
ವಾಷಿಂಗ್ಟನ್ (ಜು.13): ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ ಭಾರತಲವು ‘ರಕ್ತದ ಹಣ’ ಸಂಪಾದಿಸುತ್ತದೆ ಎಂದು ಆರೋಪಿಸಿದ್ದ ಹಾಗೂ ಇದಕ್ಕಾಗಿ ಭಾರತ, ಚೀನಾ ಮೇಲೆ ಶೇ.500ರಷ್ಟು ತೆರಿಗೆ ವಿಧಿಸಬೇಕೆಂದು ಪ್ರತಿಪಾದಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ, ರಿಪಬ್ಲಿಕ್ ಪಕ್ಷದ ಸೆನೆಟರ್ ಸೆನೆಟರ್ ಲಿಂಡ್ಸೆ ಗ್ರಹಾಂ (71) ಅವರು ಭಾನುವಾರ ದಿಢೀರ್ ಅನಾರೋಗ್ಯದಿಂದಾಗಿ ಅಸುನೀಗಿದ್ದಾರೆ.
ಬಲಪಂಥೀಯ ರಿಪಬ್ಲಿಕನ್ ಪಕ್ಷದ ಪ್ರಭಾವಿ ನಾಯಕರಾಗಿದ್ದ ಗ್ರಹಾಂ ಅವರು ರಷ್ಯಾ ವಿರುದ್ಧದ ಸಂಘರ್ಷದಲ್ಲಿ ಉಕ್ರೇನ್ ಪರ ಗಟ್ಟಿ ಧ್ವನಿಯಾಗಿ ನಿಂತಿದ್ದರು. ಇರಾನ್ ವಿರುದ್ಧ ಅಮೆರಿಕ ದಾಳಿ ಮಾಡಬೇಕೆಂದು ಹಿಂದಿನಿಂದಲೂ ವಾದಿಸುತ್ತಾ ಬಂದಿದ್ದರು. ಹಿಂದಿನ ಸರ್ಕಾರಾವಧಿಯಲ್ಲಿ ನಡೆದಿದ್ದ ಇರಾನ್-ಅಮೆರಿಕ ಪರಮಾಣು ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದವರು ಗ್ರಹಾಂ.
ಗಾಜಾ ಸಂಘರ್ಷದ ವಿಚಾರದಲ್ಲಿ ಇಸ್ರೇಲ್‌ಗೆ ಅಚಲ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದ ಗ್ರಹಾಂ ಅವರು, 2016ರಲ್ಲಿ ರಿಪಬ್ಲಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯ ಪ್ರಚಾರದ ವೇಳೆ ವಿರುದ್ಧವಾಗಿ ನಿಂತಿದ್ದರೂ ಮುಂದೆ ಟ್ರಂಪ್ ಅವರ ಆತ್ಮೀಯ ವಲಯದಲ್ಲಿ ಸೇರಿಕೊಂಡಿದ್ದರು.
ಗ್ರಹಾಂ ನಿಧನಕ್ಕೆ ಟ್ರಂಪ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ನಿಜವಾದ ದೇಶಭಕ್ತ. ನಾನು ಕಂಡ ಶ್ರೇಷ್ಠ ವ್ಯಕ್ತಿ, ಸೆನೆಟರ್ ಆಗಿದ್ದರು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ