ಪ್ರಧಾನಿ ಮೋದಿಯಿಂದ ಮಾತ್ರ ಅಯೋಧ್ಯೆಗೆ ಬಂತು ಜೀವಕಳೆ; ಮಾರಿಷಸ್ ಸಂಸದನ ಮೆಚ್ಚುಗೆ!

By Suvarna NewsFirst Published Dec 30, 2023, 4:01 PM IST
Highlights

ನಾನು ಹಾಗೂ ಮಾರಿಷಸ್ ಹಿಂದೂ ಸಮುದಾಯ ಅದೆಷ್ಟು ಹೆಮ್ಮೆ ಪಡುತ್ತಿದೆ ಅನ್ನೋದನ್ನು ಹೇಳಲು ಅಸಾಧ್ಯ. ಆಯೋಧ್ಯೆ ಮತ್ತೆ ನಳನಳಸಲು ಮೋದಿಯಿಂದ ಮಾತ್ರ ಸಾಧ್ಯವಾಯಿತು ಎಂದು ಮಾರಿಷಸ್ ಸಂಸದ ಹೇಳಿದ್ದಾರೆ. ಆಯೋಧ್ಯೆ ರಾಮ ಮಂದಿರ ಹಾಗೂ ಮೋದಿ ಕುರಿತ ಮಾರಿಷಸ್ ಸಂಸದನ ಮಾತುಗಳು ಇಲ್ಲಿವೆ.
 

ನವದೆಹಲಿ(ಡಿ.30) ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ತಯಾರಿ ನಡೆಯುತ್ತಿದೆ. ಪ್ರಧಾನಿ ಮೋದಿ ಆಯೋಧ್ಯೆ ರೈಲು ನಿಲ್ದಾಣ, ವಿಮಾನ ನಿಲ್ದಾಣ ಉದ್ಘಾಟಿಸಿದ್ದಾರೆ. ದೇಶದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪ್ರತಿಪಕ್ಷಗಳು ರಾಮ ಮಂದಿರವನ್ನು ಬಿಜೆಪಿ ರಾಜಕೀಯ ಮಾಡಿದೆ ಅನ್ನೋ ಆರೋಪವನ್ನೂ ಮಾಡಿದೆ. ಆದರೆ ದೇಶದ ಹೊರಗಿರುವ ನಾಯಕರು, ಹಿಂದೂ ಸಮಾಜ ರಾಮ ಮಂದಿರ ನಿರ್ಮಾಣ, ಆಯೋಧ್ಯೆ ಸಂಪೂರ್ಣ ಕ್ರೆಡಿಟ್ ಪ್ರಧಾನಿ ಮೋದಿಗೆ ನೀಡಿದ್ದಾರೆ. ಇದೀಗ ಮಾರಿಷಸ್ ಸಂಸದ ಮಹೇಂದ್ ಗುಂಗಾಪರ್ಸೆದ್ ಮಹತ್ವದ ಹೇಳಿಕೆ ನೀಡಿದ್ದಾರೆ. ವಿವಾದಗಳಿಂದ ಕೂಡಿದ್ದ, ಧಾರ್ಮಿಕ ಶ್ರದ್ಧಾ ಭಕ್ತಿಯ ಕೇಂದ್ರವನ್ನು ಹಳೇ ಗತವೈಭವಕ್ಕೆ ಮರುಕಳಿಸುವಂತೆ ಮಾಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ ಎಂದಿದ್ದಾರೆ.

ನಾನು ಹಾಗೂ ಮಾರಿಷಸ್ ಹಿಂದೂ ಸಮಾಜ ಎಷ್ಟರ ಮಟ್ಟಿಗೆ ಹೆಮ್ಮೆ ಪಡುತ್ತಿದೆ ಅನ್ನೋದನ್ನು ಪದಗಳಲ್ಲಿ ಹೇಳಲು ಅಸಾಧ್ಯ. ಶ್ರೀರಾಮ ಹುಟ್ಟಿದ ಸ್ಥಳದಲ್ಲೇ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ ಅನ್ನೋದು ಅತೀವ ಸಂತಸ ತಂದಿದೆ. ಇದು ಪ್ರತಿಯೊಬ್ಬ ಹಿಂದೂವಿಗೆ ಗರ್ವದ ವಿಚಾರವಾಗಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ ಆಯೋಧ್ಯೆಯನ್ನು ಬೆಳಕಿಗೆ ತರಲು ಸಾಧ್ಯ. ಇದನ್ನು ಮೋದಿ ಮಾಡಿ ತೋರಿಸಿದ್ದಾರೆ ಎಂದು ಮಹೇಂದ್ ಗುಂಗಾಪರ್ಸೇದ್ ಹೇಳಿದ್ದಾರೆ.

Latest Videos

ಆಯೋಧ್ಯೆ ಭೇಟಿ ವೇಳೆ ಉಜ್ವಲ ಫಲಾನುಭವಿ ಮನೆಗೆ ತೆರಳಿ ಚಹಾ ಸೇವಿಸಿದ ಪ್ರಧಾನಿ ಮೋದಿ!

ಆಯೋಧ್ಯೆಯದಲ್ಲಿ ಭವ್ಯ ಶ್ರೀರಾಮನ ಮಂದಿರ ನಿರ್ಮಾಣವಾಗಲಿದೆ ಅನ್ನೋ ನಂಬಿಕೆಗಳೆಲ್ಲಾ ಈ ಹಿಂದೆ ನಶಿಸಿ ಹೋಗಿತ್ತು.  ಅಲ್ಲಿನ ಬೆಳವಣಿಗೆ, ಕಾನೂನು ಹೋರಾಟ, ವಿವಾದ, ನಿಯಮ, ಶತಶತಮಾನಗಳ ಹೋರಾಟ ಆಯೋಧ್ಯೆಯ ರಾಮ ಜನ್ಮಭೂಮಿಯ ಕ್ಲಿಷ್ಟತೆಯನ್ನು ಹೇಳುತ್ತಿತ್ತು. ಇದರ ನಡುವೆ ಎಲ್ಲವನ್ನೂ ಬಗೆಹರಿಸಿ ಇಲ್ಲಿ ಭವ್ಯ ಮಂದಿರ ನಿರ್ಮಾಣವಾಗಿದೆ ಎಂದರೆ ಈ ಸಂತಸವನ್ನು ಹೇಳಲು ಸಾಧ್ಯವೇ? ಪ್ರಧಾನಿ ಮೋದಿಯ ಕಾರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಮಾರಿಷಸ್ ಸಂಸದ ಹೇಳಿದ್ದಾರೆ.

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಬದಲಾಗಿರುವ ಪರಿ ಅದ್ಭುತ. ವಿದೇಶಿಗರು ಭಾರತವನ್ನು ನೋಡುತ್ತಿದ್ದ ದೃಷ್ಟಿಕೋನ ಬದಲಾಗಿದೆ. ಭಾರತ ಹಿಂದಿನ ಗತವೈಭವಕ್ಕೆ ಮರುಕಳಿಸುತ್ತಿದೆ ಅನ್ನೋದೇ ನನ್ನಂತ ವಿದೇಶದಲ್ಲಿ ನೆಲೆಸಿರುವ ಹಲವು ಹಿಂದೂಗಳಿಗೆ ಪುನರ್ಜನ್ಮ ನೀಡಿದಂತೆ. ಇದು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಭಾರತದಿಂದ ಏನೂ ಸಾಧ್ಯವಿಲ್ಲ, ಎಲ್ಲವನ್ನೂ ಇತರ ದೇಶಗಳಿಂದ ಅವಲಂಬಿಸಿದೆ ಅನ್ನೋ ಚಿತ್ರವನ್ನು ಕಳೆದ 10 ವರ್ಷದಲ್ಲಿ ಮೋದಿ ಬದಲಾಯಿಸಿದ್ದಾರೆ. 

ಆಯೋಧ್ಯೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾ

ಮೋದಿಯಿಂದ ಭಾರತದ ಭವಿಷ್ಯ ಉಜ್ವಲವಾಗಿದೆ. ಭಾರತ ಹಾಗೂ ಮಾರಿಷಸ್ ಉತ್ತಮ ಸಂಬಂಧ ಹೊಂದಿದೆ. ಮುಂದಿನ ದಿನಗಳಲ್ಲಿ ಭಾರತದ ಜೊತೆ ಮತ್ತಷ್ಟು ವ್ಯಾಪಾರ ವಹಿವಾಟು ಸಂಬಂಧ ವಿಸ್ತರಿಸಲು ಮಾರಿಷಸ್ ಬದ್ಧವಾಗಿದೆ ಎಂದು ಮಹೇಂದ್ ಗುಂಗಾಪರ್ಸೇದ್ ಹೇಳಿದ್ದಾರೆ.

click me!