* ನೆರೆಯ ಪಾಕಿಸ್ತಾನದಲ್ಲಿ ಇದೀಗ ಕೊರೋನಾ 4ನೇ ಅಲೆ
* ಆಸ್ಪತ್ರೆಗಳಲ್ಲಿ ತೀವ್ರ ಆಮ್ಲಜನಕ ಕೊರತೆ
* ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನೆ ಇಲ್ಲ, ದೇಶದ ಹಲವು ಭಾಗಗಳಲ್ಲಿ ಜನರು ಭಾರೀ ಸಮಸ್ಯೆ
ಕರಾಚಿ(ಸೆ.14): ನೆರೆಯ ಪಾಕಿಸ್ತಾನದಲ್ಲಿ ಇದೀಗ ಕೊರೋನಾ 4ನೇ ಅಲೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ ತೀವ್ರ ಆಮ್ಲಜನಕ ಕೊರತೆ ಎದುರಾಗಿದೆ. ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟು ಆಮ್ಲಜನಕ ಉತ್ಪಾದನೆಯಾಗದ ಹಿನ್ನೆಲೆಯಲ್ಲಿ ದೇಶದ ಹಲವು ಭಾಗಗಳಲ್ಲಿ ಜನರು ಭಾರೀ ಸಮಸ್ಯೆ ಎದುರಿಸುವಂತಾಗಿದೆ.
ಹಾಲಿ ದೇಶದಲ್ಲಿ 4000ದ ಆಸುಪಾಸಿನ ಕೇಸುಗಳು ದಾಖಲಾಗುತ್ತಿದ್ದು, 100ರ ಆಸುಪಾಸಿನಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. 1 ಲಕ್ಷ ಸಕ್ರಿಯ ಸೋಂಕಿತರಿದ್ದಾರೆ. ಆದರೆ ಅವರಿಗೂ ಅಗತ್ಯವಾದಷ್ಟು ಆಮ್ಲಜನಕ ಉತ್ಪಾದನೆ ಆಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಪತ್ರ ಬರೆದಿರುವ ಆಮ್ಲಜನಕ ಉತ್ಪಾದನೆ ಸಂಸ್ಥೆ ‘ಪಾಕಿಸ್ತಾನದ ಆಮ್ಲಜನಕ ಲಿ.(ಪಿಒಎಲ್)’, ‘ದೇಶದ ಆಸ್ಪತ್ರೆಗಳಿಗೆ ಅಗತ್ಯವಿರುವಷ್ಟುಆಮ್ಲಜನಕ ಉತ್ಪಾದನೆ ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮಿಂದ ಸಾಧ್ಯವಾದಷ್ಟುಆಮ್ಲಜನಕ ಉತ್ಪಾದಿಸುತ್ತಿದ್ದೇವೆ. ಪರಿಸ್ಥಿತಿ ನಮ್ಮ ನಿಯಂತ್ರಣಕ್ಕೆ ಮೀರಿದ್ದಾಗಿದೆ. ಸೋಂಕಿತರ ಗುಣಮುಖಕ್ಕಾಗಿ ಆಸ್ಪತ್ರೆಗಳೇ ಪರಾರಯಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ.