಿಲ್ಟನ್‌ನಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳಿಬ್ಬರಿಗೂ ಬದ್ಧತೆ ಮತ್ತು ಕಾಳಜಿಯುಳ್ಳ ವ್ಯಕ್ತಿಯಾಗಿದ್ದರು ಎಂದು ಹೇಳಿದೆ.
ಸೈಲೆಂಟ್ ಆಗಿ ಎದುರಾಳಿಯ ನೆಲ ಧ್ವಂಸ ಮಾಡಲಿದೆ ಮಾರಕ ದೇಶಿ ಡ್ರೋನ್, ಚಿತ್ರದುರ್ಗದಲ್ಲಿ ನಡೆಯಿತು ಪರೀಕ್ಷೆ!
ಈಕೆ ಏಜೀಸ್ ಸ್ಟಾಫ್ಟ್‌ವೇರ್ ಕಾರ್ಪೋರೇಷನ್, ಇಎಂಸಿ ಕಾರ್ಪೋರೇಷನ್ ಹಾಗೂ ಫಿಡೆಲಿಟಿ ಇನ್ವೆಸ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದರು ಹಾಗೂ ಮೂರು ಪೇಟೆಂಟ್‌ಗಳನ್ನೂ ಹೊಂದಿದ್ದರು ಎಂದು ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ. WCVB ನೀಡಿದ ಹೇಳಿಕೆಯಲ್ಲಿ, ಅಮೇರಿಕನ್ ರೆಡ್‌ಕ್ರಾಸ್ "ಡೋವರ್‌ನಲ್ಲಿನ ದುರಂತದಿಂದ ತೀವ್ರ ದುಃಖಿತವಾಗಿದೆ" ಎಂದು ಹೇಳಿದೆ. ಝೆಂಡಿಗೊ ಗ್ರೂಪ್ ಮತ್ತು ಅಸೆರಾದೊಂದಿಗೆ ಸಂಯೋಜಿತವಾಗಿರುವ ಎಡುನೋವಾ, "ಗ್ರಾಹಕರು, ಕಲಿಕಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಮಾರುಕಟ್ಟೆ ಮಾಡುತ್ತದೆ. ವ್ಯಾಪಾರವು ಸಹ ಒದಗಿಸುತ್ತದೆ ಎಂದು ಬೆಟರ್ ಬಿಸಿನೆಸ್ ಬ್ಯೂರೋ ಹೇಳಿದೆ.