Animal Cruelty: ಗರ್ಭಿಣಿ ಮೇಕೆ ಮೇಲೆ ಗ್ಯಾಂಗ್ ರೇಪ್.. ಕೊಂದೇ ಬಿಟ್ಟರು

* ಗರ್ಭಿಣಿ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ
* ಮೂವರು ವಿಕೃತ ಕಾಮಿಗಳಿಂದ ಕೃತ್ಯ
* ಆರೋಪಿಯನ್ನು ಸೆರೆಹಿಡಿದ ಸ್ಥಳೀಯರು
* ಪ್ರಾಣಿ ಮೇಲೆ ದೌರ್ಜನ್ಯ ಎಸಗಿದ ಕಿರಾತಕರು

 

pregnant goat was raped and killed by 3 persons at Kottachery Kerala mah

ಕೇರಳ/ ಕಾಸರಗೋಡು(ಮೇ. 31)  ವಿಕೃತಕಾಮಿಗಳು ಮೇಕೆ  ( pregnant goat) ಮೇಲೆ ದೌರ್ಜನ್ಯ (Rape) ಎಸಗಿದ್ದಾರೆ. ಮೂವರು ವಿಕೃತಕಾಮಿಗಳು ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿರುವ ಘಟನೆ ಕೇರಳದ (Kerala) ಕಾಞಂಗಾಡು ಪೇಟೆಯಲ್ಲಿ ನಡೆದಿದೆ.

ಕೊಟ್ಟಚೇರಿಯ ಎಲೈಟ್ ಹೋಟೆಲ್ ಗೆ ಸೇರಿದ ಈ ಮೇಕೆ ನಾಲ್ಕು ತಿಂಗಳ ಗರ್ಭಿಣಿಯಾಗಿತ್ತು. ಈ‌ಸಂಬಂಧ ಹೊಟೇಲ್‌ ಉದ್ಯೋಗಿ ಸೆಂಥಿಲ್‌ ಎಂಬಾತನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಇತರ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಿದ್ದಾರೆ.

ಬೆಳಗಿನ ಜಾವ 1.30ರ ಸುಮಾರಿಗೆ ಹೊಟೇಲ್‌ನ ನೌಕರರಿಗೆ ಹಿತ್ತಲಿನಲ್ಲಿ ಎರಡು ಮೇಕೆಗಳ ಗಲಾಟೆ ಸದ್ದು ಕೇಳಿಸಿದೆ. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ, ಮೂವರು ಪುರುಷರು ಗೋಡೆ ಹಾರಿ ಪರಾರಿಯಾಗುವುದನ್ನು ಸ್ಥಳೀಯರು ಕಂಡಿದ್ದಾರೆ.  ಜನರು ಅಟ್ಟಿಸಿಕೊಂಡು ಹೋಗಿ ಸೆಂಥಿಲ್‌  ಎಂಬಾತನನ್ನು ಸೆರೆ  ಹಿಡಿದಿದ್ದಾರೆ.

ಈ ವೇಳೆ ನಾನಿ ಎಂಬ ಗರ್ಭಿಣಿ ಮೇಕೆ ಸತ್ತಿರುವುದು ಅವರ ಗಮನಕ್ಕೆ ಬಂದಿದೆ. ಅಲ್ಲದೆ ಮೇಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸೆಂಥಿಲ್ ನನ್ನು ಅರೆಸ್ಟ್ ಮಾಡಿದ್ದಾರೆ. ಸೆಂಥಿಲ್ ಹೋಟೆಲ್ ಉದ್ಯೋಗಿಯಾಗಿದ್ದ.

ಬೀದಿ ನಾಯಿಯನ್ನು ಬಿಡದ ಕಾಮುಕ

ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಟು ಜನರಿಂದ ಕೃತ್ಯ:  ಹರಿಯಾಣದಲ್ಲಿ ವಿಕೃತ ಕಾಮಿಗಳು ಮೂಕ ಪ್ರಾಣಿಯ ಮೇಲೆ ಪ್ರತಾಪ ತೋರಿಸಿದ್ದ ಪ್ರಕರಣ ವರದಿಯಾಗಿತ್ತು. 7 ವರ್ಷದ ಗರ್ಭಿಣಿ ಮೇಕೆಮೇಲೆ 8 ಜನ ವಿಕೃತ ಕಾಮಿಗಳು ಅತ್ಯಾಚಾರ ಎಸಗಿದ್ದರು. ಅಟ್ಟಹಾಸಕ್ಕೆ ಸಿಲುಕಿ ಮೇಕೆ ಸಾವನ್ನಪ್ಪಿತ್ತು.

ಹಸುವನ್ನು ಬಿಡದ  ಕಾಮುಕ:   ಹಸುವಿನೊಂದಿಗೆ ಲೈಂಗಿಕ ಕ್ರಿಯೆ  ನಡೆಸಲು ಈ ವಿಕೃತಕಾಮಿ ಮುಂದಾಗಿದ್ದ.  ಹಸುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ‌‌ದ ಕಾಮುಕ  ಮಾಲೀಕನ ಕಣ್ಣಿಗೆ ಬಿದ್ದಿದ್ದು  ವಿದ್ಯಾರಣ್ಯಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಮುಗ್ಧ ಪ್ರಾಣಿಯ ಎರಗಿದ್ದ ದಾವಣಗೆರೆ ಮೂಲದ ತಿಂಡ್ಲು ನಿವಾಸಿ 22  ವೆಂಕಟೇಶ್ ಕುಮಾರ್ ನನ್ನು ಬಂಧಿಸಲಾಗಿತ್ತು. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರ ನಿವಾಸಿ ಮುನಿ ಹನುಮಂತಪ್ಪ ಎಂಬುವರು ಐದು ಹಸು ಹಾಗೂ ಆರು‌ ಕರುಗಳನ್ನು ಸಾಕಿಕೊಂಡು ಹೈನುಗಾರಿಕೆ ನಡೆಸಿಕೊಂಡು ಬಂದಿದ್ದು ಅವರ ಕೊಟ್ಟಿಗೆಗೆ ಆಸಾಮಿ ನುಗ್ಗಿದ್ದ.
 ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗುತ್ತಿದ್ದ  ಕಿರಾತಕನನ್ನು ಹೊಂಚು ಹಾಕಿ ಸೆರೆ  ಹಿಡಿಯಲಾಗಿತ್ತು. ಮಾಲೀಕ ಬಂದು ನೋಡಿದಾಗ ಅಪರಿಚಿತ ವ್ಯಕ್ತಿಯು ಅದೇ ಏರಿಯಾದ 22 ವರ್ಷದ ವೆಂಕಟೇಶ್ ಎಂದು ಗೊತ್ತಾಗಿದೆ. ನಂತರ ದೂರು ದಾಖಲಿಸಲಾಗಿದೆ.  ಪೊಲೀಸರಿಗೆ ನೀಡಿದ ದೂರಿನ‌‌ ಮೇರೆಗೆ ಆರೋಪಿ ವಿರುದ್ಧ ಐಪಿಸಿ 377 ಹಾಗೂ ಅನಿಮಲ್‌ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿ ಬಂಧಿಸಿ ಜೈಲಿಗಟ್ಟಿದ್ದರು.

 

 

 

 

 

Latest Videos
Follow Us:
Download App:
  • android
  • ios