ಒಳ್ಳೆ ಕೆಲಸಕ್ಕೆ ತನ್ನ ಬೆತ್ತಲೇ ಪೋಟೋ ಮಾರಾಟ...2 ದಿನದಲ್ಲಿ ಕೋಟಿ ಕೋಟಿ ಸಂಗ್ರಹ

By Suvarna NewsFirst Published Jan 7, 2020, 9:42 PM IST
Highlights

ಕಾಡ್ಗಿಚ್ಚಿನ ನೆರವಿಗೆ ಬೆತ್ತಲೆ ಪೋಟೋ ಮಾರಾಟ| ಈಕೆಯ ಸಂದೇಶಕ್ಕೆ ಅಭೂತಪೂರ್ವ ಪ್ರತಿಕ್ರಿಯೆ| 700 ಸಾವಿರ ಡಾಲರ್ 2 ದಿನದಲ್ಲಿ ಸಂಗ್ರಹ

ವಾಷಿಂಗ್ಟನ್(ಜ. 07)   ಆಸ್ಟ್ರೇಲಿಯಾದ ಕಾಡ್ಗಿಚ್ಚಿನ ನೆರವಿಗೆ ಈಕೆ ನಿಂತಿದ್ದಾಳೆ. ಇನ್‍ಸ್ಟಾಗ್ರಾಮ್‍ನಲ್ಲಿ ತನ್ನ ಬೆತ್ತಲೆ ಫೋಟೋ ಮಾರಾಟ ಮಾಡುವ ಮೂಲಕ ಅಮೆರಿಕ ಮೂಲದ ಯುವತಿಯೊಬ್ಬಳು ಆಸ್ಟ್ರೇಲಿಯಾ ಕಾಡ್ಗಿಚ್ಚಿಗಾಗಿ ಬರೋಬ್ಬರಿ 700 ಸಾವಿರ ಡಾಲರ್ ಸಂಗ್ರಹಿಸಿದ್ದಾಳೆ.

ಕಾಡ್ಗಿಚ್ಚಿನಿಂದ ಬೆಂದು ಹೋಗುತ್ತಿರುವ ಆಸ್ಟ್ರೇಲಿಯಾಕ್ಕಾಗಿ ಹಣ ಸಂಗ್ರಹ ಮಾಡಲು ಅಮೆರಿಕ ಮೂಲದ 20 ವರ್ಷದ ಕೇಲೆನ್ ವಾರ್ಡ್(20) ಈ ಕೆಲಸಕ್ಕೆ ಇಳಿದಿದ್ದಾಳೆ.  ‘ದಿ ನೆಕೆಡ್ ಫಿಲ್ಯಾಂಥ್ರೋಪಿಸ್ಟ್’ ಹೆಸರಿನ ಇನ್‍ಸ್ಟಾಗ್ರಾಮ್ ಖಾತೆ ಹೊಂದಿದ್ದ ಕೇಲೆನ್ ತನ್ನ ಖಾತೆಯಿಂದ ನಗ್ನ ಫೋಟೋಗಳನ್ನು ಮಾರಾಟ ಮಾಡುತ್ತಿದ್ದಳು.

ಆಸ್ಟ್ರೇಲಿಯಾ ಕಾಡ್ಗಿಚ್ಚು ಜಗತ್ತಿಗೆ ಎಚ್ಚರಿಕೆ ಘಂಟೆ

ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೆ ಸಿಲುಕಿರುವ ಆಸ್ಟ್ರೇಲಿಯಾ ಮಂದಿಗೆ ಹಾಗೂ ಪ್ರಾಣಿಗಾಳಿಗಾಗಿ ಕೇಲೆನ್ ಹಣ ಸಂಗ್ರಹ ಮಾಡಲು ತನ್ನ ನಗ್ನ ಫೋಟೋಗಳನ್ನು ಇನ್‍ಸ್ಟಾದಲ್ಲಿ ಮಾರಾಟ ಮಾಡುತ್ತಿದ್ದಳು. ಪೋಟೋವೊಂದಕ್ಕೆ 10 ಡಾಲರ್ ಕಲೆಕ್ಟ್ ಮಾಡುತ್ತಿದ್ದಳು.

ಈ ಮಹಿಳಾ ಕ್ರಿಕೆಟ್ ಗೆ ಬೆತ್ತಲಾಗುವುದೇ ಒಂದು ಫ್ಯಾಷನ್

ಈ ಬಗ್ಗೆ ಸ್ವತಃ ಕೇಲೆನ್ ತನ್ನ ಇನ್‍ಸ್ಟಾ ಖಾತೆಯಲ್ಲಿ ಸೋಮವಾರ ಪೋಸ್ಟ್ ಮಾಡಿದ್ದಳು. ನನ್ನ ಪೋಸ್ಟ್ ನೋಡಿದ ಅನೇಕರು ಆಸ್ಟ್ರೇಲಿಯಾ ಕಾಡ್ಗಿಚ್ಚಿಗೆ ಹಣ ನೀಡಿದ್ದಾರೆ ಎಂದು ತಿಳಿಸಿದ್ದಳು.

ಆಸ್ಟ್ರೇಲಿಯಾ ಕಾಡ್ಗಿಚ್ಚಿನ ರೌದ್ರನರ್ತನಕ್ಕೆ ಬಲಿಯಾಗಿದೆ. ಪ್ರಾಣಿಗಳು ಸುಟ್ಟು ಕರಕಲಾಗಿರುವ ದೃಶ್ಯ ಎಂಥವರ ಮನಸ್ಸನ್ನು ಒಂದು ಕ್ಷಣ ಕದಡುತ್ತದೆ. ಕಾಡ್ಗಿಚ್ಚಿಗೆ ಸುಮಾರು 5 ಮಿಲಿಯನ್ ಹೆಕ್ಟೇರ್ ಪ್ರದೇಶ ಸುಟ್ಟು ಭಸ್ಮವಾಗಿದೆ. 2 ಸಾವಿರಕ್ಕೂ ಹೆಚ್ಚು ಮನೆಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಇದ್ದುದರಲ್ಲಿ ಇಂದು ಮಳೆ ಬಿದ್ದಿರುವ ವರದಿಯಾಗಿದ್ದು ನಿಟ್ಟುಸಿರು ಬಿಡುವಂತೆ ಮಾಡಿದೆ.

click me!