ಚೀನಾ ವಿರುದ್ಧ ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾ ಹೊಸ ಮೈತ್ರಿಕೂಟ

Kannadaprabha News   | Asianet News
Published : Sep 17, 2021, 09:19 AM ISTUpdated : Sep 17, 2021, 09:54 AM IST
ಚೀನಾ ವಿರುದ್ಧ ಅಮೆರಿಕ, ಬ್ರಿಟನ್‌, ಆಸ್ಪ್ರೇಲಿಯಾ ಹೊಸ ಮೈತ್ರಿಕೂಟ

ಸಾರಾಂಶ

  ಭಾರತದ ಸುತ್ತಮುತ್ತಲಿನ ಇಂಡೋ-ಪೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಚೀನಾ ಹೆಚ್ಚು ಪ್ರಭಾವ ಬೆಳೆಸುತ್ತಿರುವುದನ್ನು ಮನಗಂಡಿರುವ ಅಮೆರಿಕ, ಬ್ರಿಟನ್‌ ಹಾಗೂ ಆಸ್ಪ್ರೇಲಿಯಾಗಳ ಒಗ್ಗಟ್ಟು ತ್ರಿಪಕ್ಷೀಯ ಭದ್ರತಾ ಒಪ್ಪಂದದ ಘೋಷಣೆ ಮಾಡಿವೆ. ಚೀನಾ ಪ್ರಭಾವವನ್ನು ಈ ವಲಯದಲ್ಲಿ ತಗ್ಗಿಸುವ ಉದ್ದೇಶವನ್ನೇ ಈ ಮೈತ್ರಿಕೂಟ ಹೊಂದಿದೆ  

 ವಾಷಿಂಗ್ಟನ್‌/ಲಂಡನ್‌ (ಸೆ.17):  ಭಾರತದ ಸುತ್ತಮುತ್ತಲಿನ ಇಂಡೋ-ಪೆಸಿಫಿಕ್‌ ಸಮುದ್ರ ಪ್ರದೇಶದಲ್ಲಿ ಚೀನಾ ಹೆಚ್ಚು ಪ್ರಭಾವ ಬೆಳೆಸುತ್ತಿರುವುದನ್ನು ಮನಗಂಡಿರುವ ಅಮೆರಿಕ, ಬ್ರಿಟನ್‌ ಹಾಗೂ ಆಸ್ಪ್ರೇಲಿಯಾಗಳು ಈಗ ಒಗ್ಗಟ್ಟಾಗಿದ್ದು ಹೊಸ ತ್ರಿಪಕ್ಷೀಯ ಭದ್ರತಾ ಒಪ್ಪಂದದ ಘೋಷಣೆ ಮಾಡಿವೆ. ಚೀನಾ ಪ್ರಭಾವವನ್ನು ಈ ವಲಯದಲ್ಲಿ ತಗ್ಗಿಸುವ ಉದ್ದೇಶವನ್ನೇ ಈ ಮೈತ್ರಿಕೂಟ ಹೊಂದಿದೆ ಎಂದು ಹೇಳಲಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಹಾಗೂ ಬ್ರಿಟನ್‌ ಪ್ರಧಾನಿ ಬೊರಿಸ್‌ ಜಾನ್ಸನ್‌ ಅವರು ಈ ಮೈತ್ರಿ ಘೋಷಿಸಿ ಜಂಟಿ ಹೇಳಿಕೆ ನೀಡಿದ್ದಾರೆ. ಈ ನಡೆಯು ಇಂಡೋ-ಪೆಸಿಫಿಕ್‌ ವಲಯದಲ್ಲಿ ಸ್ಥಿರತೆ ಉಂಟು ಮಾಡಲಿದೆ. ಇದು ಐತಿಹಾಸಿಕ ಕ್ರಮ ಎಂದು ಹೇಳಿದ್ದಾರೆ.

ತಾಲಿ​ಬಾ​ನ್‌ಗೆ ಚೀನಾ 230 ಕೋಟಿ ನೆರ​ವು!

‘ಔಕುಸ್‌’ (ಆಸ್ಪ್ರೇಲಿಯ, ಬ್ರಿಟನ್‌, ಅಮೆರಿಕ) ಹೆಸರಿನ ಈ ಮೈತ್ರಿಕೂಟದಲ್ಲಿ ಎಲ್ಲ ಮೂರೂ ದೇಶಗಳು ಸಾಗರ ರಕ್ಷಣೆಗೆ ಸಂಬಂಧಿಸಿದ ತಂತ್ರಜ್ಞಾನ ಸಹಕಾರ ವೃದ್ಧಿಸಿಕೊಳ್ಳಲಿವೆ. ಒಬ್ಬರ ನೆಲೆಯನ್ನೊಬ್ಬರು ಬಳಕೆ ಮಾಡಿಕೊಳ್ಳಲಿವೆ. ರಕ್ಷಣಾ ವಿಜ್ಞಾನ-ತಂತ್ರಜ್ಞಾನದ ವಿನಿಮಯ ಮಾಡಿಕೊಳ್ಳಲಿವೆ.

ಇದೇ ವೇಳೆ, ಆಸ್ಪ್ರೇಲಿಯಾ ದೇಶವು ಅಣ್ವಸ್ತ್ರ ಚಾಲಿತ ಸಬ್‌ಮರೀನ್‌ಗಳನ್ನು ಅಮೆರಿಕ ಹಾಗೂ ಬ್ರಿಟನ್‌ ಸಹಾಯದಿಂದ ನಿರ್ಮಿಸಲಿದೆ. ಈ ಜಲಾಂತರ್ಗಾಮಿಗಳ ಮೂಲಕ ಏಷ್ಯಾ ಪೆಸಿಫಿಕ್‌ ವಲಯದ ಸಮುದ್ರದಲ್ಲಿ ಕಣ್ಗಾವಲು ಇಡಲಾಗುತ್ತದೆ. ಇದು ಈ ವಲಯದಲ್ಲಿ ಪ್ರಭಾವ ಹೆಚ್ಚಿಸಿಕೊಳ್ಳುವ ಹವಣಿಕೆಯಲ್ಲಿ ಇರುವ ಚೀನಾ ಓಟಕ್ಕೆ ಬ್ರೇಕ್‌ ಹಾಕುವ ಉದ್ದೇಶ ಹೊಂದಿವೆ.

ಮುಂದಿನ 18 ತಿಂಗಳಲ್ಲಿ ಈ ಉದ್ದೇಶಿತ ಯೋಜನೆಯನ್ನು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಸಾಕಾರಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ