
ನ್ಯೂಯಾರ್ಕ್(ಏ.16):ಸಿಖ್ ಸಮುದಾಯದ ವೈಶಾಖಿ ಹಬ್ಬ ಹಾಗೂ ಗುರ್ ತೇಗ್ ಬಹದ್ದೂರ್ 400ನೇ ಜಯಂತಿ ಹಿನ್ನಲೆಯಲ್ಲಿ ಸಿಖ್ ಸಮುದಾಯಗ ಶುಭಾಶಯ ಹೇಳಿದ ಸೆನೆಟರ್, ಸಿಖ್ ಸಮುದಾಯದ ನಿಸ್ವಾರ್ಥ ಸೇವೆ, ತ್ಯಾಗವನ್ನು ಅಮೆರಿಕ ಸೆನೆಟರ್ ಪ್ಯಾಟ್ ಟೂಮಿ ಕೊಂಡಾಡಿದ್ದಾರೆ.
ದೆಹಲಿ ಗುರುದ್ವಾರ ಮಂದಿರ ಆಸ್ಪತ್ರೆಯಲ್ಲಿ ಅತೀ ಕಡಿಮೆ ದರದಲ್ಲಿ ಸೇವೆ; 50 ರೂ.ಗೆ MRI ಸ್ಕಾನ್!.
ಸಿಖ್ ಹೊಸ ವರ್ಷವಾದ ವೈಶಾಖಿ ಹಬ್ಬ ಹಾಗೂ ಗುರು ತೇಜ್ ಬಹದ್ದೂರ್ ಅವರ ಜನ್ಮ 400 ನೇ ವರ್ಷಾಚರಣೆಗಾಗಿ ಸಿಖ್ ಸಮುದಾಯಕ್ಕೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ ಎಂದು ಪ್ಯಾಟ್ ಟೂಮಿ ಹೇಳಿದ್ದಾರೆ. ಸಿಖ್ ಸಂಪ್ರದಾಯಗಳು ಶಾಂತಿ, ಗೌರವ ಮತ್ತು ಸಮಾನತೆಯ ಆದರ್ಶಗಳ ಮೇಲೆ ನಿಂತಿದೆ. ಭಾರತದ ಪಂಜಾಬ್‌ನಲ್ಲಿ ಸಿಖ್ ಮೂಲ ಇದ್ದರೆ, ಕಳೆದ 600 ವರ್ಷಗಳಿಂದ ವಿಶ್ವದೆಲ್ಲೆಡೆ ಸಿಖ್‌ರು ಅಭಿವದ್ಧಿ ಪಥದಲಾಲಿ ಸಾಗೋ ಮೂಲಕ ಹೆಮ್ಮೆ ತಂದಿದ್ದಾರೆ ಎಂದು ಸೆನೆಟರ್ ಹೇಳಿದ್ದಾರೆ
ಅಲ್ಪಸಂಖ್ಯಾತ ಸಿಖ್ಖರು ಮತ್ತು ಹಿಂದುಗಳು ಅಳಿವಿನಂಚಿನಲ್ಲಿದ್ದಾರೆ
ಸಿಖ್ ಸಮುದಾಯದಲ್ಲಿ ಸಮಾನತೆಗೆ ಹೆಚ್ಚಿನ ಆದ್ಯತೆ ಇದೆ. ಸಿಖ್ ಜನಸಂಖ್ಯೆ ಒಟ್ಟು 30 ಮಿಲಿಯನ್. ಇದರಲ್ಲಿ 700,000 ಸಿಖ್‌ರು ಅಮೆರಿಕದಲ್ಲಿ ನೆಲೆಸಿದ್ದಾರೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಅಮೆರಿಕದಲ್ಲಿ ನೆಲೆಸಿುವ ಸಿಖ್ ಸಮುದಾಯ ಮಾಸ್ಕ್, ಅಗತ್ಯ ವಸ್ತು, ಆಹಾರ ಸೇರಿದಂತೆ ಹಲವು ವೈದ್ಯಕೀಯ ವಸ್ತುಗಳನ್ನು ಅಗತ್ಯವಿರುವವರಿಗೆ ತಲುಪಿಸಿದ್ದಾರೆ.
ವಿಶ್ವದ ಹಲವು ಸಿಖ್ ಘಟಕಗಳನ್ನು ಭೇಟಿಯಾದಾಗ ಸಮುದಾಯದ ಮನೋಭಾವವನ್ನು ನೇರವಾಗಿ ಕಂಡಿದ್ದೇನೆ. ತಮ್ಮ ನೆರೆ ಹೊರೆಯನ್ನು ಶ್ರೀಮಂತಗೊಳಿಸುವ ಗುಣ ಹೊಂದಿದ್ದಾರೆ. ಅಮೆರಿಕ ಬೆಳವಣಿಗೆಯಲ್ಲಿ ಸಿಖ್ ಕೊಡುಗೆ ಅಪಾರವಾಗಿದೆ ಎಂದು ಪ್ಯಾಟ್ ಟೂಮಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ