ತಪ್ಪಿ ಲಾಟರಿ ಬಟನ್ ಒತ್ತಿದ ಮಹಿಳೆಗೆ ಜಾಕ್‌ಪಾಟ್, ಬರೋಬ್ಬರಿ 8 ಕೋಟಿ ರೂ ಬಹುಮಾನ!

Published : Apr 05, 2024, 06:30 PM IST
ತಪ್ಪಿ ಲಾಟರಿ ಬಟನ್ ಒತ್ತಿದ ಮಹಿಳೆಗೆ ಜಾಕ್‌ಪಾಟ್, ಬರೋಬ್ಬರಿ 8 ಕೋಟಿ ರೂ ಬಹುಮಾನ!

ಸಾರಾಂಶ

ಲಾಟರಿ ವೆಂಡಿಂಗ್ ಮಶಿನ್‌ನಲ್ಲಿ ತಪ್ಪಿ ಯಾವುದೋ ಬಟನ್ ಒತ್ತಿದ್ದಾರೆ. ಆಯ್ಯೋ ನನ್ನಿಂದ ತಪ್ಪಾಯ್ತಲ್ಲ ಎಂದು ಪಶ್ಚಾತಾಪ ಪಟ್ಟಿದ್ದಾರೆ. ಆದರೆ ತಪ್ಪಿ ಒತ್ತಿದ ಇದೇ ಬಟನ್‌ನಿಂದ ಇದೀಗ 8 ಕೋಟಿ ರೂಪಾಯಿ ಲಾಟರಿ ಬಹುಮಾನ ಗೆದ್ದುಕೊಂಡಿದ್ದಾರೆ.

ಬ್ಲಾಕ್ಸ್‌ಬರ್ಗ್(ಏ.05) ಲಾಟರಿ ಹಲವು ಬದುಕು ಬದಲಿದೆ. ಜೊತೆಗೆ ಅದಕ್ಕಿಂತ ದುಪ್ಪಟ್ಟು ಜನರ ಬದುಕ ದುಸ್ತರವಾಗಿದೆ. ರಾತ್ರೋರಾತ್ರಿ ಶ್ರೀಮಂತರಾಗಿದ್ದಾರೆ.  ಭಾರಿ ಲೆಕ್ಕಾಚಾರಗಳೊಂದಿಗೆ ಲಾಟರಿ ಟಿಕೆಟ್ ಖರೀದಿಸಿದವರು ಕೋಟಿ ಕೋಟಿ ರೂಪಾಯಿ ಗೆದ್ದ ಉದಾಹರಣೆ ತೀರಾ ವಿರಳ. ಆದರೆ ಅಚಾನಕ್ಕಾಗಿ ಲಾಟರಿ ಖರೀದಿಸಿ ಬಂಪರ್ ಮೊತ್ತ ಪಡೆದವರ ಸಂಖ್ಯೆ ಹೆಚ್ಚಿದೆ. ಇಲ್ಲೊಬ್ಬ ಮಹಿಳೆ ಲಾಟಕಿ ವೆಂಡಿಂಗ್ ಮಶಿನ್‌ನಲ್ಲಿ ತಪ್ಪಿ ಇನ್ಯಾವುದೋ ಬಟನ್ ಒತ್ತಿದ್ದಾರೆ. ಅರೇ ಇದೇನು ಮಾಡಿಬಿಟ್ಟಿ ಎಂದು ಸಂಕಪಟ್ಟಿದ್ದಾರೆ. ಆದರೆ ತಪ್ಪಿ ಒತ್ತಿದ ಬಟನ್‌ನಿಂದ ಮಹಿಳೆ ಬರೋಬ್ಬರಿ 8 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದ ಘಟನೆ ಅಮೆರಿಕದ ಬ್ಲಾಕ್ಸ್‌ಬರ್ಗ್‍‌ನಲ್ಲಿ ನಡೆದಿದೆ.

ಮಿರಿಯಾಮ್ ಲಾಂಗ್  ವರ್ಜಿನಿಯಾ ಲಾಟರಿ ವೆಂಡಿಂಗ್ ಮಶೀನ್ ಬಳಿ ತೆರಳಿ ಲಾಟರಿಯಲ್ಲಿ ಅದೃಷ್ಠ ಪರೀಕ್ಷೆ ನಡೆಸಲು ಮುಂದಾಗಿದ್ದಾಳೆ. ಕ್ರಿಸ್ಟಿಯನ್‌ಬರ್ಗ್ ನಿವಾಸಿಯಾಗಿರುವ ಮಿರಿಯಾಮ್ ಲಾಂಗ್ ಮಾರ್ಚ್ 18 ರಂದು ಮೆಘಾ ಮಿಲಿಯನ್ ಲಾಟರಿ ಖರೀದಿಸಲು ವರ್ಜಿನ್ ಲಾಟರಿ ವೆಂಡಿಂಗ್ ಮಶಿನ್ ಬಳಿ ತೆರಳಿದ್ದಾರೆ. ವರ್ಜಿನ್ ಲಾಟರಿಯಲ್ಲಿ ಹಲವು ಆಯ್ಕೆಗಳಿವೆ. ಆದರೆ ಮೊದಲ ಬಾರಿಗೆ ಲಾಟರಿ ಖರೀದಿಸಲು ಮುಂದಾಗಿದ್ದ ಮಿರಿಯಾಮ್, ಲಾಟರಿ ವೆಂಡಿಂಗ್ ಮಶಿನ್‌ನಲ್ಲಿ ಖರೀದಿಗೆ ಪ್ರಕ್ರಿಯೆ ಆರಂಭಿಸಿದ್ದಾರೆ.

ಯುಎಇಯಲ್ಲಿ 33 ಕೋಟಿ ಲಾಟರಿ ಗೆದ್ದ ಭಾರತೀಯ!

ಮೆಘಾ ಮಿಲಿಯನ್ ಲಾಟರಿ ಖರೀದಿಸುವ ಆಯ್ಕೆ ಬದಲು ಮಿರಿಯಾಮ್ ಲಾಂಗ್ ಪವರ್ ಬಾಲ್ ಲಾಟರಿ ಬಟನ್ ಒತ್ತಿದ್ದಾರೆ. ಪವರ್ ಬಾಲ್ ಟಿಕೆಟ್ ನಂಬರ್ ಮ್ಯಾಚಿಂಗ್ ಟಿಕೆಟ್. ಗರಿಷ್ಠ ನಂಬರ್ ಮ್ಯಾಚ್ ಮಾಡುವವರು ಬಹುಮಾನ ಗೆಲ್ಲುತ್ತಾರೆ. ತಪ್ಪಿ ಒತ್ತಿದ ಪವರ್ ಬಾಲ್ ಟಿಕೆಟ್ ಮಿರಿಯಾಮ್ ಲಾಂಗ್ ಅದೃಷ್ಠ ಬದಲಾಯಿಸಿದೆ.  1 ಮಿಲಿಯನ್ ಬಹುಮಾನ ಜಾಕ್‌ಪಾಟ್ ಹೊಡೆದಿದೆ. ಭಾರತೀಯ ರೂಪಾಯಿಗಳಲ್ಲಿ ಮೊತ್ತ 8.3 ಕೋಟಿ ರೂಪಾಯಿ.

ನಾನು ತಪ್ಪಿ ಪವರ್ ಬಾಲ್ ಟಿಕೆಟ್ ಆಯ್ಕೆ ಮಾಡಿದ್ದೆ. ಈ ಲಾಟರಿ ಖರೀದಿಸುವ ಯಾವುದೇ ಉದ್ದೇಶ ನನಗೆ ಇರಲಿಲ್ಲ. ಆದರೆ ಬಟನ್ ತಪ್ಪಿ ಒತ್ತಿದ್ದೇನೆ. ಲಾಟರಿ ಟಿಕೆಟ್ ಬಂದಾಗಿತ್ತು. ಹೀಗಾಗಿ ಅನಿವಾರ್ಯವಾಗಿ ತೆಗೆದುಕೊಂಡೆ. ಆದರೆ ತಪ್ಪಿ ಒತ್ತಿದ ಬಟನ್ ನನ್ನ ಬದಕು ಬದಲಾಯಿಸಿದೆ ಎಂದು ಮಿರಿಯಾಮ್ ಹೇಳಿದ್ದಾರೆ.

ಪವರ್ ಬಾಲ್ ಲಾಟರಿ ಗೆದ್ದ ಮಿರಿಯಾಮ್ ಲಾಂಗ್ ಇನ್ನು ಮೆಘಾ ಮಿಲಿಯನ್ ಲಾಟರಿ ಖರೀದಿಸುವ ಆಸೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ತಪ್ಪಿ ಒತ್ತಿದ ಬಟನ್‌ನಿಂದ 8 ಕೋಟಿ ರೂಪಾಯಿ ಬಹುಮಾನ ಪಡೆದುಕೊಂಡರೆ ಸರಿಯಾಗಿ ಒತ್ತಿದ ಬಟನ್‌ನಿಂದ ದುಪ್ಪಟ್ಟ ಬಹುಮಾನ ಸಿಗುವ ಸಾಧ್ಯತೆ ಇದೆ ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿದ್ದಾರೆ.

8 ಕೋಟಿ ಲಾಟರಿ ಗೆದ್ದ ಖುಷಿ ತಡೆಯಲಾಗದೇ ಸ್ಟೇಜ್‌ನಲ್ಲೇ ಕುಸಿದು ಬಿದ್ದ ಮಹಿಳೆ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!