ಹೊಸ ಕಾರಣ ಮುಂದಿಟ್ಟುಕೊಂಡು ಭಾರತದ ಮೇಲಿನ ತೆರಿಗೆ ದರ ಏರಿಕೆಗೆ ಟ್ರಂಪ್‌ ಒಲವು: ವರದಿ

Published : Nov 25, 2026, 06:55 AM IST
Donald Trump Narendra Modi

ಸಾರಾಂಶ

ತಮ್ಮ ದೇಶೀಯ ಉದ್ಯಮಗಳಿಗೆ ಸಬ್ಸಿಡಿ ನೀಡುತ್ತಿರುವ ಭಾರತ ಸೇರಿದಂತೆ 16 ದೇಶಗಳ ಮೇಲೆ ಸುಂಕ ಹೆಚ್ಚಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಇದರಿಂದ ಅಮೆರಿಕದ ಮಾರುಕಟ್ಟೆಗೆ ಅನ್ಯಾಯವಾಗುತ್ತಿದೆ ಎಂಬುದು ಅವರ ವಾದವಾಗಿದೆ. ಇದು ಜಾಗತಿಕ ವ್ಯಾಪಾರ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸುವ ಸಾಧ್ಯತೆಯಿದೆ.

ವಾಷಿಂಗ್ಟನ್‌: ರಷ್ಯಾ ತೈಲ ಖರೀದಿ ಸೇರಿದಂತೆ ವಿವಿಧ ವಿಷಯ ಮುಂದಿಟ್ಟುಕೊಂಡು ಭಾರತ ಸೇರಿದಂತೆ ಜಗತ್ತಿನ ಹಲವು ಪ್ರಮುಖ ದೇಶಗಳ ಮೇಲೆ ತೆರಿಗೆ ಜಾರಿಗೆ ಮುಂದಾಗಿ ಬಳಿಕ ಸುಮ್ಮನಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಹೊಸ ಕಾರಣ ಮುಂದಿಟ್ಟುಕೊಂಡು ಭಾರತ ಸೇರಿ 16 ದೇಶಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಭಾರತ ಸೇರಿದಂತೆ 16 ದೇಶಗಳು ತಮ್ಮ ಉದ್ಯಮಗಳಿಗೆ ಸಬ್ಸಿಡಿ ನೀಡುವ ಮೂಲಕ ಅವುಗಳಿಗೆ ನೆರವಾಗುತ್ತಿವೆ. ಇದು ಆ ದೇಶಗಳ ಹೆಚ್ಚುವರಿ ಕೈಗಾರಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಕಡಿಮೆ ಬೆಲೆಯ ಉತ್ಪನ್ನಗಳ ಮೂಲಕ ಅಮೆರಿಕ ಮಾರುಕಟ್ಟೆ ಮೇಲೆ ಒತ್ತಡ ಸೃಷ್ಟಿಗೆ ಕಾರಣವಾಗಿದೆ. ಹೀಗಾಗಿ ಈ ದೇಶಗಳ ಮೇಲಿನ ತೆರಿಗೆ ಹೆಚ್ಚಳಕ್ಕೆ ಟ್ರಂಪ್‌ ಸರ್ಕಾರ ಮುಂದಾಗಿದೆ ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ವರದಿ ಮಾಡಿದೆ.

ವಿದೇಶಿ ಸರ್ಕಾರಗಳು ನೀಡುವ ಕೈಗಾರಿಕಾ ಸಬ್ಸಿಡಿಗಳು, ಸಾಲ ಸೌಲಭ್ಯಗಳು ಮತ್ತು ಮಾರುಕಟ್ಟೆ ನಿರ್ಬಂಧಗಳಿಂದಾಗಿ ಅಮೆರಿಕದ ಉತ್ಪಾದಕರಿಗೆ ಅನಾನುಕೂಲವಾಗುತ್ತಿದೆ. ಅಮೆರಿಕದ ಕಂಪನಿಗಳಿಗಿಂತ ಸರಕುಗಳ ಅಗ್ಗ ಉತ್ಪಾದನೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಪಡೆದುಕೊಳ್ಳುತ್ತಿರುವುದರಿಂದ ಅಮೆರಿಕಕ್ಕೆ ಅನ್ಯಾಯ ಎನ್ನುವುದು ಟ್ರಂಪ್‌ ಸರ್ಕಾರದ ವಾದ, ಇದಕ್ಕೆ ಸಂಬಂಧಿಸಿದಂತೆ ಅಮೆರಿಕ ತನಿಖೆಯನ್ನೂ ನಡೆಸಿತ್ತು ಫಲಿತಾಂಶ ಆಧಾರದಲ್ಲಿ ಸುಂಕ ಹೆಚ್ಚಳಕ್ಕೆ ಮುಂದಾಗಿದೆಎಂದು ಪತ್ರಿಕೆ ವರದಿ ಮಾಡಿದೆ.

ಇದರ ಪರಿಣಾಮವನ್ನು ಭಾರತ, ಚೀನಾ , ಜಪಾನ್, ದಕ್ಷಿಣ ಕೊರಿಯಾ, ಯುರೋಪಿಯನ್ ಒಕ್ಕೂಟಗಳು ಎದುರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ. ಈ ಬೆಳವಣಿಗೆ ಜಾಗತಿಕ ವ್ಯಾಪಾರ ವಲಯದಲ್ಲಿ ಮತ್ತೊಂದು ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಯಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಚ್ಛೇದಿತ ಜಪಾನ್​ ದಂಪತಿ, ಸನಾತನ ಧರ್ಮಕ್ಕೆ ಮನಸೋತು ಭಾರತದಲ್ಲಿ ಸಪ್ತಪದಿ ತುಳಿದು ಮರುಮದುವೆ
ಅಮೆರಿಕದ ಕಠಿಣ ನೀತಿಗೆ 1389 ಭಾರತೀಯ ಮಕ್ಕಳು ವಶಕ್ಕೆ, ನಾಲ್ಕು ವರ್ಷಗಳಲ್ಲಿ ಏನಾಯಿತು?