
ಅರಿಜೋನಾ(ಏ.16): ಒಂದು ಸಣ್ಣ ದೂರು ಅತೀ ದೊಡ್ಡ ಹಾಗೂ ಭಯಾನಕ ಅಪರಾಧ ಜಗತ್ತನ್ನೇ ತೆರಿದಿಟ್ಟಿದೆ. ಒಂದು ಹಾವನ್ನು ಹುಡುಕುತ್ತಾ ಹೋದ ಪೊಲೀಸರಿಗೆ ಸಿಕ್ಕಿದ್ದು ಬರೋಬ್ಬರಿ ಫ್ರೀಜರ್‌ನಲ್ಲಿಟ್ಟಿದ್ದ 183 ಸತ್ತ ನಾಯಿ, ಹಲ್ಲಿ, ಆಮೆ, ಹಾವು, ಮೊಲ ಸೇರಿದಂತೆ ಹಲವು ಪ್ರಾಣಿಗಳು. ಇದರಲ್ಲಿ ಕೆಲ ಹಲ್ಲಿ, ಹಾವುಗಳು ಇನ್ನೂ ಜೀವಂತವಾಗಿತ್ತು. ಈ ಪ್ರಾಣಿ ಹಿಂಸೆ ನಡೆದಿರುವುದು ಅಮೆರಿಕದ ಅರಿಜೋನಾದಲ್ಲಿ.
ಈ ಕ್ರೂರಿಯ ಹೆಸರು ಮೈಕಲ್ ಪ್ಯಾಟ್ರಿಕ್ ಟರ್ಲೆಂಡ್. ಏಪ್ರಿಲ್ 3 ರಂದು ಮಹಿಳೆಯೊಬ್ಬರು ಅರಿಜೋನಾ ಪೊಲೀಸರಿಗೆ ದೂರೊಂದನ್ನು ನೀಡಿದ್ದರು. ತಾನು ಮೈಕೆಲ್ ಪ್ಯಾಟ್ರಿಕ್ ಅನ್ನುವ ವ್ಯಕ್ತಿಗೆ ಹಾವೊಂದನ್ನು ನೀಡಿದ್ದೇನೆ. ಸಂತಾನೋತ್ಪತ್ತಿಗಾಗಿ ತನ್ನಿಂದ ಹಾವನ್ನು ಪಡೆದಿದ್ದಾರೆ. ಆದರೆ ಹಾವನ್ನು ಹಿಂತಿರುಗಿಸಿಲ್ಲ. ಪೊಲೀಸರು ಮಧ್ಯಪ್ರವೇಶಿಸಿ ತನಗೆ ಹಾವು ಮರಳಿ ನೀಡಬೇಕು ಎಂದು ದೂರು ನೀಡಿದ್ದಾರೆ.
ಗರ್ಭಿಣಿ ಮೇಕೆ ಮೇಲೆ ಗ್ಯಾಂಗ್ ರೇಪ್.. ಕೊಂದೇ ಬಿಟ್ಟರು
ದೂರು ಪರಿಶೀಲಿಸಿದ ಅರಿಜೋನಾ ಪೊಲೀಸರು, ಇದೊಂದು ಸಣ್ಣ ಪ್ರಕರಣ, ಹಾವು ಸತ್ತಿರಬಹುದು, ಅಥಾವ ಆತನ ಕೈಯಿಂದ ಹಾವು ತಪ್ಪಿಸಿಕೊಂಡು ಕಾಡು ಸೇರಿರಬಹುದು ಎಂದುಕೊಂಡ ಪೊಲೀಸರು ನೇರವಾಗಿ ಮೈಕೆಲ್ ಪ್ಯಾಟ್ರಿಕ್ ಮನೆಗೆ ತೆರಳಿದ್ದಾರೆ.ಪೊಲೀಸರು ಆಗಮನ ನೋಡಿ ಪ್ಯಾಟ್ರಿಕ್ ಗಾಬರಿಯಾಗಿಲ್ಲ. ಇತ್ತ ಪೊಲೀಸರು ಮಹಿಳೆಯಿಂದ ಪಡೆದುಕೊಂಡ ಹಾವು ಮರಳಿಸಬೇಕು, ಹಾವು ಎಲ್ಲಿದೆ ಎಂದು ಕೇಳಿದ್ದಾರೆ. ಇಷ್ಟು ದಿನ ವಿಳಂಬ ಮಾಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಆತನ ಉತ್ತರದಲ್ಲಿ ಪೊಲೀಸರಿಗೆ ಸಣ್ಣದೊಂದು ಸುಳಿವು ಸಿಕ್ಕಿತ್ತು.
ಸಂತಾನೋತ್ಪತ್ತಿಗಾಗಿ ತಂದ ಹಾವು ಕಾಣೆಯಾಗಿದ್ದರೆ, ನೀನು ಸಾಕಿದ ಹಾವುಗಳು ಎಲ್ಲಿ? ಹೇಗೆ ಸಾಕಲಾಗಿದೆ ಎಂದು ಪ್ರಶ್ನಿಸಿದ ಪೊಲೀಸರಿಗೆ ಇಲ್ಲಿ ಏನೋ ಒಂದು ಎಡವಟ್ಟಾಗಿದೆ ಅನ್ನೋದು ಖಚಿತವಾಗಿದೆ. ಹೀಗಾಗಿ ಮೈಕೆಲ್ ಪ್ಯಾಟ್ರಿಕ್ ಮನೆ ಶೋಧಿಸಲು ಮುಂದಾಗಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮೆಕೆಲ್‌ನನ್ನು ಪೊಲೀಸರು ವಶಕಕ್ಕೆ ಪಡೆದು ಮನೆ ಶೋಧಿಸಿದ್ದಾರೆ.
ಪಾಪದ ಪ್ರಾಣಿಗಳ ಮೇಲೆ ಮೃಗೀಯ ವರ್ತನೆ; ವಿಕೃತಿಯ ವಿರಾಟ ರೂಪ
ಸಂಪೂರ್ಣ ಮನೆಯನ್ನು ಹುಡುಕಾಡಿದ ಪೊಲೀಸರಿಗೆ ಅತೀ ದೊಡ್ಡ ಫ್ರೀಜರ್ ಬಾಕ್ಸ್ ತೆರೆದಾಗ ಅಚ್ಚರಿ ಕಾದಿತ್ತು. ಈ ಫ್ರೀಜರ್‌ನಲ್ಲಿ 183 ನಾಯಿ, ಹಲ್ಲಿ, ಹಾವು, ಆಮೆ, ಮೊಲ ಸೇರಿದಂತೆ ಹಲವು ಪ್ರಾಣಿಗಳು ಪತ್ತೆಯಾಗಿದೆ. ಹೀಗೆ ಕೋಲ್ಡ್ ಫ್ರೀಜರ್‌ನಲ್ಲಿಟ್ಟಿದ್ದ ಕೆಲ ಪ್ರಾಣಿಗಳು ಜೀವಂತವಾಗಿತ್ತು. ಪೊಲೀಸರು ಎಲ್ಲಾ ಪ್ರಾಣಿಗಳನ್ನು ಹೊರತೆಗೆದಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮೈಕಲ್ ಪ್ಯಾಟ್ರಿಕ್‌ನನ್ನು ಬಂಧಿಸಿದ್ದಾರೆ. ಪ್ರಾಣಿಗಳ ಹಿಂಸೆಗೆ 94 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದೀಗ ಈತನ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡಿದೆ. ಇತ್ತ ಮನೆ ಮಾಲೀಕ ಕೂಡ ಪ್ಯಾಟ್ರಿಕ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೆಲ ಬಾರಿ ಫ್ರೀಜರ್‌ನಲ್ಲಿಟ್ಟ ಕೆಲ ಪ್ರಾಣಿಗಳನ್ನು ಮನೆಯ ಸುತ್ತವಿಟ್ಟಿರುವುದನ್ನು ನೋಡಿದ್ದೇನೆ. ಆದರೆ ಈ ಕುರಿತು ಪ್ರಶ್ನಿಸಲು ತೆರಳಿದಾಗ ಆತ ಬೇರೆ ಕಾರಣಗಳನ್ನು ನೀಡಿದ್ದ. ಇದೀಗ ಸತ್ಯ ಹೊರಬಂದಿದೆ. ಕಠಿಣ ಶಿಕ್ಷೆ ನೀಡಬೇಕು ಎಂದು ಮನೆ ಮಾಲೀಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಪ್ರಾಣಿ ಹಿಂಸೆಗೆ ಕಠಿಣ ಕಾನೂನು
ಪ್ರಾಣಿಗಳನ್ನು ಹಿಂಸಿಸಿದರೆ 50 ರು. ದಂಡ ತೆತ್ತು ಪಾರಾಗುವ ಕಾಲ ದೂರವಾಗುವುದು ಸನ್ನಿಹಿತವಾಗಿದೆ. 60 ವರ್ಷ ಹಿಂದಿನ ಪ್ರಾಣಿ ಹಿಂಸೆ ತಡೆ ಕಾಯ್ದೆಗೆ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದ್ದು, ಇದರ ಪ್ರಕಾರ ಪ್ರಾಣಿಗಳನ್ನು ಹಿಂಸಿಸಿ ಸಾವಿಗೆ ಕಾರಣರಾದವರಿಗೆ 5 ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ. ಜತೆಗೆ, 75 ಸಾವಿರ ರು.ವರೆಗೆ ದಂಡ ಅಥವಾ ಪ್ರಾಣಿಯ ಬೆಲೆಯ 3 ಪಟ್ಟು ದಂಡ ಬೀಳಲಿದೆ. ಸರ್ಕಾರವು ಹೊಸ ತಿದ್ದುಪಡಿ ಕಾಯ್ದೆಯ ಕರಡು ಸಿದ್ಧಪಡಿಸಿದೆ. ಶೀಘ್ರದಲ್ಲೇ ಇದನ್ನು ಬಿಡುಗಡೆ ಮಾಡಿ ಸಾರ್ವಜನಿಕರ ಅನಿಸಿಕೆಗೆ ಆಹ್ವಾನಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ