ತೈವಾನ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ 7.4 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ಭೂಕಂಪನದ ಸಮಯದಲ್ಲೂ ತೈವಾನ್‌ನ ಗಗನಚುಂಬಿ ಕಟ್ಟಡ ತೈಪೆ 101 ಯಾವುದೇ ಹಾನಿಗೊಳಗಾಗದೇ ಸಧೃಡವಾಗಿ ನಿಂತಿದ್ದು, ಅಚ್ಚರಿಗೆ ಕಾರಣವಾಗಿದೆ.
ತೈವಾನ್‌ನಲ್ಲಿ ಕೆಲ ದಿನಗಳ ಹಿಂದಷ್ಟೇ 7.4 ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಈ ಭೂಕಂಪನದ ಸಮಯದಲ್ಲೂ ತೈವಾನ್‌ನ ಗಗನಚುಂಬಿ ಕಟ್ಟಡ ತೈಪೆ 101 ಯಾವುದೇ ಹಾನಿಗೊಳಗಾಗದೇ ಸಧೃಡವಾಗಿ ನಿಂತಿದ್ದು, ಅಚ್ಚರಿಗೆ ಕಾರಣವಾಗಿದೆ. ಈ ಕಟ್ಟಡವೂ ತೈವಾನ್‌ನಲ್ಲಿರುವ ಅತಿ ಎತ್ತರದ ಇತರ ಗಗನಚುಂಬಿ ಕಟ್ಟಡಗಳಂತೆ ಭೂಕಂಪಗಳು ಮತ್ತು ಬಲವಾದ ಗಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಬಲ್ಲ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿದೆ.
ಆದರೆ ಈ ಬೃಹತ್ ಕಟ್ಟಡ ಭೂಕಂಪನಕ್ಕೂ ಬಗ್ಗದೇ ನೇರವಾಗಿ ನಿಲ್ಲಲು ಕಾರಣವಾಗಿದ್ದು, ಅದು ಹೊಂದಿದ, ಲೋಹದ ದೈತ್ಯ ಲೋಲಕವಂತೆ (giant pendulum) ಈ ಕಟ್ಟಡದ ಮಧ್ಯಭಾಗದಲ್ಲಿರುವ ದೊಡ್ಡ ಹಳದಿ ಲೋಲಕವೂ ಕಟ್ಟಡವೂ ಎದುರಾದ ಆಘಾತವನ್ನು ಎದುರಿಸಲು ಸಹಾಯ ಮಾಡಿತ್ತು ಎಂದು ವರದಿ ಆಗಿದೆ. ಡ್ಯಾಂಪರ್ ಬೇಬಿ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಈ ಲೋಲಕವೂ ಗಾಳಿಯ ವೇಗವನ್ನು ನಿಯಂತ್ರಿಸುವ ಉಪಕರಣವಾಗಿದ್ದು (mass damper), ಕಟ್ಟಡದಿಂದ ಮಧ್ಯಭಾಗದಲ್ಲಿ ನೆಲದಿಂದ ಸಾವಿರ ಅಡಿಯಷ್ಟು ಎತ್ತರದಲ್ಲಿ ನಿಲ್ಲಿಸಲ್ಪಟ್ಟಿರುವ 660 ಮೆಟ್ರಿಕ್ ಟನ್ ತೂಕದ ಉಕ್ಕಿನ ಚೆಂಡಾಗಿದೆ. ಭೂಕಂಪನ ಹಾಗೂ ಬಲವಾದ ಗಾಳಿಯ ಸಮಯದಲ್ಲಿ ಈ ಚೆಂಡು ಕಟ್ಟಡದ ಚಲನೆಯನ್ನು ನಿಯಂತ್ರಿಸುತ್ತದೆ ಹಾಗೂ ಕಟ್ಟಡದ ತೂಗಾಡುವಿಕೆಯನ್ನು ಶೇಕಡಾ 40 ರಷ್ಟು ಕಡಿಮೆ ಮಾಡುತ್ತದೆ ಎಂದು ವರದಿ ಆಗಿದೆ.
25 ವರ್ಷಗಳಲ್ಲೇ ಬಲಿಷ್ಠವಾದ ಭೂಕಂಪಕ್ಕೆ ತೈವಾನ್ ತತ್ತರ!
ಈ ಕಬ್ಬಿಣದ ಪೆಂಡಾಲಮ್ ಈ ಗಗನಚುಂಬಿ ಕಟ್ಟಡದ 87 ಹಾಗೂ 92ನೇ ಅಂತಸ್ಥಿನ ಮಧ್ಯದಲ್ಲಿ ತೂಗುತ್ತದೆ. 41 ಸ್ಟೀಲ್ ಲೇಯರ್‌ಗಳನ್ನು ಬಳಸಿ ಈ ಉಕ್ಕಿನ ಚೆಂಡಿನ ಪೆಂಡಾಲಮ್ ಅನ್ನು ನಿರ್ಮಿಸಲಾಗಿದೆ. ಇದು ಸುಮಾರು 18 ಅಡಿ ಸುತ್ತಳತೆ(ವ್ಯಾಸ) ಯನ್ನು ಹೊಂದಿದೆ ಮತ್ತು ಅತಿಯಾದ ಚಲನೆಯನ್ನು ತಡೆಯಲು 59 ಇಂಚುಗಳ ಮಿತಿಯೊಳಗೆ ಸ್ವಿಂಗ್ ಆಗುತ್ತಿರುತ್ತದೆ. ಈ ವಿಶಿಷ್ಟ ತಂತ್ರಜ್ಞಾನವನ್ನು ಹೊಂದಿರುವ ತೈಪೆ 101 ಕಟ್ಟಡವೂ ಒಂದು ಕಾಲದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡವಾಗಿತ್ತು ಮತ್ತು ತೈವಾನ್‌ನ ಅತೀ ಎತ್ತರದ ಗಗನಚುಂಬಿ ಕಟ್ಟಡವಾಗಿ ಉಳಿದಿದೆ. ಈ ಕಟ್ಟಡದ ವಿನ್ಯಾಸವು ಭೂಕಂಪ ಪೀಡಿತ ಪ್ರದೇಶಗಳಲ್ಲಿನ ರಚನೆಗಳನ್ನು ರಕ್ಷಿಸಲು ನವೀನ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ತೋರಿಸುತ್ತಿದೆ.
ವಿಂಡ್ ಡ್ಯಾಂಪಿಂಗ್ ಚೆಂಡು(ಗಾಳಿಯ ನಿಯಂತ್ರಿಸುವ ಚೆಂಡು) ಇದರ ತಾಂತ್ರಿಕ ಹೆಸರು ಟ್ಯೂನ್ಡ್ ಮಾಸ್ ಡ್ಯಾಂಪರ್ (ಟಿಎಮ್‌ಡಿ). ಇದು ಕಟ್ಟಡದ ಅಗತ್ಯಗಳಿಗೆ ಅನುಗುಣವಾಗಿ ನಿಷ್ಕ್ರಿಯ ವ್ಯವಸ್ಥೆಯಾಗಿದೆ. ಇದು ಬಲವಾದ ಗಾಳಿಯಿಂದ ಕಟ್ಟಡ ತೂಗಾಡುವುದನ್ನು ಕಡಿಮೆ ಮಾಡುವುದು ಮತ್ತು ಅಂತಹ ಎತ್ತರದ ಗೋಪುರದಲ್ಲಿ ಕೆಲಸ ಮಾಡಲು ಆರಾಮದಾಯಕವಾಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಸಾಂಪ್ರದಾಯಿಕವಾಗಿ ಮರೆಮಾಚುವ ಡ್ಯಾಂಪಿಂಗ್ ವ್ಯವಸ್ಥೆಗಳು ಕಾಣಲು ಸಿಗುವುದಿಲ್ಲ. ಆದರೆ ತೈಪೆ 101 ಕಟ್ಟಡದ ಡಿಎಂಡಿಯೂ ಕ್ರಿಯಾತ್ಮಕವಾಗಿದ್ದು, ಸೌಂದರ್ಯದಿಂದ ಆಕರ್ಷಿತವಾಗಿದೆ. ಈ ಗಗನಚುಂಬಿ ಕಟ್ಟಡಕ್ಕೆ ಭೇಟಿ ನೀಡುವವರು ಡ್ಯಾಂಪಿಂಗ್ ಸಿಸ್ಟಮ್‌ನ ಒಟ್ಟಾರೆ ಕಾರ್ಯಾಚರಣೆಯ ಅನುಭವವನ್ನು ವೀಕ್ಷಿಸಬಹುದಾಗಿದೆ.
ದ್ವೀಪರಾಷ್ಟ್ರ ತೈವಾನ್‌ನಲ್ಲಿ 7.4 ತೀವ್ರತೆಯ ಭಾರೀ ಭೂಕಂಪ: ಜಪಾನ್‌ನಲ್ಲಿ ಸುನಾಮಿ ಅಲರ್ಟ್