ಕೆನಡಾ ನಿರ್ಧಾರ ಖಂಡಿಸಿ ಕೆನಡಾದಿಂದ ಎಲ್ಲ 6 ರಾಜತಾಂತ್ರಿಕರ ವಾಪಸ್‌ಗೆ ಭಾರತ ನಿರ್ಧಾರ ಕೈಗೊಂಡಿದೆ. ಇದರಿಂದ ಅವಮಾನ ಅವಮಾನಕ್ಕೆ ಒಳಗಾದ ಕೆನಡಾ, ಬಿದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತನ್ನಲ್ಲಿನ ಎಲ್ಲ 6 ಭಾರತೀಯ ದೂತರ ವಜಾಗೆ ನಿರ್ಧರಿಸಿದೆ. ಸೇರಿಗೆ ಸವ್ವಾಸೇರು ಎಂಬಂತೆ ಭಾರತವು ಇದಕ್ಕೆ ಪ್ರತಿಯಾಗಿ ಭಾರತದಲ್ಲಿನ ಕೆನಡಾ ರಾಯಭಾರಿ ಸ್ಟೀವರ್ಟ್ ರಾಸ್ ವೀಲರ್‌ಸೇರಿ ಎಲ್ಲ 6 ರಾಜತಾಂತ್ರಿಕರನ್ನು ಸೆ.19ರ ರಾತ್ರಿ 11.59ರೊಳಗೆ ಭಾರತ ಬಿಡಲು ತಾಕೀತು ಮಾಡಿದೆ.
ಟೊರಂಟೋ/ನವದೆಹಲಿ(ಅ.15): ಕೆನಡಾದಲ್ಲಿ ಸಂಭವಿ ಸಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಿಚಾರಣೆಗೆ ಬಳಪಡಿಸಲು ಕೆನಡಾದ ಜಸ್ಟಿನ್ ಟ್ರುಡೋ ನೇತೃತ್ವದ ಸರ್ಕಾರದ ನಿರ್ಧಾರ, ಉಭಯ ದೇಶಗಳ ನಡುವೆ ಭಾರೀ ರಾಜತಾಂತ್ರಿಕ ಸಮರಕ್ಕೆ ಕಾರಣವಾಗಿದೆ. ಕೆನಡಾ ಸರ್ಕಾರದ ಇಂಥ ನಿರ್ಧಾರದ ಬೆನ್ನಲ್ಲೇ ಕಂಡು ಕೇಳರಿಯದ ಭಾರಿ ಬಿರುಸಿನ ವಿದ್ಯಮಾನ ನಡೆದಿದ್ದು, ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಅಂತ್ಯಗೊಂಡಿದೆ.
ಕೆನಡಾ ನಿರ್ಧಾರ ಖಂಡಿಸಿ ಕೆನಡಾದಿಂದ ಎಲ್ಲ 6 ರಾಜತಾಂತ್ರಿಕರ ವಾಪಸ್‌ಗೆ ಭಾರತ ನಿರ್ಧಾರ ಕೈಗೊಂಡಿದೆ. ಇದರಿಂದ ಅವಮಾನ ಅವಮಾನಕ್ಕೆ ಒಳಗಾದ ಕೆನಡಾ, ಬಿದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತನ್ನಲ್ಲಿನ ಎಲ್ಲ 6 ಭಾರತೀಯ ದೂತರ ವಜಾಗೆ ನಿರ್ಧರಿಸಿದೆ. ಸೇರಿಗೆ ಸವ್ವಾಸೇರು ಎಂಬಂತೆ ಭಾರತವು ಇದಕ್ಕೆ ಪ್ರತಿಯಾಗಿ ಭಾರತದಲ್ಲಿನ ಕೆನಡಾ ರಾಯಭಾರಿ ಸ್ಟೀವರ್ಟ್ ರಾಸ್ ವೀಲರ್‌ಸೇರಿ ಎಲ್ಲ 6 ರಾಜತಾಂತ್ರಿಕರನ್ನು ಸೆ.19ರ ರಾತ್ರಿ 11.59ರೊಳಗೆ ಭಾರತ ಬಿಡಲು ತಾಕೀತು ಮಾಡಿದೆ. ಈ ವಿದ್ಯಮಾನಗಳ ಬಳಿಕ ನಿಜ್ಜರ್ ಹತ್ಯೆ ಬಳಿಕ ಹಳಸಿದ್ದ ಭಾರತ-ಕೆನಡಾ ಸಂಬಂಧವು ಮತ್ತಷ್ಟು ಹದಗೆಟ್ಟಂತಾಗಿದೆ.
ಅಮೆರಿಕ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಡಿಎನ್‌ಎ ಪತ್ತೆ? ಶತಮಾನಗಳ ಜನ್ಮ ರಹಸ್ಯ ಈಗ ಬಯಲು!
ಏನಿದು ಸಂಘರ್ಷ?
ಕಳೆದ ವರ್ಷ ಸಂಭವಿಸಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸಲ್ಲಿ ಭಾರತದ ರಾಯಭಾರಿ ವಿರುದ್ಧ ತನಿಖೆಗೆ ನಿರ್ಧರಿಸಿದ ಕೆನಡಾ ಸರ್ಕಾರ
• ಭಾರತದ ಆಕ್ರೋಶ: ಕೆನಡಾದಿಂದ ತಕ್ಷಣ ಎಲ್ಲ 6 ರಾಜತಾಂತ್ರಿಕರ ವಾಪಸ್‌ಗೆ ಕೇಂದ್ರದ ನಿರ್ಧಾರ . ಅದರ ಬೆನ್ನಲ್ಲೇ ಎಲ್ಲ ಭಾರತೀಯ ರಾಜತಾಂತ್ರಿ ಕರನ್ನೂ ಉಚ್ಚಾಟಿಸಿದ ಕೆನಡಾದ
ಟ್ರುಡೋ ಸರ್ಕಾರ
• ಭಾರತದಿಂದಲೂ ಸಡ್ಡು: ಇಲ್ಲಿರುವ ಎಲ್ಲ 6 ಕೆನಡಾ ರಾಜತಾಂತ್ರಿಕರನ್ನು ಉಚ್ಚಾಟನೆ ಮಾಡಿ ಆದೇಶ ಹೀಗಾಗಿ ಭಾರತ ಮತ್ತು ಕೆನಡಾ ನಡುವೆ ಇದ್ದ ರಾಜತಾಂತ್ರಿಕ ಸಂಬಂಧವೇ ಸದ್ಯಕ್ಕೆ ಅಂತ್ಯ