ಪೋರ್ನ್‌ ನಟಿ ಜತೆ ಸೆಕ್ಸ್‌: ಟ್ರಂಪ್‌ ವಿರುದ್ಧ ದೋಷಾರೋಪ; ತಕ್ಷಣವೇ ಜೈಲಿಗೆ ಹೋಗ್ತಾರಾ ಅಮೆರಿಕ ಮಾಜಿ ಅಧ್ಯಕ್ಷ..?

By Kannadaprabha News  |  First Published Apr 1, 2023, 12:23 PM IST

ನೀಲಿ ಚಿತ್ರನಟಿ ಜತೆ ಸೆಕ್ಸ್‌ ಕೇಸ್‌ನಲ್ಲಿ ಟ್ರಂಪ್‌ ವಿರುದ್ಧ ದೋಷಾರೋಪ ಹೊರಿಸಲಾಗಿದೆ. ಕೇಸು ಮುಚ್ಚಿ ಹಾಕಲು ಹಣ ನೀಡಿದ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದು, ಈ ಮೂಲಕ ಕ್ರಿಮಿನಲ್‌ ಆರೋಪಕ್ಕೆ ತುತ್ತಾದ ಅಮೆರಿಕದ ಮೊದಲ ಅಧ್ಯಕ್ಷರೆಂಬ ಕುಖ್ಯಾತಿಯೂ ಕೇಳಿಬಂದಿದೆ. ಮುಂದಿನ ವಾರ ನ್ಯಾಯಾಲಯದ ಎದುರು ಟ್ರಂಪ್‌ ಶರಣಾಗುವ ಸಂಭವವಿದೆ. 


ನ್ಯೂಯಾರ್ಕ್‌ (ಏಪ್ರಿಲ್ 1, 2023): ನೀಲಿ ಚಿತ್ರಗಳ ನಟಿ ಸ್ಟಾರ್ಮಿ ಡೇನಿಯಲ್ಸ್‌ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ, ಬಳಿಕ ಆ ವಿಷಯದಲ್ಲಿ ಬಾಯಿಬಿಡದಂತೆ ಆಕೆಗೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಸಾಕಷ್ಟುಸಾಕ್ಷ್ಯಗಳಿದೆ ಎಂದು ಮ್ಯಾನ್‌ಹಟನ್‌ನ ಗ್ರ್ಯಾಂಡ್‌ ಜ್ಯೂರಿ ಗುರುವಾರ ದೋಷಾರೋಪ ಹೊರಿಸಿದೆ. ಹೀಗಾಗಿ ಟ್ರಂಪ್‌ ಮುಂದಿನ ದಿನಗಳಲ್ಲಿ ಈ ವಿಷಯದಲ್ಲಿ ವಿಚಾರಣೆ ಎದುರಿಸುವುದು ಅನಿವಾರ್ಯವಾಗಲಿದೆ. ಈ ಮೂಲಕ ಕ್ರಿಮಿನಲ್‌ ಆರೋಪ ಹೊತ್ತ ದೇಶದ ಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಟ್ರಂಪ್‌ ಪಾತ್ರರಾಗಿದ್ದಾರೆ.

2024ರ ಹೊಸ ಅಧ್ಯಕ್ಷ ಚುನಾವಣೆಗೆ ಮತ್ತೊಮ್ಮೆ ಕಣಕ್ಕಿಳಿಯಲು ಸಜ್ಜಾಗಿದ್ದ ಟ್ರಂಪ್‌ಗೆ ಈ ಪ್ರಕರಣ ಸಾಕಷ್ಟು ಮುಳುವಾಗುವ ಸಾಧ್ಯತೆ ಇದ್ದು, ಆರೋಪ ಸಾಬೀತಾದರೆ ಚುನಾವಣೆ ಸ್ಪರ್ಧೆಗೆ ಕಡಿವಾಣ ಬೀಳಲಿದೆ. ಈ ನಡುವೆ ಇದೊಂದು ರಾಜಕೀಯ ಪ್ರೇರಿತ ಪ್ರಕರಣ. ಇದರ ವಿರುದ್ಧ ಸೂಕ್ತ ಹೋರಾಟ ನಡೆಸಲಾಗುವುದು ಎಂದು ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇದೊಂದು ರಾಜಕೀಯ ವಿಚಾರಣೆ ಮತ್ತು ಇತಿಹಾಸದಲ್ಲೇ ಉನ್ನತ ಮಟ್ಟದಲ್ಲಿ ಚುನಾವಣೆಗೆ ಅಡ್ಡಿ ಮಾಡುವ ಯತ್ನ ಎಂದು ಕಿಡಿಕಾರಿದ್ದಾರೆ. ಈ ನಡುವೆ ಪ್ರಕರಣ ಸಂಬಂಧ ಡೊನಾಲ್ಡ್‌ ಟ್ರಂಪ್‌ ಮುಂದಿನ ವಾರ ನ್ಯಾಯಾಲಯದ ಎದುರು ಶರಣಾಗುವ ಸಾಧ್ಯತೆ ಇದೆ.

Tap to resize

Latest Videos

ಇದನ್ನು ಓದಿ: ಅಮೆರಿಕ ಮಾಜಿ ಅಧ್ಯಕ್ಷ ಟ್ರಂಪ್‌ ಜೈಲಿಗೆ ಹೋಗ್ತಾರೆಂದು ಕೇಳಿ ಎಕ್ಸೈಟ್‌ ಆದ ಖ್ಯಾತ ನೀಲಿ ತಾರೆ..!

ಏನಿದು ಪ್ರಕರಣ?
2006ರಲ್ಲಿ ಗಾಲ್ಫ್‌ ಪಂದ್ಯಾವಳಿಯೊಂದಕ್ಕೆ ತೆರಳಿದ್ದ ವೇಳೆ ಡೊನಾಲ್ಡ್‌ ಟ್ರಂಪ್‌ (60) ಹೋಟೆಲ್‌ನಲ್ಲಿ ನೀಲಿ ಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್‌ (27) ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಇದಾದ ಬಳಿಕ 2016ರಲ್ಲಿ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುವ ಘೋಷಣೆ ಮಾಡಿದ್ದರು. ಈ ವೇಳೆ ಸ್ಟಾರ್ಮಿ ಡೇನಿಯಲ್ಸ್‌ ತಮ್ಮ ವಿಷಯ ಬಾಯಿಬಿಟ್ಟರೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಆಕೆಯ ಬಾಯಿ ಮುಚ್ಚಿಸಲು ಟ್ರಂಪ್‌ ತಮ್ಮ ವಕೀಲರ ಮೂಲಕ 1 ಕೋಟಿ ರೂ. ನೀಡಿದ್ದರು. ಈ ನಡುವೆ 2018ರಲ್ಲಿ ಸ್ಟಾರ್ಮಿ ಡೇನಿಯಲ್ಸ್‌ ಬಿಡುಗಡೆ ಮಾಡಿದ ಪುಸ್ತಕವೊಂದಲ್ಲಿ ಡೊನಾಲ್ಡ್‌ ಟ್ರಂಪ್‌ ಜೊತೆಗಿನ ತಮ್ಮ ಲೈಂಗಿಕ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಈ ನಡುವೆ 2018ರಲ್ಲಿ ವಾಲ್‌ಸ್ಟ್ರೀಟ್‌ ಜರ್ನಲ್‌ ಪ್ರಕಟಿಸಿದ ವರದಿಯಲ್ಲಿ ಸ್ಟಾರ್ಮಿ ಡೇನಿಯಲ್‌ಳ ಬಾಯಿ ಮುಚ್ಚಿಸಲು ಡೊನಾಲ್ಡ್‌ ಟ್ರಂಪ್‌ ಹಣ ನೀಡಿದ್ದರು ಎಂದು ವರದಿ ಪ್ರಕಟಿಸಿತ್ತು. ಇದನ್ನು ಡೊನಾಲ್ಡ್‌ ಟ್ರಂಪ್‌ರ ವಕೀಲರು ಕೂಡಾ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ತಕ್ಷಣವೇ ಟ್ರಂಪ್‌ ಜೈಲಿಗೆ ಹೋಗ್ತಾರಾ?
ಇಲ್ಲ. ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಾಡಲಾದ ಆರೋಪಗಳ ಸಂಬಂಧ ಸಲ್ಲಿಸಲಾದ ಸಾಕ್ಷಿಗಳನ್ನು ಗ್ರ್ಯಾಂಡ್‌ ಜೂರಿ ತಂಡದ ಸದಸ್ಯರು ಪರಿಶೀಲಿಸಿ, ಇದು ವಿಚಾರಣೆಗೆ ಅರ್ಹ ಪ್ರಕರಣ ಎಂದು ತೀರ್ಪು ನೀಡುತ್ತಿದೆ. ಇದೀಗ ಆಗಿರುವುದು ಅದೇ ಬೆಳವಣಿಗೆ. ಮುಂದಿನ ದಿನಗಳಲ್ಲಿ ಈ ಕುರಿತು ವಿಚಾರಣೆ ನಡೆದು, ಡೊನಾಲ್ಡ್‌ ಟ್ರಂಪ್‌ಗೂ ತಮ್ಮ ವಾದ ಮಂಡಿಸಲು ಅವಕಾಶ ನೀಡಲಾಗುತ್ತದೆ. ಅಲ್ಲಿ ಡೊನಾಲ್ಡ್‌ ಟ್ರಂಪ್‌ ದೋಷಿ ಎಂದು ಸಾಬೀತಾದರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ.

ಇದನ್ನೂ ಓದಿ: ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್

2024ರ ಚುನಾವಣೆಗೆ ಸ್ಪರ್ಧೆ ಸಾಧ್ಯತೆ
ತಕ್ಷಣಕ್ಕೆ ಡೊನಾಲ್ಡ್‌ ಟ್ರಂಪ್‌ ತಮ್ಮ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಲು ನಡೆಯುವ ಚುನಾವಣೆಯಲ್ಲಿ ಭಾಗಿಯಾಗಲು ಯಾವುದೇ ಅಡ್ಡಿ ಇಲ್ಲ. ಆದರೆ ಅವರ ಮೇಲೆ ಕೇಳಿಬಂದ ಕಳಂಕವು ಅವರ ಆಯ್ಕೆಗೆ ಅಡ್ಡಿಯಾಗಬಹುದು.

ಇದನ್ನೂ ಓದಿ: ಮತ್ತೆ ಟ್ವಿಟ್ಟರ್‌ನಲ್ಲಿ ಶುರುವಾಗಲಿದೆ ಡೊನಾಲ್ಡ್‌ ಟ್ರಂಪ್‌ ಹವಾ..! ಅಮೆರಿಕ ಮಾಜಿ ಅಧ್ಯಕ್ಷರು ಹೇಳಿದ್ದೇನು..?

click me!