
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 5 ದಿನಗಳ ಕದನ ವಿರಾಮ ಘೋಷಿಸಿರುವುದರ ನಡುವೆಯೂ ಇರಾನ್ ಮೇಲೆ ಇಸ್ರೇಲ್ ಅಮೆರಿಕಾ ಯುದ್ಧ 26ನೇ ದಿನಕ್ಕೆ ಕಾಲಿರಿಸಿದೆ. ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಫೋನ್ ಮೂಲಕ ಮಾತನಾಡಿದ್ದಾರೆ. ಈ ಮಾತುಕತೆಯ ವೇಳೆ ಮಧ್ಯಪ್ರಾಚ್ಯ ಕದನದ ಬಗ್ಗೆಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ ಪಶ್ಚಿಮ ಏಷ್ಯಾದಲ್ಲಿ ಆದಷ್ಟು ಬೇಗ ಉದ್ವಿಗ್ನತೆ ಕಮ್ಮಿ ಮಾಡಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಬೆಂಬಲ ನೀಡುತ್ತದೆ ಎಂದಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಮೋದಿ, 'ಟ್ರಂಪ್ ರಿಂದ ಕರೆ ಸ್ವೀಕರಿಸಿದೆ. ಈ ವೇಳೆ ಪಶ್ಚಿಮ ಏಷ್ಯಾದ ಪರಿಸ್ಥಿತಿಯ ಬಗ್ಗೆ ಉಪಯುಕ್ತ ಅಭಿಪ್ರಾಯ ವಿನಿಮಯವಾಯಿತು. ಭಾರತವು ಸಾಧ್ಯವಾದಷ್ಟು ಬೇಗ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಶಾಂತಿಯನ್ನು ಪುನಃ ಸ್ಥಾಪಿಸಲು ಬೆಂಬಲಿಸುತ್ತದೆ. ಹೋರ್ಮುಜ್ ಜಲಸಂಧಿ ಇಡೀ ಜಗತ್ತಿಗೇ ಮುಕ್ತ, ಸುರಕ್ಷಿತ ಮತ್ತು ಪ್ರವೇಶಿಸಬಹುದಾದ ಸ್ಥಳ ಎಂದು ಖಚಿತಪಡಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಶಾಂತಿ ಮತ್ತು ಸ್ಥಿರತೆ ಸ್ಥಾಪನೆ ಯತ್ನಗಳ ಬಗ್ಗೆ ಸಂಪರ್ಕದಲ್ಲಿರಲು ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ.
ಇರಾನ್ ವಿರುದ್ಧ ಮತ್ತೆರೆದು ದೇಶಗಳು ಸಮರಕ್ಕೆ?
ದುಬೈ: ಇರಾನ್ ವಿರುದ್ಧ ಮತ್ತೆರಡು ದೇಶಗಳು ಯುದ್ಧಕ್ಕೆ ಪ್ರವೇಶಿಸುವ ಸಾಧ್ಯ ತೆಯಿದೆ. ಇರಾನ್ ದಾಳಿಯಿಂದ ಸೌದಿ, ಯುಎಇ ತಾಳ್ಮೆ ಕಳೆದುಕೊಳ್ಳುತ್ತಿವೆ. ಸ್ಥಿತಿ ಹದಗೆಟ್ಟರೆ ಅವೂ ದಾಳಿ ಮಾಡಬಹುದು ಎಂದು ವರದಿಯಾಗಿದೆ.
ಹೆಗೆತ್ ಹೇಳಿದ ಕಾರಣ ಇರಾನ್ ಮೇಲೆ ಸಮರ: ಟ್ರಂಪ್ ಸ್ಪಷ್ಟನೆ
ವಾಷಿಂಗ್ಟನ್: ಇಸ್ರೇಲ್ ಒತ್ತಡಕ್ಕೆ ಮಣಿದು ಇರಾನ್ ಮೇಲೆ ಆಮೆರಿಕ ಯುದ್ಧ ಸಾರಿದೆ ಎಂಬ ವಾದಗಳ ನಡುವೆ, 'ಮಧ್ಯಪ್ರಾಚ್ಯದ ಸಮಸ್ಯೆಯ ಬಗ್ಗೆ ಚರ್ಚಿಸುವಾಗ ಇರಾನ್ ಮೇಲೆ ಆಕ್ರಮಣ ಮಾಡುವ ಸಲಹೆಯನ್ನು ಮೊದಲು ನೀಡಿದ್ದೇ ನಮ್ಮ ಯುದ್ಧ ಸಚಿವ (ರಕ್ಷಣಾ ಸಚಿವ) ಪೀಟ್ ಹೆಗ್ಡೆತ್' ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟೆನೆಸಿ ನಗರದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, 'ಇರಾನ್ ಎಂಬೊಂದು ದೇಶ 47 ವರ್ಷಗಳಿಂದ ಉಗ್ರವಾದವನ್ನು ಪೋಷಿಸುತ್ತಿದ್ದು, ಇದೀಗ ಅಣ್ವಸ್ತ ಹೊಂದುವ ಹೊಸ್ತಿಲಿನಲ್ಲಿದೆ. ಒಂದೋ ನಾವು ನಮ್ಮ ಆರ್ಥಿಕತೆಯನ್ನು ಬಲಗೊಳಿಸುವತ್ತ ಕೆಲಸ ಮಾಡಬೇಕು ಇಲ್ಲವೇ ಮಧ್ಯ ಪ್ರಾಚ್ಯಕ್ಕೆ ಸೇನೆ ನುಗ್ಗಿಸಿ ಅಲ್ಲಿರುವ ಬಹು ದೊಡ್ಡ ಸಮಸ್ಯೆ ಯನ್ನು ಸಮಾಪ್ತಿ ಮಾಡಬೇಕು ಎಂದು ಸೇರಿದಂತೆ ಹಲವರು ಇದ್ದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆಗ ಮೊದಲು ಪ್ರತಿಕ್ರಿಯಿಸಿದ ಪೀಟ್ ಇರಾನ್ ಅಣುಶಕ್ತಿ ಹೊಂದಲು ಬಿಡಲಾಗದು. ದಾಳಿ ಮಾಡೋಣ ಎಂದರು ಎಂದು ಹೇಳಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಅಮೆರಿಕ ಉಗ್ರ ನಿಗ್ರಹ ಕೇಂದ್ರದ ನಿರ್ದೇಶಕ ಕೆಂಟ್, ಇಸ್ರೇಲ್ ಒತ್ತಡಕ್ಕೆ ಮಣಿದು ಟ್ರಂಪ್ ದಾಳಿ ಮಾಡಿದ್ದರು ಎಂದಿದ್ದರು.
ವಿಜಯ ಸಿಗುವ ತನಕ ಸಮರ, ಅವರು ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ: ಇರಾನ್
ದುಬೈ: ನಾವು ಪೂರ್ಣ ವಿಜಯಿಗಳಾಗುವವರೆಗೆ ಹೋರಾಟವನ್ನು ಮುಂದುವರೆಸುತೇವೆ' ಎಂದು ಇರಾನ್ ಸಶಸ್ತ್ರ ಪಡೆಯ ವಕ್ತಾರ ಮೇ। ಜ। ಅಲಿ ಅಬ್ದಲ್ಲಾಪಿ ಅಲಿಯಾಬಾದಿ ಹೇಳಿದ್ದಾರೆ. ಇದಲ್ಲದೆ, ಇರಾನ್ ಸೇನಾ ಸಲಹೆಗಾರ ಮೊಹಿನ್ ರೆಜ್ಜೆ, 'ಅವರು (ಅಮೆರಿಕ) ಕಣ್ಣು ತೆಗೆದರೆ ನಾವು ತಲೆ ತೆಗೀತೀವಿ' ಎಂದಿದ್ದಾರೆ. ಯುದ್ಧ ಸ್ಥಗಿತಕ್ಕೆ ಅಮೆರಿಕದ ಕಡೆಯಿಂದ ಯತ್ನಗಳು ಆರಂಭವಾಗಿರುವ ನಡುವೆ ಇರಾನ್ ಕಡೆಯಿಂದ ಇಂತಹ ಹೇಳಿಕೆ ಬಂದಿರುವುದು ಉಭಯ ದೇಶಗಳ ಮುಂದಿನ ನಡೆಯ ಬಗ್ಗೆ ಕುತೂಹಲದಿಂದ ನೋಡುವಂತೆ ಮಾಡಿದೆ. ಇರಾನ್‌ನ ಪ್ರಬಲ ಸಶಸ್ತ್ರಪಡೆಗಳು ದೇಶದ ಸಮಗ್ರತೆಯನ್ನು ರಕ್ಷಿಸುವ ದೃಢನಿಶ್ಚಯ ಹೊಂದಿವೆ ಎಂದಿದ್ದಾರೆ ಅಲ್ಲಾಹಿ.
ಜೊಲ್ಪಾದರ್ ಇರಾನ್ ಭದ್ರತಾ ಮಂಡಳಿಗೆ ನೂತನ ಮುಖ್ಯಸ್ಥ
ದುಬೈ: ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರಾಗಿ ಮೊಹಮ್ಮದ್ ಬಾಗರ್ ಜೊಲ್ಲಾದರ್ ಮಂಗಳವಾರ ನೇಮಕವಾಗಿದ್ದಾರೆ. ಇವರು ಅಮೆರಿಕದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ ಅಲಿ ಲಾರಿಜಾನಿ ಅವರ ಉತ್ತರಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮೊದಲು ಇರಾನ್ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಆಗಿದ್ದ ಜೊಲ್ಲಾದರ್, ನಂತರ ಬ್ರಿಗೇಡಿಯರ್ ಜನರಲ್ ಹುದ್ದೆಯನ್ನು ತಲುಪಿದ್ದರು. ಅವರು ಇರಾನ್‌ನ ಎಕ್ಸ್ ಪೆಡಿಯೆನಿ ಕೌನ್ಸಿಲ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ