ಟೇಕ್ ಆಫ್ ಬೆನ್ನಲ್ಲೇ ಕಳಚಿದ ಚಕ್ರದಿಂದ ವಿಮಾನ ತುರ್ತು ಭೂಸ್ಪರ್ಶ, ಹಲವು ಕಾರುಗಳು ಅಪ್ಪಚ್ಚಿ!

By Suvarna NewsFirst Published Mar 8, 2024, 5:14 PM IST
Highlights

249 ಪ್ರಯಾಣಿಕರನ್ನು ಹೊತ್ತ ವಿಮಾನ ರನ್‌ವೇ ಮೂಲಕ ಸಾಗಿ ಟೇಕ್ ಆಫ್ ಆಗಿತ್ತು. ಆದರೆ ಆಗಸಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ವಿಮಾನದ ಚಕ್ರವೊಂದು ಕಳಚಿ ಬಿದ್ದಿದೆ. ಇತ್ತ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಈ ಅವಘಡದಿಂದ ಹಲವು ಕಾರುಗಳು ಜಖಂ ಗೊಂಡಿದೆ. ಭಯಾನಕ ವಿಡಿಯೋ ವೈರಲ್ ಆಗಿದೆ.
 

ಲಾಸ್ ಎಂಜೆಲ್ಸ್(ಮಾ.08) ಬೋಯಿಂಗ್ 777 ವಿಮಾನ 249 ಪ್ರಯಾಣಿಕರನ್ನು ಹೊತ್ತು ಟೇಕ್ ಆಫ್ ಆಗಿತ್ತು. ಆದರೆ ವಿಮಾನ ಆಗಸಕ್ಕೆ ಹಾರಿದ ಬೆನ್ನಲ್ಲೇ ಚಕ್ರವೊಂದು ಕಳಚಿ ಕೆಳಕ್ಕೆ ಬಿದ್ದಿದೆ. ಈ ಚಕ್ರ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಬಿದ್ದಿದೆ. ಇತ್ತ ಕಾರುಗಳು ಅಪ್ಪಚ್ಚಿಯಾಗಿದ್ದರೆ, ಟೇಕ್ ಆಫ್ ಆದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಈ ಘಟನೆ ನಡೆದಿದೆ. 

ಜಪಾನ್ ಮೂಲದ ಬೋಯಿಂಗ್ 777 ಜೆಟ್‌ಲೈನರ್ ವಿಮಾನ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. 249 ಪ್ರಯಾಣಿಕರನ್ನು ಹೊತ್ತ ಈ ವಿಮಾನ ಟೇಕ್ ಆಫ್ ಆಗಿತ್ತು. ವಿಮಾನ ಟೇಕ್ ಆಫ್ ಆಗಿ ಆಗಸದತ್ತ ಹಾರಿತ್ತು. ಇನ್ನೇನು ವಿಮಾನದ ಚಕ್ರಗಳು ಮಡಚಿಕೊಳ್ಳಬೇಕು ಅನ್ನುವಷ್ಟರಲ್ಲೇ ವಿಮಾನದ ಒಂದು ಚಕ್ರ ಕಳಚಿ ಕೆಳಕ್ಕೆ ಬಿದ್ದಿದೆ.

ವಿಮಾನ ಪ್ರಯಾಣದಲ್ಲೂ ಬಿಡದ ಪಕ್ಕಾ ಲೋಕಲ್ ಚಟ, ಬೀಡಿ ಸೇದಿದ ಪ್ರಯಾಣಿಕ ಅರೆಸ್ಟ್!

ಮೇಲಿನಿಂದ ರಭಸವಾಗಿ ಬಿದ್ದ ವಿಮಾನದ ಚಕ್ರ ನೇರವಾಗಿ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳ ಕಾರು ಪಾರ್ಕಿಂಗ್ ಸ್ಥಳದಲ್ಲಿ ಬಿದ್ದಿದೆ. ಸಂಪೂರ್ಣ ಕಾರುಗಳು ಪಾರ್ಕಿಂಗ್ ಮಾಡಲಾಗಿತ್ತು. ಈ ರಭಸಕ್ಕೆ ಹಲವು ಕಾರುಗಳು ಅಪಚ್ಚಿಯಾಗಿದೆ. ಆದರೆ ಕಾರಿನಲ್ಲಾಗಲಿ, ಪಾರ್ಕಿಂಗ್ ಸ್ಥಳದಲ್ಲಾಗಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. 

 

✈️United flight UA35 diverted to Los Angeles today after losing a wheel on takeoff 🚨 Via

View 's data at
https://t.co/F63EfWkMAN pic.twitter.com/0bSSQE6UKu

— RadarBox (@RadarBoxCom)

 

ವಿಮಾನದ ಚಕ್ರ ಕಳಚಿ ಬೀಳುತ್ತಿದ್ದಂತೆ ವಿಮಾನ ಅಲರಾಂ ನೀಡಿದೆ. ಇದರಿಂದ ವಿಮಾನದೊಳಗಿದ್ದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ತಕ್ಷಣವೇ ವಿಮಾನ ಪೈಲೆಟ್‌ಗೆ ಸಂದೇಶ ನೀಡಲಾಗಿದೆ. ವಿಮಾನ ಮತ್ತೆ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ವರ್ಶ ಮಾಡಲು ಅವಕಾಶ ಮಾಡಿದ್ದಾರೆ. ವಿಮಾನ ಲ್ಯಾಡಿಂಗ್ ವೇಳೆಯೂ ಎಚ್ಚರಿಕೆ ವಹಿಸಲಾಗಿದೆ. ಒಂದು ಚಕ್ರ ಕಳಚಿ ಬಿದ್ದಿರುವ ಕಾರಣ ಲ್ಯಾಂಡಿಂಗ್ ವೇಳೆ ಆಗುವ ಅನಾಹುತ ತಡೆಯಲು ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಆ್ಯಂಬುಲೆನ್ಸ್, ಅಗ್ನಿಶಾಮಕದಳ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ವಿಮಾನ ನಿಲ್ದಾಣದಲ್ಲಿ ಮಾಡಲಾಗಿತ್ತು.

ವೀಲ್‌ಚೇರ್‌ ಸೇವೆ ಇಲ್ಲದೆ ವೃದ್ಧ ಸಾವು, ಏರ್‌ಇಂಡಿಯಾಗೆ 30 ಲಕ್ಷ ದಂಡ ವಿಧಿಸಿದ ಡಿಜಿಸಿಎ!

ಅನುಭವಿ ಪೈಲೆಟ್ ಯಶಸ್ವಿಯಾಗಿ ವಿಮಾನ ಇಳಿಸಲಾಗಿತ್ತು. ಬಳಿಕ ವಿಮಾನದ ಪ್ರಯಾಣಿಕರನ್ನು ವಿಮಾನದಿಂದ ಇಳಿಸಲಾಗಿದೆ. ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಇತ್ತ ಬೋಯಿಂಗ್ 777 ಜೆಟ್‌ಲೈನ್ ವಿಮಾನವನ್ನು ಸರಿಪಡಿಸಲಾಗಿದೆ. ಇದೀಗ ಸುರಕ್ಷತಾ ಚೆಕ್ ಅಪ್ ಮಾಡಲಾಗಿದೆ.

 

Breaking News: United Flight 35 Diverts to LAX After Losing Wheel During Takeoff! Airline Videos Live Coverage - March 7th, 2024 pic.twitter.com/pAIvPwwXJL

— AIRLINE VIDEOS (@airlinevideos)

 

click me!