ಭಾರತೀಯರು ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕು..!

Kannadaprabha News   | Asianet News
Published : Jul 24, 2020, 02:24 PM ISTUpdated : Jul 24, 2020, 02:31 PM IST
ಭಾರತೀಯರು ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕು..!

ಸಾರಾಂಶ

ಅಮೆರಿಕದಲ್ಲಿ ಭಾರತೀಯರು ಶಾಶ್ವತವಾಗಿ ನೆಲೆಸಲು ಗ್ರೀನ್ ಪಡೆಯಲು ಅರ್ಜಿ ಹಾಕಿ 195 ವರ್ಷ ಕಾಯಬೇಕು ಎಂದು ರಿಪಬ್ಲಿಕನ್‌ ಸಂಸದರೊಬ್ಬರು ಹೇಳಿದ್ದಾರೆ. ಇದರ ಜತೆಗೆ ಈ ನಿಯಮಾವಳಿಯನ್ನು ಸಡಿಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

ವಾಷಿಂಗ್ಟನ್(ಜು.24)‌: ವಿದೇಶಿಗರಿಗೆ ಅಮೆರಿಕದ ಶಾಶ್ವತ ಪೌರತ್ವಕ್ಕೆ ಬೇಕಾಗುವ ಗ್ರೀನ್‌ ಕಾರ್ಡ್‌ ಪಡೆಯಲು ಇರುವ ಈಗಿನ ನಿಯಮಾವಳಿಗಳ ಪ್ರಕಾರ, ಈಗಾಗಲೇ ಅರ್ಜಿ ಸಲ್ಲಿಸಿರುವ ಭಾರತೀಯರಿಗೆ ಇನ್ನೂ 195 ವರ್ಷಗಳು ಬೇಕಾಗುತ್ತದೆ ಎಂದು ಅಮೆರಿಕ ರಿಪಬ್ಲಿಕನ್‌ ಸಂಸದರೊಬ್ಬರು ಹೇಳಿದ್ದಾರೆ. ಅಲ್ಲದೇ ಈಗಿರುವ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ರಹಸ್ಯ ಕಾದಿಡಲು ಇನ್ನಷ್ಟು ಚೀನಾ ರಾಯಭಾರ ಕಚೇರಿ ಬಂದ್‌: ಟ್ರಂಪ್‌

ವಲಸೆ ನೌಕರರ ಬಗ್ಗೆ ಸದನದಲ್ಲಿ ನಡೆದ ಚರ್ಚೆ ಈ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿರುವ ಸೆನೇಟರ್‌ ಮೈಕ್‌ ಲೀ, ಈಗಿರುವ ಗ್ರೀನ್‌ ಕಾರ್ಡ್‌ ನಿಯಮಾವಳಿಗಳಿಂದ ಅರ್ಜಿ ಸಲ್ಲಿಸಿರುವವರ ಮಕ್ಕಳಿಗೂ ಗ್ರೀನ್‌ ಕಾರ್ಡ್‌ ಸಿಗುವುದಿಲ್ಲ. ಅವರಿಗೆ ಅಮೆರಿಕದ ಪೌರತ್ವ ಸಿಗುವುದು ಕನಸಿನ ಮಾತು. ವಲಸೆ ನೀತಿಯಿಂದಾಗಿ ತಾತ್ಕಾಲಿಕ ಕೆಲಸದಲ್ಲಿರುವವರಿಗೆ ತೊಂದರೆಯಾಗುತ್ತಿದೆ.ಇದರಿಂದ ಹಲವು ಕುಟುಂಬಗಳು ವಲಸೆ ಕಾರ್ಡ್‌ ಕಳೆದುಕೊಳ್ಳುವ ಭೀತಿ ಇದೆ. ಹೀಗಾಗಿ ವಲಸೆ ಹಾಗೂ ಗ್ರೀನ್‌ ಕಾರ್ಡ್‌ ನಿಯಮಾವಳಿಗಳನ್ನು ಪರಿಷ್ಕರಿಸುವ ಜರೂರತ್ತು ಇದೆ ಎಂದು ಹೇಳಿದ್ದಾರೆ.

ವಲಸಿಗರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಯೂರಲು ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಈಗಿರುವ ನಿಯಮದಂತೆ ಈಗ ಅರ್ಜಿ ಸಲ್ಲಿಸಿದರೂ ಅಮೆರಿಕ ಪೌರತ್ವ ಪಡೆಯಲು 195 ವರ್ಷ ಕಾಯಬೇಕಾಗುತ್ತದೆ. 2019ನೇ ಆರ್ಥಿಕ ವರ್ಷದಲ್ಲಿ ಭಾರತೀಯರು ಉದ್ಯೋಗದ ಕಾರಣದಿಂದ 16 ಸಾವಿರಕ್ಕೂ ಅಧಿಕ ಅಮೆರಿಕ ವೀಸಾ ಪಡೆದಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನೆತನ್ಯಾಹು ಪ್ರಧಾನಿ ಮೋದಿಗೆ ಕರೆ ಮಾಡಿ ಮಾತುಕತೆ: ಭಯೋತ್ಪಾದನೆ ವಿರುದ್ಧ ದೊಡ್ಡ ನಿರ್ಧಾರ!
ಸ್ಲಿಮ್ ಆಗೋಕೆ ಹೋಗಿ ಆರೋಗ್ಯವೇ ಹೋಯ್ತು: 11691 ರೂ ಪಾವತಿಸಿ ತೂಕ ಇಳಿಕೆ ಇಂಜೆಕ್ಷನ್ ಪಡೆದಾಕೆಗೆ ಆಘಾತ