
ಕಾಬೂಲ್ (ಸೆ.17): ಅಷ್ಘಾನಿಸ್ತಾನದಲ್ಲಿ ಇತ್ತೀಚೆಗಷ್ಟೇ ಸರ್ಕಾರ ರಚನೆ ಮಾಡಿದ ತಾಲಿಬಾನ್‌ನಲ್ಲಿ ಎರಡು ಬಣಗಳ ನಡುವಿನ ಭಿನ್ನಮತ ಸ್ಫೋಟಗೊಂಡಿದೆ. ತಾಲಿಬಾನ್ ಸರ್ಕಾರದ ಕ್ಯಾಬಿನೆಟ್ ಸದಸ್ಯರು ಸಿದ್ಧಾಂತವಾದಿಗಳು ಮತ್ತು ವ್ಯವಹಾರಿಕ ಬಣಗಳಾಗಿ ವಿಭಜನೆಗೊಂಡಿದ್ದಾರೆ.
ಅಪ್ಘಾನ್ ಮೂಲದ ಭಾರತೀಯ ಉದ್ಯಮಿಯನ್ನು ಅಪಹರಿಸಿದ ತಾಲಿಬಾನ್!
ಇತ್ತೀಚೆಗೆ ಅಧ್ಯಕ್ಷೀಯ ಅರಮನೆಯಲ್ಲಿಯೇ ಈ ಎರಡು ಬಣಗಳ ಮಧ್ಯೆ ಕಲಹ ಏರ್ಪಟ್ಟಿತ್ತು. ಈ ವೇಳೆ ವ್ಯವಹಾರಿಕ ಬಣದ ನಾಯಕ, ಉಪಪ್ರಧಾನಿ ಅಬ್ದುಲ್ ಘನಿ ಬರಾದರ್‌ನನ್ನು ಹತ್ಯೆ ಮಾಡಲಾಗಿದೆ ಎಂಬ ವದಂತಿಗೂ ಕಾರಣವಾಗಿತ್ತು.
ಆ ಬಳಿಕ ತಾನು ಸಾವಿಗೀಡಾಗಿಲ್ಲ ಎಂಬ ಬಗ್ಗೆ ಬರಾದರ್ ತಾನೇ ಸ್ವತಃ ಹೇಳಿಕೆಯನ್ನು ಬಿಡುಗಡೆ ಮಾಡಿದ್ದ. ಇದರ ಬೆನ್ನಲ್ಲೇ ತಾಲಿಬಾನ್ ಎರಡು ಬಣವಾಗಿ ವಿಭಜನೆಗೊಂಡಿರುವುದು ಜಗಜ್ಜಾಹೀರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ