
ವಾಷಿಂಗ್ಟನ್: ಭಾರತ ನುಡಿದಂತೆ ನಡೆದಿದೆ. ಹೀಗಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಲು ನಾವು ಅವರಿಗೆ ಅನುಮತಿ ನೀಡಿದ್ದೇವೆ. ತೈಲ ಈಗಾಗಲೇ ಸಮುದ್ರ ಮಾರ್ಗದಲ್ಲಿದೆ ಎಂದು ಅಮೆರಿಕ ಹೇಳಿದೆ.
ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅಮೆರಿಕ ವಿತ್ತ ಸಚಿವ ಸ್ಕಾಟ್ ಬೆಸ್ಸೆಂಟ್, ‘ಭಾರತೀಯರು ನುಡಿದಂತೆ ನಡೆದಿದ್ದಾರೆ. ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಈ ಹಿಂದೆ ನಾವು ಅವರನ್ನು ಕೇಳಿದ್ದೆವು. ಅವರು ಹಾಗೆಯೇ ಮಾಡಿದರು. ಆದರೆ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ನಾವು ಸೀಮಿತ ಅವಧಿಗೆ ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಅನುಮತಿಸಿದ್ದೇವೆ’ ಎಂದರು.
ರಷ್ಯಾ ತೈಲ ಖರೀದಿಸಲು ಭಾರತಕ್ಕೆ ಅನುಮತಿ ನೀಡಿದ್ದೇವೆ ಎಂದು ಅಮೆರಿಕ ಹೇಳಿದ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಕಿಡಿ ಕಾರಿದೆ. ಟ್ವೀಟ್ ಮಾಡಿರುವ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಸ್ವಯಂ ಘೋಷಿತ 56 ಇಂಚಿನ ಎದೆಗಾರಿಕೆ ಎಷ್ಟು ಹೇಡಿತನದಿಂದ ಕೂಡಿದೆ ಮತ್ತು ರಾಜಿಯಾಗಿದೆ ಎಂಬುದಕ್ಕೆ ಇನ್ನೇನಾದರೂ ಸಾಕ್ಷಿ ಬೇಕೆ?’ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ