
ಇಸ್ಲಾಮಾಬಾದ್: ಇರಾನ್ ಜತೆಗಿನ ಸಂಧಾನ ಮಾತುಕತೆಗಾಗಿ ಇಸ್ಲಾಮಾಬಾದ್ ಆಗಮಿಸಿದ ಅಮೆರಿಕ ಉಪಾಧ್ಯಕ್ಷ ಜಿ.ಡಿ.ವ್ಯಾನ್ಸ್ ಅವರಿದ್ಧ ವಿಮಾನಕ್ಕೆ ಪಾಕಿಸ್ತಾನದ ಎಫ್-16ಎಸ್ ವಿಮಾನಗಳು ಬೆಂಗಾವಲು ಒದಗಿಸಿದ್ದು ವಿಶೇಷವಾಗಿತ್ತು. ಜೆ.ಡಿ.ವ್ಯಾನ್ಸ್ ಅವರಿದ್ದ ಬೋಯಿಂಗ್ ಸಿ-32ಎ ವಿಮಾನ ಪಾಕಿಸ್ತಾನದ ವಾಯುಸೀಮೆ ಪ್ರವೇಶಿಸುತ್ತಿದ್ದಂತೆ ಪಾಕ್ ವಾಯುಸೇನೆಗೆ ಸೇರಿದ ಐದು ಪಿಎಎಫ್-16ಎಸ್ ವಿಮಾನಗಳು ಬೆಂಗಾವಲು ನೀಡಿ ನೂರ್ ಖಾನ್ ಏರ್ ಬೇಸ್‌ಗೆ ಕರೆತಂದವು.
ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕಡಿವಾಣ ಹಾಕುವ ಸಂಬಂಧ ಇತ್ತೀಚೆಗಷ್ಟೇ ಘೋಷಿಸಿರುವ ಎರಡುವಾರಗಳ ಕದನ ವಿರಾಮದ ಭಾಗವಾಗಿ ಅಮರಿಕ ಮತ್ತು ಇರಾನ್ ನಿಯೋಗ ಇಸ್ಲಾಮಾಬಾದ್‌ನಲ್ಲಿ ಮಾತುಕತೆ ನಡೆಸುತ್ತಿವೆ. ವ್ಯಾನ್ಸ್ ನೇತೃತ್ವದಲ್ಲಿ ವಿಶೇಷ ರಾಯಭಾರಿ ಸ್ಟೀವ್ ವಿಟ್ಯಾನ್, ಟ್ರಂಪ್ ಅಳಿಯ ಜೀರೆಡ್ ಕುಶ್ವರ್ ಅವರು ಇರಾನ್ ಜತೆಗಿನ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ಅದೇ ರೀತಿ ಇರಾನ್ ಕಡೆಯಿಂದ ಸ್ಪೀಕರ್ ಗಲಿಬಾಥ್ ಮತ್ತು ವಿದೇಶಾಂಗ ಸಚಿವ ಸಯೀದ್ ಅಬ್ಬಾಸ್ ಆರಾಗ್ನಿ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.
ಟೆಹ್ರಾನ್ ' ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ಅಮೆರಿಕ ಮೊದಲು' ಸಿದ್ಧಾಂತಕ್ಕೆ ಅನುಗುಣವಾಗಿ ಅಮೆರಿಕದ ಅಧಿಕಾರಿಗಳು ತಮ್ಮ ದೇಶದ ಹಿತಾಸಕ್ತಿಗೆ ಕೆಲಸ ಮಾಡಬೇಕು. ಆಗ ಮಾತ್ರ ಅಮೆರಿಕ-ಇರಾನ್ ಶಾಂತಿ ಮಾತುಕತೆ ಸಾಧ್ಯ' ಎಂದು ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಆರಫ್ ಹೇಳಿದ್ದಾರೆ. ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಅಮೆರಿಕ ಮೊದಲು' ನೀತಿಯ ಬದಲು ಇಸ್ರೇಲ್ ಮೊದಲು ನೀತಿ ಅನುಸರಿಸಿದರೆ ಒಪ್ಪಂದ ಇರುವುದಿಲ್ಲ. ಒಂದು ವೇಳೆ ಸಂಧಾನ ಮಾತುಕತೆ ವಿಫಲವಾಗಿ ಆಮೆರಿಕ-ಇಸ್ರೇಲ್ ವಿರುದ್ಧ ಇರಾನ್ ಯುದ್ಧವನ್ನು ಪುನರಾರಂಭಿಸಿದರೆ ಜಗತ್ತು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ ಎಂದಿದ್ದಾರೆ.
ಇಸ್ಲಾಮಾಬಾದ್: 'ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಅಮೆರಿಕ- ಇರಾನ್ ನಡುವಿನ ಮಾತುಕತೆ ಮಧ್ಯಪ್ರಾಚ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪನೆಗೆ ಕಾರಣ ಆಗಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಸ್ಲಾಮಾಬಾದ್‌ಗೆ ಸಂಧಾನ ಮಾತುಕತೆಗೆ ತೆರಳಿರುವ ಅಮೆರಿಕ ಉಪಾಧ್ಯಕ್ಷ ಜೆಡಿವ್ಯಾನ್ಸ್
ನೇತೃತ್ವದ ನಿಯೋಗದ ಜತೆಗೆ ಸಭೆ ನಡೆಸಿದ ಶೆಹಬಾಜ್ ಷರೀಫ್, 'ಮಧ್ಯಪ್ರಾಚ್ಯ ಸಂಘರ್ಷವನ್ನು ಕೊನೆಗಾಣಿಸಲು ಎರಡೂ ಕಡೆಯವರಿಗೆ ಸಹಾಯವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು ಎಂದು ಪಾಕ್ ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ. ಮಾತುಕತೆಗೆ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಕೂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಸೌದಿಗೆ ಪಾಕ್‌ನಿಂದ 13,000 ಸೈನಿಕರು, 18 ಜೆಟ್ ರವಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ