ಉಗ್ರರ ಬಗ್ಗೆ ಪಾಕ್‌ ಡಬ್ಬಲ್‌ ಆ್ಯಕ್ಟಿಂಗ್‌: ಅಮೆರಿಕ ಗರಂ!

Published : Sep 15, 2021, 08:02 AM ISTUpdated : Sep 15, 2021, 08:33 AM IST
ಉಗ್ರರ ಬಗ್ಗೆ ಪಾಕ್‌ ಡಬ್ಬಲ್‌ ಆ್ಯಕ್ಟಿಂಗ್‌: ಅಮೆರಿಕ ಗರಂ!

ಸಾರಾಂಶ

* ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ *  ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚನೆ * ಉಗ್ರರ ಬಗ್ಗೆ ಪಾಕ್‌ ಡಬ್ಬಲ್‌ ಆ್ಯಕ್ಟಿಂಗ್‌: ಅಮೆರಿಕ ಗರಂ!

ವಾಷಿಂಗ್ಟನ್‌(ಸೆ.15): ಒಂದೆಡೆ ಅಫ್ಘಾನಿಸ್ತಾನ ವಿಷಯದಲ್ಲಿ ಅಮೆರಿಕ್ಕೆ ಸಹಾಯ ಮಾಡುವುದಾಗಿ ಹೇಳುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ತಾಲಿಬಾನಿ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದೆ. ಹೀಗಾಗಿ ಆ ರಾಷ್ಟ್ರದ ಜೊತೆಗಿನ ಸಂಬಂಧವನ್ನು ನಾವು ಮರು ಪರಿಶೀಲನೆ ಮಾಡಲಿದ್ದೇವೆ ಎಂದು ಅಮೆರಿಕದ ಜೋ ಬೈಡೆನ್‌ ಆಡಳಿತ ಹೇಳಿದೆ.

ಸಂಸದೀಯ ಸಮಿತಿಯೊಂದರ ಮುಂದೆ ಹಾಜರಾಗಿದ್ದ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕನ್‌ಗೆ, ಸದಸ್ಯರು ಸರಣಿ ಪ್ರಶ್ನೆಗಳನ್ನು ಎಸೆದರು. ನ್ಯಾಟೋ ಹೊರತು ಪಡಿಸಿ ಪಾಕಿಸ್ತಾನವನ್ನು ಪ್ರಮುಖ ಮಿತ್ರ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದೆ. ಆದರೆ ಕಳೆದ 2 ದಶಕಗಳಿಂದಲೂ ತಾಲಿಬಾನ್‌ ಉಗ್ರರು ಅದರಲ್ಲೂ ವಿಶೇಷವಾಗಿ ಹಕ್ಕಾನಿ ಸಂಘಟನೆ ಜೊತೆ ಪಾಕ್‌ ಸರ್ಕಾರ ಹತ್ತಿರದ ನಂಟು ಹೊಂದಿದೆ. ಪಾಕ್‌ ಸರ್ಕಾರದ ಇಂಥ ಹಲವು ಹಿತಾಸಕ್ತಿಗಳು ಅಮೆರಿಕದ ಪಾಲಿಗೆ ಮಾರಕವಲ್ಲವೇ ಎಂದು ಬ್ಲಿಂಕನ್‌ ಅವರನ್ನು ಸದಸ್ಯರು ಪ್ರಶ್ನಿಸಿದರು. ಈ ವೇಳೆ ಬ್ಲಿಂಕನ್‌ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ನಡೆಯನ್ನು ನಮ್ಮ ಆಡಳಿತ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಸದಸ್ಯರು, ಪಾಕಿಸ್ತಾನಕ್ಕೆ ನೀಡಿರುವ ನ್ಯಾಟೋಯೇತರ ಅತ್ಯಾಪ್ತ ದೇಶ ಮನ್ನಣೆ ತೆಗೆಯುವುದು, ಆಫ್ಘನ್‌ ವಲಯದಲ್ಲಿ ಪಾಕ್‌ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಮತ್ತು ಪಾಕಿಸ್ತಾನದ ಮೇಲೆ ಕೆಲ ನಿರ್ಬಂಧಗಳನ್ನು ಹೇರಬೇಕು ಎಂದು ಸಲಹೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ