ಆಫ್ಘಾನ್ ಹಿಂದೂ, ಸಿಖ್ಖರಿಗೆ ಆಶ್ರಯ ನೀಡಿದ ಭಾರತ ನಿರ್ಧಾರ ಹೊಗಳಿದ ಅಮೆರಿಕ ಕಾಂಗ್ರೆಸ್ಸಿಗ!

By Suvarna NewsFirst Published Jul 24, 2020, 9:32 PM IST
Highlights

ಆಫ್ಘಾನ್ ಹಿಂದೂ ಹಾಗೂ ಸಿಖ್ಖರಿಗೆ ಆಶ್ರಯ ನೀಡಿದ ಭಾರತದ ನಿರ್ಧಾರವನ್ನು ಅಮೆರಿಕ ಕಾಂಗ್ರೆಸ್ಸಿಗ ಜಿಮ್ ಕೋಸ್ಟಾ ಹೊಗಳಿದ್ದಾರೆ. ಉಗ್ರರ ಕಪಿಮುಷ್ಟಿಯಿಂದ ಸಮುದಾಯವನ್ನು ರಕ್ಷಿಸಲು ಭಾರತ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಅಮೆರಿಕ(ಜು.24): ಆಫ್ಘಾನಿಸ್ತಾನದ ಹಿಂದೂಗಳು ಹಾಗೂ ಸಿಖ್ಖರಿಗೆ ಆಶ್ರಯ ನೀಡಿದ ಭಾರತದ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜುಲೈ 23ರಂದು ಆಫ್ಘಾನ್ ರಾಜಧಾನಿ ಕಾಬೂಲ್‌ನಲ್ಲಿರುವ ಇಂಡಿಯನ್ ಮಿಶನ್ ಹಿಂದೂ ಹಾಗೂ ಸಿಖ್ಖ್‌ರಿಗೆ ಆಶ್ರಯ ನೀಡಿದೆ. ಇಷ್ಟೇ ಅಲ್ಲ ಭಾರತಕ್ಕೆ ಮರಳಲು ವಿಸಾ ವ್ಯವಸ್ಥೆಯನ್ನು ಮಾಡಿದ್ದಾರೆ. 

ದಿಲ್ಲಿಯ ಪಾಕಿಸ್ತಾನ ಹಿಂದೂ ನಿರಾಶ್ರಿತ ಕ್ಯಾಂಪ್‌ಗೆ ಧವನ್ ಭೇಟಿ!

ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಕಾಂಗ್ರೆಸ್ಸಿಗ ಜಿಮ್ ಕೋಸ್ಟಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಉಗ್ರರ ಕಪಿಮುಷ್ಠಿಯಲ್ಲಿರುವ ಹಿಂದೂ ಹಾಗೂ ಸಿಖ್ಖರಿಗೆ ಭಾರತದ ಆಶ್ರಯ ನೀಡಿರುವುದು ಉತ್ತಮ ನಿರ್ಧಾರ. ಸಮುದಾಯದ ರಕ್ಷಿಸಲು ಭಾರತದ  ದಿಟ್ಟ ಹೆಜ್ಜೆ ಎಂದು ಜಿಮ್ ಕೋಸ್ಟಾ ಹೇಳಿದ್ದಾರೆ.

ಅಫ್ಘಾನಿಂದ ಭಾರತಕ್ಕೆ ಆಗಮಿಸಲಿರುವ ನಿರಾಶ್ರಿತರಿಗೆ ಭಾರತದ ವಿದೇಶಾಂಗ ಇಲಾಖೆ ನಿಯಮದನುಸಾರ ವ್ಯವಸ್ಥೆ ಮಾಡಲಾಗುತ್ತದೆ. ಕೊರೋನಾ ವೈರಸ್ ಹೆಮ್ಮಾರಿಯ ನಡುವೆ ಬಂದಿರುವ ಮನವಿಗಳನ್ನು ಪುರಸ್ಕರಿಸಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್ ಹೇಳಿದ್ದಾರೆ.

2019ರ ಪೌರತ್ವ ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಈ ಆಫ್ಘಾನ್ ಹಿಂದೂ ಹಾಗೂ ಸಿಖ್ ಸಮುದಾಯದ ಮಂದಿಗೆ ಪೌರತ್ವ ನೀಡಲಾಗುತ್ತದೆ ಅನ್ನೋ ಕುರಿತು ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. 

click me!