ಸಂಜೆ 4ರ ಬಳಿಕ ಅಮೆರಿಕ ಅಧ್ಯಕ್ಷ ಬೈಡೆನ್‌ಗೆ ಕೆಲಸ ಮಾಡಲಾಗದ ಸ್ಥಿತಿ: ಮಿಚೆಲ್‌ ಒಬಾಮಗೆ ಸಿಗುತ್ತಾ ಚಾನ್ಸ್‌?

By Kannadaprabha News  |  First Published Jul 1, 2024, 9:10 AM IST

ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಸಂಜೆ 4 ಗಂಟೆಯ ಬಳಿಕ ಕೆಲಸ ಮಾಡಲು ಆಗುವುದಿಲ್ಲ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.


ವಾಷಿಂಗ್ಟನ್‌: ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಸಂಜೆ 4 ಗಂಟೆಯ ಬಳಿಕ ಕೆಲಸ ಮಾಡಲು ಆಗುವುದಿಲ್ಲ ಎಂಬ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಾತ್ರ 81 ವರ್ಷದ ಬೈಡೆನ್‌ ಕೆಲಸ ಮಾಡಬಲ್ಲರು. ಸತತ ಆರು ತಾಸಿನ ಕೆಲಸದ ಬಳಿಕ ಅವರು ಮಾತನಾಡುವಾಗ ಎಡವಟ್ಟು ಮಾಡಿಕೊಳ್ಳುತ್ತಾರೆ. ಅವರಿಗೆ ತುಂಬಾ ಸುಸ್ತಾಗುತ್ತದೆ. ವಿದೇಶಗಳಿಗೆ ಹೋದಾಗ ಈ ಸಮಸ್ಯೆ ಹೆಚ್ಚಾಗುತ್ತದೆ ಎಂದು ವರದಿಯೊಂದು ಹೇಳಿದೆ.

ಇತ್ತೀಚೆಗೆ ಜೋ ಬೈಡೆನ್‌ ಮಾತನಾಡುವಾಗ ಒಂದಕ್ಕೊಂದು ಸಂಬಂಧವಿಲ್ಲದ ಹೇಳಿಕೆ ನೀಡಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಜೊತೆಗಿನ ಅಧ್ಯಕ್ಷೀಯ ಚರ್ಚೆಯಲ್ಲೂ ಲಯ ತಪ್ಪಿದ್ದರು. ಅವರಿಗೆ ಅರಳು ಮರುಳು ಉಂಟಾಗಿದ್ದು, ಮತ್ತೊಂದು ಅವಧಿಗೆ ಆಯ್ಕೆಯಾದರೆ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಅದರ ನಡುವೆಯೇ ಈ ವರದಿ ಹೊರಬಿದ್ದಿದೆ.

Tap to resize

Latest Videos

undefined

ಭಾರತ ಪರಕೀಯ ದ್ವೇಷಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಚ್ಚರಿಯ ಹೇಳಿಕೆ

ವಯಸ್ಸಿನ ತೊಂದರೆ ಇರುವುದರಿಂದಲೇ ಶ್ವೇತಭವನದ ಅಧಿಕಾರಿಗಳು ಜೋ ಬೈಡೆನ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಕಾರ್ಯಕ್ರಮಗಳನ್ನು ಬೆಳಿಗ್ಗೆ 10ರಿಂದ ಸಂಜೆ 4ರ ನಡುವೆಯೇ ನಿಗದಿಪಡಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಇನ್ನು ಒಂದು ವೇಳೆ ಡೆಮಾಕ್ರಟಿಕ್ ಪಕ್ಷದಿಂದ ಜೋ ಬೈಡೆನ್‌ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದೇ ಹೋದರೆ ಮುಂದಿನ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಿಚೆಲ್ ಒಬಾಮಾಗೆ ಅವಕಾಶ ನೀಡಲಾಗುತ್ತದೆ ಎಂಬ ವಿಚಾರವೂ ಅಮೆರಿಕಾದಲ್ಲಿ ಭಾರಿ ಸುದ್ದಿಯಲ್ಲಿದೆ. ಮಿಚೆಲ್ ಒಬಾಮ ಟ್ರಂಪ್‌ಗೂ ಮೊದಲು ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರ ಪತ್ನಿಯಾಗಿದ್ದು, ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಭಾರತದ ಹಾದಿ ತುಳಿದ ಅಮೆರಿಕಾ: ಚೀನಾ ಆಪ್ ಟಿಕ್‌ಟಾಕ್ ನಿಷೇಧಕ್ಕೆ ಅಮೆರಿಕಾ ಸಂಸತ್ ಅಸ್ತು

click me!