
ನ್ಯೂಯಾರ್ಕ್: 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಬಳಸಿ ತನ್ನ ಮೇಲೆ ಅ.1ರಂದು ಮುಗಿಬಿದ್ದ ಇರಾನ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸಿದೆ ಎನ್ನುತ್ತಿರುವಾಗಲೇ, ಇರಾನ್ ಪ್ರತಿದಾಳಿ ಎದುರಿಸುವ ಸಲುವಾಗಿ ಇಸ್ರೇಲ್ ರಕ್ಷಣೆಗೆ ಅಮೆರಿಕ ಧಾವಿಸಿದೆ. ಅತ್ಯಾಧುನಿಕ ಕ್ಷಿಪಣಿ ಹೊಡೆದುರುಳಿಸುವ ವ್ಯವಸ್ಥೆ 'ಥಾಡ್' (ಟರ್ಮಿನಲ್ ಹೈ ಅಲ್ಟಿಟ್ಯೂಡ್ ಏರಿಯಾ ಡಿಫೆನ್ಸ್) ವ್ಯವಸ್ಥೆಯನ್ನು ಇಸ್ರೇಲ್‌ನಲ್ಲಿ ನಿಯೋಜಿಸುವುದಾಗಿ, ಅದನ್ನು ಬಳಸಲು ಅಮೆರಿಕ ಸೈನಿಕರನ್ನು ಕಳುಹಿಸುವುದಾಗಿ ಅಧ್ಯಕ್ಷ ಜೋ ಬೈಡೆನ್ ಪ್ರಕಟಿಸಿದ್ದಾರೆ.
ಏನಿದು ಥಾಡ್?:
ಅಮೆರಿಕ ಹೊಂದಿರುವ ಅತ್ಯಾಧುನಿಕ, ಬಿಗಿ ಭದ್ರತೆಯ ವಾಯು ರಕ್ಷಣಾ ವ್ಯವಸ್ಥೆ. ಇದನ್ನು ಬಳಸಲು 100 ತುಕಡಿಗಳು ಬೇಕಾಗುತ್ತವೆ. ಆರು ಲಾರಿಗಳಲ್ಲಿ ಉಡ್ಡಯಕಗಳನ್ನು ಇಟ್ಟಿರಲಾಗಿರುತ್ತದೆ. ಪ್ರತಿ ಉಡ್ಡಯಕದಲ್ಲೂ ಛೇದಕ ಕ್ಷಿಪಣಿಗಳು ಇರುತ್ತವೆ. ಶಕ್ತಿಶಾಲಿ ರಾಡಾರ್ ಅನ್ನೂ ಇದು ಹೊಂದಿರುತ್ತದೆ. ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಕಂಪನಿ ಇದನ್ನು ಅಭಿವೃದ್ಧಿಪಡಿಸಿದೆ. ಅಲ್ಪ, ಮಧ್ಯಮ ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಇದು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಭೂ ವಾತಾವರಣದಿಂದ ಹೊರಗಿರುವ ಹಾಗೂ ಒಳಗಿರುವ ಎರಡೂ ಬಗೆಯ ಎದುರಾಳಿಗಳ ಕ್ಷಿಪಣಿಯನ್ನು ಹೊಡೆದುರುಳಿಸಬಲ್ಲದು. ಇಸ್ರೇಲ್ ಈಗಾಗಲೇ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದು, ಥಾಡ್‌ನಿಂದ ಮತ್ತಷ್ಟು ಬಲ ಸಿಕ್ಕಂತಾಗುತ್ತದೆ.
ಹಮಾಸ್ ವಿರುದ್ಧ ಸಮರ ಸಾರಿರುವ ಇಸ್ರೇಲ್‌ಗೆ 1 ವರ್ಷದಲ್ಲಿ ಅಮೇರಿಕಾ ಕೊಟ್ಟಿದ್ದು ಎಷ್ಟು ಕೋಟಿ
ಈಗಾಗಲೇ ಇಸ್ರೇಲ್ ಬಳಿ ಕ್ಷಿಪಣಿ, ರಾಕೆಟ್ ದಾಳಿ ತಡೆಯುವ ಐರನ್ ಡೋಮ್ ವ್ಯವಸ್ಥೆ ಇದೆಯಾದರೂ, ಇತ್ತೀಚೆಗೆ ಇರಾನ್, ಲೆಬನಾನ್, ಹೌತಿ ಉಗ್ರರು, ಇರಾಕ್‌ನಲ್ಲಿರುವ ಹಮಾಸ್ ಬೆಂಬಲಿಗರು ಏಕಕಾಲಕ್ಕೆ ದಾಳಿ ನಡೆಸಿದ ವೇಳೆ ಒಂದಿಷ್ಟು ಕ್ಷಿಪಣಿ, ರಾಕೆಟ್‌ಗಳು ಐರನ್ ಡೋಂ ವ್ಯವಸ್ಥೆ ದಾಟುವಲ್ಲಿ ಯಶಸ್ವಿಯಾಗಿದ್ದ ಕಾರಣ ಅಮೆರಿಕ ಹೆಚ್ಚುವರಿಯಾಗಿ ಥಾಡ್ ವ್ಯವಸ್ಥೆ ಕಳುಹಿಸಿ ಕೊಡುತ್ತಿದೆ.
ಲೆಬನಾನ್ ಮೇಲೆ ಇಸ್ರೇಲ್ ದಾಳಿ: 18 ಸಾವು
ದೇರ್-ಅಲ್-ಬಲಾಹ್ :ಉತ್ತರ ಲೆಬನಾನ್‌ನಲ್ಲಿ ಅಪಾರ್ಟಮೆಂಟ್‌ಗಳ ಮೇಲೆ ಇಸ್ರೇಲ್ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಲೆಬನಾನ್ ಹೇಳಿದೆ. ಹಿಜ್ಜುಲ್ಲಾ ಉಗ್ರರ ಭದ್ರ ಕೋಟೆಯಿರುವ ಪ್ರದೇಶದ ಸಮೀಪ ಐಟೋ ಗ್ರಾಮದ ಸಣ್ಣ ಅಪಾರ್ಟ್ ಮೆಂಟ್‌ಗಳ ಮೇಲೆ ವೈಮಾನಿಕ ದಾಳಿ ನಡೆದಿದೆ. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಾಗರಿಕರ ನಡುವೆ ಅಡಗಿಕೊಂಡಿರುವ ಉಗ್ರರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿದೆ.
ಇಸ್ರೇಲ್‌ನಿಂದ ಹಿಜ್ಬುಲ್ಲಾ ಕಮಾಂಡರ್ ಹತ್ಯೆ: ಪೇಜರ್, ವಾಕಿಟಾಕಿಗಳಿಗೆ ಎಮಿರೇಟ್ಸ್ ಏರ್‌ಲೈನ್ಸ್ ನಿಷೇಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ